ನಾಲ್ಕಾಣೆ ಹಾಕುತ್ತಿದ್ದವರು ನೋಟು ಹಾಕುತ್ತಿದ್ದಾರೆ: ಪ್ರಧಾನಿ

0
392

ರಾಷ್ಟ್ರೀಯ ಪ್ರತಿನಿಧಿ ವರದಿ
500ರೂ. ಮತ್ತು 1000ರೂ. ನೋಟುಗಳ ಬ್ಯಾನ್ ಹಿನ್ನಲೆಯಲ್ಲಿ ಜನತೆಗೆ ತೊಂದರೆಯಾದರೂ ಜನಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಮರ್ಥಿಸಿದ್ದಾರೆ.
 
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನೋಟ್ ಬ್ಯಾನ್ ನ್ನು ಸಹಿಸಿಕೊಂಡ ದೇಶವಾಸಿಗಳಿಗೆ ನಮಸ್ಕಾರ ತಿಳಿಸಿದ್ದಾರೆ. ಗಂಗಾ ನದಿಗೆ ನಾಲ್ಕಾಣೆ ನಾಣ್ಯ ಹಾಕಿ ಕೈಮುಗಿಯುತ್ತಿದ್ದರು. ಈಗ 500, 1000ರೂ. ನೋಟು ಹಾಕಲಾರಂಭಿಸಿದ್ದಾರೆ ಎಂದು ಪ್ರಧಾನಿ ಮೋದಿಯವರು ಕಪ್ಪುಹಣ ಹೊಂದಿದವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
 
 
 
ನೋಟು ಬ್ಯಾನ್ ಕ್ರಮಕ್ಕೆ ನನಗೆ ದೇಶದ ಸಾಮಾನ್ಯ ಜನರಿಂದ ಆಶೀರ್ವಾದ ದೊರತಿದೆ. 2.5 ಲಕ್ಷ ರೂ. ಜಮಾ ಮಾಡುವವರಿಗೆ ತೊಂದರೆ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
 
 
ಡಿಸೆಂಬರ್ 30ರ ವರೆಗೆ ಯಾರಿಗೂ ತೊಂದರೆ ಆಗಲ್ಲ. ತೊಂದರೆ ಆಗುತ್ತಿರುವುದು ಕಪ್ಪು ಹಣ ಹೊಂದಿದವರಿಗೆ. ಕಪ್ಪು ಹಣ ಹೊಂದಿರುವವರನ್ನು ಮಾತ್ರ ಸುಮ್ಮನೆ ಬಿಡಲ್ಲ. ಈ ಹಿಂದೆಯೂ ಅವರಿಗೆ ಒಂದು ಅವಕಾಶ ನೀಡಿದ್ದೇವು. ಕಪ್ಪುಹಣ ಘೋಷಣೆಗೆ ಅವಕಾಶ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ. ಕಪ್ಪುಹಣ ಹೊಂದಿರುವವರು ಕಷ್ಟ ಅನುಭವಿಸುತ್ತಾರೆ ಎಂದು ಪ್ರಧಾನಿ ಕಪ್ಪುಹಣ ಹೊಂದಿದವರಿಗೆ ಹೆದರಿಕೆಯ ಮಾತು ನುಡಿದಿದ್ದಾರೆ.

LEAVE A REPLY

Please enter your comment!
Please enter your name here