ನಾದ ಲೋಲುಡೈ ಬ್ರಹ್ಮಾನಂದ ಮಂದಮೇ

0
442

ಮಸೂರ ಅಂಕಣ: ಆರ್ ಎಂ ಶರ್ಮಾ
ನಾದ ಧ್ವನಿ ಶಬ್ದ ಇದು ದೈವ ಪರದೈವ ಪರಾತ್ಪರ.
ಇಲ್ಲಿ ವಿಷಾದವೇ-ವಿನೋದವೇ-ಮೋದವೇ-ಮೇಧಾವೇ-
ಇದೇ ಸಧ್ಯಃ ನಮ್ಮ ಚಿಂತನೆ-ಚಿಂತೆ-ವ್ಯಥೆ-
ಅದೇ ಕಥೆ ಇನ್ನುಮುಂದಕ್ಕೆ ಈ ನಮ್ಮ ಪ್ರಸ್ತುತಿಯಲ್ಲಿ ನಿಮ್ಮ ಮುಂದೆ.
ಇದು ಪೂವ೯ಕಥಾ ಸಂಗತಿಃ.
ಕರ್ನಾಟಕ ಸಂಗೀತದ ಮಹಾನ್ ಚೇತನಗಳಾದ-
ಶ್ರೀತ್ಯಾಗರಾಜ ಸ್ವಾಮಿಗಳು,
ಶ್ರೀಮುತ್ತುಸ್ವಾಮಿ ದೀಕ್ಷಿತರು,
ಶ್ರೀ ಶ್ಯಾಮಾ ಶಾಸ್ತ್ರಿಗಳು,
ಅನನ್ಯ-ಅನ್ಯೋನ್ಯ-ಅಮೂಲ್ಯ-ಮಾನ್ಯ-ಸನ್ಮಾನ್ಯ ಕೃತಿಗಳನ್ನು ರಚಿಸಿ-ಹಾಡಿದರು-ಹೊಗಳಿದರು-ಪರದೈವವನ್ನು ಬಗೆಬಗೆಯಲ್ಲಿ.
ಅವೆಲ್ಲಾ ಅಮೋಘ ದೇಣಿಗಳಾಗಿ ಶಾಸ್ತ್ರೀಯ-ಸಂಗೀತ-ಕನಾ೯ಟಕ ಸಂಗೀತದ-ಅಡಿಪಾಯ-ಎಲ್ಲಾ ಅಪಾಯಗಳನ್ನೂ ದೂರಮಾಡುವ-ಮಾಡಿಸುವ ಸುಲಭೋಪಾಯ-
ಇವೆಲ್ಲಾ ಶಿವಪ್ರಿಯ,ಜನಪ್ರಿಯ ಸಿಮಾಪಾರವಾಗಿ ನಿತ್ಯ,ನಿರಂತರ ಸಂಭ್ರಮ-ಭ್ರಮೆಯಿಲ್ಲ ಇದು ಸತ್ಯ-ಸತ್ಯಾತ್ ಸತ್ಯ.
ಸಂಗೀತ-
“ಸತ್ಯಂ ಶಿವಂ ಸುಂದರಂ”.
ಇಲ್ಲಿ ಸತ್ಯವಿದೆ,ಮಂಗಳವಿದೆ ಸೌಂದಯ೯ವಿದೆ.
ನೋಡುವ ಕಣ್ಣಿರಲು,ಕೇಳುವ ಕಿವಿಯಿರಲು-“ಎಲ್ಲೆಲ್ಲೂ ಸಂಗಿತವೇ ಸಂಗಾತಿಯು-ಗತಿಯು-ಮತಿಯು-ನೀತಿಯು”.
ಸಂಗೀತದಿಂದ ಜನಹಿತಕ್ಕೆ ಮಳೆತರಿಸಿದ ಸಿದ್ಧಪುರುಷರು ಆಗಿಹೋದರು.
ಸಂಗೀತದಿಂದ ದೀಪಹತ್ತಿಸಿದ ಚೇತನಗಳು ಮರೆಯಾದರು.
ಸಂಗೀತದಿಂದ-ಗಿಡಮರಗಳು ಚನ್ನಾಗಿ ಬೆಳೆಯುತ್ತವೇ ಎಂತ ಸಿದ್ಧಾಂತ ಸ್ಥಾಪಿಸಿದ ಅಪ್ರಮೇಯರು ಆಗಿಹೋದರು.
ಸಂಗೀತದಿಂದ-ಕಲೆ-ಬೆಲೆ-ಬಲ-ಬಾಳು ಇವೆಲ್ಲಾ ಆ ಪರಬ್ರಹ್ಮದ ವಿರಾಟ್ ಸ್ವರೂಪ ಅಷ್ಟೇ.
