ನಾಯಕತ್ವದಲ್ಲಿ ನಂಬಿಕೆಯಿರಲಿ, ಸಂದೇಹ ಬೇಡ

0
1102

ರೋಟರಿ ಟೆಂಪಲ್‌ಟೌನ್ ಪದಗ್ರಹಣ
ಮೂಡುಬಿದಿರೆ : ಸಂಘಟನೆಯ ನಾಯಕತ್ವ ವಹಿಸಿದವರು ಒಗ್ಗಟ್ಟಿಗೆ ಆದ್ಯತೆ ನೀಡಬೇಕು. ಸಂಘಟನೆಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು ಸೃಜನಾತ್ಮಕವಾದ ಚಿಂತನೆಯಾಗಿದೆ. ನಾಯಕತ್ವದಲ್ಲಿ ನಂಬಿಕೆಯಿರಬೇಕು. ಸಂದೇಹವಿರಬಾರದು ಎಂದು ರೋಟರಿ ಜಿಲ್ಲೆ ೩೧೮೧ರ ಡಿಜಿಎನ್ ಪ್ರಕಾಶ್ ಕಾರಂತ ಹೇಳಿದರು.
ಕೀರ್ತಿನಗರದ ರೋಟರಿ ಟೆಂಪಲ್‌ಟೌನ್ ಸಭಾಭವನದಲ್ಲಿ ಗುರುವಾರ ನಡೆದ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್‌ನ ೨೦೨೦-೨೧ನೇ ಸಾಲಿನ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಉಪರಾಜ್ಯಪಾಲ ಡಾ| ಯತಿಕುಮಾರ ಸ್ವಾಮಿಗೌಡ, ಅಜಯ್ ಗ್ಲೆನ್ ಡಿಸೋಜ ಸಂಪಾದಕತ್ವದಲ್ಲಿ ಪ್ರಕಟಿಸಿದ ರೋಟೌನ್ ಬುಲೆಟಿನ್ ಅನ್ನು ಬಿಡುಗಡೆಗೊಳಿಸಿದರು. ಝೋನಲ್ ಲೆಫ್ಟಿನೆಂಟ್ ಬಲರಾಮ್ ಕೆ.ಎಸ್., ಜಿಎಸ್‌ಆರ್ ಡಾ| ಹರೀಶ್ ನಾಯಕ್ ಶುಭ ಹಾರೈಸಿದರು. ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‌ನ ನಿರ್ಗಮನ ಅಧ್ಯಕ್ಷ ಡಾ| ಮಹಾವೀರ ಜೈನ್ ಅಧ್ಯಕ್ಷತೆ ವಹಿಸಿದ್ದರು. ನೂತನ ಸದಸ್ಯರಾಗಿ ಸೇರಿದ ಸುಧೀಶ್ ಕುಮಾರ್ ಅವರನ್ನು ಕ್ಲಬ್‌ಗೆ ಬರಮಾಡಿಕೊಳ್ಳಲಾಯಿತು. ಜಿಲ್ಲಾ ಸಮಿತಿಗೆ ಆಯ್ಕೆಯಾದ ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ಯುವರಾಜ್ ಜೈನ್, ಉಮೇಶ್ ರಾವ್, ವಿನ್ಸೆಂಟ್ ಡಿ’ಕೋಸ್ತ, ಡಾ| ಮಹಾವೀರ ಜೈನ್ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಅನಾರೋಗ್ಯದಲ್ಲಿರುವ ಪ್ರಾಂತ್ಯದ ಸುಕುಮಾರ್, ಕೊಡ್ಯಡ್ಕದ ಸುಜಯ್ ಕುಮಾರ್, ಪ್ರತಿಭಾವಂತ ವಿದ್ಯಾರ್ಥಿ ಶರಣ್‌ಗೆ ವಿದ್ಯಾರ್ಥಿವೇತನ, ಹೋಲಿ ರೋಜರಿ ಪ್ರೌಢಶಾಲೆಗೆ ಕಂಪ್ಯೂಟರ್, ಮಹಾವೀರ ಕಾಲೇಜಿಗೆ ಸ್ಯಾನಿಟೈಸರ್ ಸಾಧನ, ಬಾಲಕಿ ಬೇಬಿ ಅಕ್ಷಿತಾಗೆ ವೈದ್ಯಕೀಯ ಚುಚ್ಚುಮದ್ದನ್ನು ನೀಡಲಾಯಿತು. ರಾಜೇಶ್ ಬಂಗೇರಾ ಅತಿಥಿಗಳನ್ನು ಗೌರವಿಸಿದರು. ಡಾ| ಮಹಾವೀರ ಜೈನ್, ಎಂ.ಕೆ. ಹರೀಶ್, ಡಿಜಿಎನ್ ಪ್ರಕಾಶ್ ಕಾರಂತ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ವಂದಿಸಿದರು. ಡಾ| ಅಮರ್‌ದೀಪ್, ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here