ನಾಲ್ಕನೇ ವರುಷದ ಉಚಿತ ಶಿಬಿರ

0
314

ಕಾಸರಗೋಡು ಪ್ರತಿನಿಧಿ ವರದಿ
ಆಸಕ್ತ ಅಭ್ಯರ್ಥಿಗಳಿಗೆ ಇಲ್ಲಿದೆ ವಿಫುಲ ಅವಕಾಶ
ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.)ಸಂಸ್ಥೆಯ ಆಶ್ರಯದಲ್ಲಿ ನಾಲ್ಕನೇ ವರುಷದ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಸಂಸ್ಕೃತಿ ಶಿಬಿರ ಎಚ್.ಎಚ್.ಎಸ್.ಐ.ಬಿ. ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಸ್ಕೂಲ್ ಎಡನೀರಿನಲ್ಲಿ ಏಪ್ರಿಲ್ 16ರಿಂದ 20ರ ತನಕ ನಡೆಯಲಿದೆ. ಸಂಪೂರ್ಣ ಉಚಿತವಾಗಿ ನಡೆಯುವ ಈ ಶಿಬಿರಕ್ಕೆ ಪ್ರವೇಶಾತಿ ಆರಂಭಗೊಂಡಿದೆ. ಆಸಕ್ತರು ಏಪ್ರಿಲ್ 10ರೊಳಗಾಗಿ ಹೆಸರು ನೋಂದಾಯಿಸಲು ಅವಕಾಶವಿದೆ.
ಕಥೆ, ಕವನ, ಭಾಷಣ, ಪ್ರಬಂಧ ರಚನೆ, ನಾಟಕ, ಅಭಿನಯ, ಚಿತ್ರಕಲೆ, ಮುಖವಾಡ ರಚನೆ, ಸಮೂಹ ಗಾಯನ, ರಂಗಗೀತೆ, ದೇಶಭಕ್ತಿಗೀತೆ, ಭಜನೆ ಮೊದಲಾದ ಚಟುವಟಿಕೆಗಳನ್ನು ಶಿಬಿರದಲ್ಲಿ ನಡೆಸಲಾಗುತ್ತಿದೆ. ನುರಿತ ಅನುಭವೀ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.
bhoomika vaarte1
ಉಚಿತ ಅವಕಾಶ
ಐದು ದಿನಗಳ ಕಾಲ ನಡೆಯಲಿರುವ ಈ ಶಿಬಿರ ಸಂಪೂರ್ಣ ಉಚಿತವಾಗಿರುತ್ತದೆ. 10ರಿಂದ 16ವರ್ಷದ ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 5ರ ತನಕ ಶಿಬಿರ ನಡೆಯುವುದು. ಆಸಕ್ತರು ದೂರವಾಣಿ ಸಂಖ್ಯೆ 09447375191, 08281388999 ಸಂಪರ್ಕಿಸಿ ಹೆಸರು ನೋಂದಾಯಿಸಬಹುದೆಂದು ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಇದರ ನಿರ್ದೇಶಕಿ ಅನುಪಮಾ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಘಾಟನೆ
ಏಪ್ರಿಲ್ 16ರಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ಶ್ರೀಮದ್ ಎಡನೀರು ಮಠದ ಪರಮಪೂಜ್ಯ ಶ್ರೀಶ್ರೀಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಶಿಬಿರಕ್ಕೆ ಚಾಲನೆ ನೀಡುವರು.
ಉದ್ಯಮಿ ರಾಮ ಪ್ರಸಾದ್ ಕಾಸರಗೋಡು, ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಅಭ್ಯಾಗತರಾಗಿ ಭಾಗವಹಿಸುವರು. ಏಪ್ರಿಲ್ 20ರ ಮಧ್ಯಾಹ್ನ 2ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷ ಯಂ.ವಿ. ಮಹಾಲಿಂಗೇಶ್ವರ ಭಟ್ ವಹಿಸುವರು. ಲೇಖಕಿ ಪ್ರಸನ್ನಾ ವಿ. ಚೆಕ್ಕೇಮನೆ ಅಭ್ಯಾಗತರಾಗಿ ಪಾಲ್ಗೊಳ್ಳುವರು.
ವಿಷು ವಿಶೇಷ – ನೃತ್ಯ ಸಿಂಚನ
ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.) ಇದರ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಇವರ ಶಿಷ್ಯೆಯರಿಂದ ಏಪ್ರಿಲ್ 14 ರ ಸಾಯಂಕಾಲ 5ಕ್ಕೆ ವಿಷು ವಿಶೇಷ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ. ಟಿ.ಶ್ಯಾಮ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಪಾರ್ತಿಸುಬ್ಬ ಯಕ್ಷಗಾತನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಂ ಮಂಜತ್ತಾಯ ಶುಭಾಶಂಸನೆ ಗೈಯುವರು. ರಾತ್ರಿ 9ರಿಂದ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ(ರಿ.)ಎಡನೀರು ಇವರಿಂದ ಚಕ್ರವರ್ತಿ ದಶರಥ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here