ನಾನು ಹಸ್ತಕ್ಷೇಪ ಮಾಡಿಲ್ಲ

0
268

 
ಬೆಂಗಳೂರು ಪ್ರತಿನಿಧಿ ವರದಿ
ಮಡಿಕೇರಿಯಲ್ಲಿ ಡಿವೈಎಸ್ ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಾಜಿ ಗೃಹ ಖಾತೆ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.
 
 
ಮಾಧ್ಯಮದೊಂದಿಗೆ ಮಾತನಾಡಿದ ಹಾಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್, ಗಣಪತಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಪ್ರತಿಪಕ್ಷಗಳು ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ಪ್ರಕರಣ ತನಿಖೆಯಿಂದಷ್ಟೇ ಎಲ್ಲವೂ ತಿಳಿಯಬೇಕಾಗಿದೆ. ಅಧಿಕಾರಿಗೆ ಮಾನಸಿಕ ಕಿರುಕುಳ ನೀಡುವ ಪ್ರಶ್ನೆಯೇ ಬರಲ್ಲ ಎಂದಿದ್ದಾರೆ.
 
 
ನಾನು ಗೃಹ ಸಚಿವನಾಗಿದ್ದಾಗ ಎಂ.ಕೆ.ಗಣಪತಿ ಅವರು ಪಿಐ ಆಗಿದ್ದರು. ಗಣಪತಿಗೆ ಹುದ್ದೆ ನೀಡಿಲ್ಲ ಎಂಬುದರಲ್ಲಿ ಅರ್ಥವಿಲ್ಲ. ಕೇಸ್ ವೊಂದರ ಸಂಬಂಧ ಎಂ.ಕೆ.ಗಣಪತಿ ಅವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಮಾನತುಗೊಳಿಸಿದ್ದರು. ಅಮಾನತಾಗಿದ್ದಾಗ ನನ್ನನ್ನು ಗಣಪತಿ ಭೇಟಿಯಾಗಿದ್ದರು. ಆಗ ನಾನು ಇಲಾಖೆಯ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದಿದೆ. ಹಲವು ಇನ್ಸ್ ಪೆಕ್ಟರ್ಸ್, ಡಿವೈಎಸ್ ಪಿಗಳು ಕೆಲಸ ಮಾಡುತ್ತಾರೆ. ಇಲಾಖಾ ತನಿಖೆಯಲ್ಲಿ ಗೃಹ ಸಚಿವನಾಗಿ ಹಸ್ತಕ್ಷೇಪ ಮಾಡಲ್ಲ ಎಂದು ಎಂ.ಕೆ.ಗಣಪತಿ ಅವರಿಗೆ ನಾನು ಪ್ರತಿಕ್ರಿಯೆ ನೀಡದ್ದೆ. ಇದನ್ನು ಬಿಟ್ಟರೆ ಮತ್ತೆಂದಿಗೂ ಎಂ.ಕೆ.ಗಣಪತಿಯವರನ್ನು ಸಂಪರ್ಕಿಸಿಲ್ಲ. ನನ್ನನ್ನು ಭೇಟಿಯಾಗಿಲ್ಲ, ಫೋನ್ ಕೂಡ ಮಾಡಿಲ್ಲ. ನಾನು ಕಿರುಕುಳ ನೀಡಿದ್ದಕ್ಕೆ ಯಾವುದಾದ್ರೂ ಸಾಕ್ಷಿ ಬೇಕಲ್ವೇ. ನಾನು ಅವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಜಾರ್ಜ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here