ನಾರಿಮನ್ ರನ್ನು ಶೀಘ್ರವೇ ಬದಲಾಯಿಸಿ

0
420

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಪರ ವಕೀಲ ನಾರಿಮನ್ ವಿರುದ್ಧ ಕೆ ಎಸ್ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಯವಿಟ್ಟು ರಾಜ್ಯದ ಪರ ವಕೀಲ ಫಾಲಿ ಎಸ್ ನಾರಿಮನ್ ರನ್ನು ಶೀಘ್ರವೇ ಬದಲಾಯಿಸಿ ಎಂದು ವಿಧಾನಪರಿಷತ್ ನಲ್ಲಿ ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.
 
 
 
ತೀರ್ಪು ಬಳಿಕ ಪುಸ್ತಕ ಬಿಸಾಕಿ ಹೋಗಲು ಇವರು ಬೇಕಾ? ಬೇಕಾದಷ್ಟು ಮೇಧಾವಿ ವಕೀಲರು ನಮ್ಮಲ್ಲಿಯೇ ಇದ್ದಾರೆ. ಫಾಲಿ ಎಸ್ ನಾರಿಮನ್ ರಿಂದ ರಾಜ್ಯಕ್ಕೆ ಏನು ಉಪಯೋಗವಾಗಿಲ್ಲ. ಕಾವೇರಿ ವಿಚಾರವಾಗಿ ವಕೀಲರಿಗೆ 76 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಷ್ಟು ಹಣ ಖರ್ಚು ಮಾಡಿದರೂ ನಕಾರಾತ್ಮ ತೀರ್ಪು ಸಿಕ್ಕಿದೆ. ವಕೀಲ ಫಾಲಿ ಎಸ್ ನಾರಿಮನ್ ರನ್ನು ಕೂಡಲೇ ಬದಲಾಯಿಸುವಂತೆ ಈಶ್ವರಪ್ಪ ಒತ್ತಾಯಿಸಿದ್ದಾರೆ.
 
 
 
ಕೆ ಎಸ್ ಈಶ್ವರಪ್ಪ ಹೇಳಿಕೆಗೆ ರಾಮಚಂದ್ರೇಗೌಡ ವ್ಯಂಗ್ಯವಾಡಿದ್ದಾರೆ. ವಕೀಲರಿಗೆ ನೀರಿದ್ದ ಹಣದಲ್ಲಿ ಭೂಮಿ ಖರೀದಿಸಬಹುದಿತ್ತು. ಕಾವೇರಿ ಹರಿಯುವ ಅಕ್ಕಪಕ್ಕದ ತಮಿಳುನಾಡಿನ ಭೂಮಿ ಖರೀದಿಸಬಹುದಿತ್ತು.
 
 
ಕೇಂದ್ರ ಸರ್ಕಾರಕ್ಕೆ ಬಿಜೆಪಿ ಸದಸ್ಯ ವಿ.ಸೋಮಣ್ಣ ಅಭಿನಂದನೆ ಸಲ್ಲಿಸಿದ್ದಾರೆ. ಅಟಾರ್ನಿ ಜನರಲ್ ಅಫಿಡವಿಟ್ ಸಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ವೇಳೆ ಸಭಾನಾಯಕ ಡಾ.ಜಿ ಪರಮೇಶ್ವರ್ ವ್ಯಂಗ್ಯವಾಗಿದ್ದಾರೆ. ಕಳೆದ ಬಾರಿ ತೀರ್ಪು ನೀಡಿದ್ದಾಗ ಇದನ್ನು ಹೇಳಬೇಕಿತ್ತು. ಮೂರು ದಿನದಲ್ಲಿ ಮಂಡಳಿ ರಚಿಸುತ್ತೇವೆಂದು ಒಪ್ಪಿಕೊಂಡಿದ್ದೇಕೆ. ಒಪ್ಪಿಕೊಂಡು ಬಂದು ಗೊಂದಲ ಸೃಷ್ಟಿ ಮಾಡಿದವರ್ಯಾರು..? ಎಂದು ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.
 
 
ಈ ವೇಳೆ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಮಧ್ಯಪ್ರವೇಶಿಸಿದ್ದಾರೆ. ಅಟಾರ್ನಿ ಜನರಲ್ 2 ನೇ ನಾರಿಮನ್ ಆಗಿದ್ದಾರೆ. ನಾರಿಮನ್ 100 ಬಾರಿ ತಪ್ಪು ಮಾಡಿದ್ರೂ ಸುಮ್ಮನಿದ್ದೀರಿ. ಒಂದು ಬಾರಿ ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದಾರೆ’, ಹೀಗಾಗಿ ಇವರನ್ನು ಕ್ಷಮಿಸಬಹುದು. ನಾರಿಮನ್ ಕರ್ನಾಟಕವನ್ನು ಹಾಳು ಮಾಡುತ್ತಿದ್ದಾರೆ ಎಂದು ನಾರಿಮನ್ ವಿರುದ್ಧ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here