ಸಂಗೀತದ ನವನವೀನ ಆಯಾಮ-ಆರೋಗ್ಯ ಸುಧಾರಣೆಗೆ-ವೈದ್ಯೋಪಚಾರಕ್ಕೆ-ರಾಗ! ಇನ್ನಿಲ್ಲ ರೋಗ?
ಇದು ಯೋಗವೇ-ಭೋಗವೇ-ಚಚಿ೯ಸೋಣಮುಂದಕ್ಕೆ.
ದೇಶೀಯರು-ವಿದೇಶಿಯರು-ಎಗ್ಗಿಲ್ಲದೆ ಒಪ್ಪಿದರು ಸಂಗೀತದ ಔಷಧೀಯ ಗುಣಗಳನ್ನು-ಅನುಷ್ಠಾನಕ್ಕೂ ತಂದರು.
ಸಂಗೀತದಿಂದ-ಇಂಪಾದ ಹಾಡು-ರಾಗ ಹಾಲುಕರೆಯುವಾಗ ಹಸು-ಪ್ರಸನ್ನ-ಪ್ರಫುಲ್ಲ-ಯಥೇಛ್ಚ ಹಾಲು ಒದಗಣೆ.
ಶ್ರೀಕೃಷ್ಣ ಕೊಳಲನು ಊದಿದ-ಗೋಪಿಯರ ಮನವನ್ನು ಕದ್ದ-ಗೆದ್ದ-ಒಯ್ದ.
ಪ್ರಸಿದ್ಧ ಕನ್ನಡದ ಕವಿ ಶ್ರೀ ಪು.ತಿ.ನ. ತಮ್ಮ ಅದ್ಭುತ ಕಾವ್ಯ-“ಗೋಕುಲ ನಿಗ೯ಮದಲ್ಲಿ”-
ಹಾಡಿದರು-“ಕೃಷ್ಣ ಕೊಳಲಿನ ಕರೆ-ಆಲಿಸು-ಜಗವನ್ನು ಮರೆಯುವ-ಮರೆಸುವ ಅನನ್ಯ ಭಂಡಾರ ಐಶ್ವಯ೯ ಎಂದರು.
ಈಗ-“ಮ್ಯೂಸಿಕ್ ಥೆರಪಿ”- ಮಾಡಿಸುತ್ತಿದೆ-“ಲೈಫ಼್ ಹ್ಯಾಪಿ.”
ಕೋಪಿ-ಕನ್ನಡದಲ್ಲಿ ಮುನಿಸಿನ ಜನ ಅಥ೯ದಲ್ಲಿ,
– ಸಂಸ್ಕೃತದಲ್ಲಿ ಯಾರೋ ಒಬ್ಬ ಅಥ೯ದಲ್ಲಿ,
ನಿಷ್ಥೆ ಇಲ್ಲದ-ಶಿಷ್ಟವಿಲ್ಲದ-ಪ್ರಥಿಷ್ಟೆಯ ಚೇಷ್ಟೆಗಳು- ಚೇಷ್ಟಿಗಳು-
ನಾದವನ್ನು ಉನ್ಮಾದವೆಂದು ಅವಮಾನಿಸಿದರು.
ಅದನ್ನು ಅನುಮಾನಿಸಿದರು-ಹೀಯಾಳಿಸಿದರು.
ಈಗ್ಯೂ ಈ ಚರಿತೆ ಇದ್ದದ್ದೇ.
ಇರಲಿ,-“ಲೋಕೋ ಭಿನ್ನರುಚಿಃ”-ಅದೇ ಸಮಾಧಾನ-ಸಂವಿಧಾನ,
ಅಲ್ಲೇ ಸಂಧಾನ,ಸನ್ನಿಧಾನ, ಮಾನ ಎಲ್ಲಾ-ಎಲ್ಲೆಲ್ಲೂ-ಯಾವಾಗಲೂ.
ಲೋಕೋದ್ಧಾರಕರು ಹೇಳಿದರು-ಹಳಿದರು-“ನಾದ ಪ್ರಿಯನಲ್ಲ ಶಿವ”.
ಮುಂದಕ್ಕೆ ಹೋದರು ಹಿಂದಕ್ಕೆ ಬಿಟ್ಟರು-ನಾದವೂ ಅಲ್ಲ,ವೇದವೂ ಅಲ್ಲ,ಕೇವಲ ಭಕ್ತಿ-ಶಿವನಿಗೆ ಪ್ರಿಯ ಎಂದರು.
ಭಕ್ತಿಗೆ ಸಾಧನ,ಸಲಕರಣೆ,ಅನುಕರಣೆ,ಆಚರಣೆ ಹೇಗೆ?
ಹಾಡು-ಗಾಯನ-ಸಂಗೀತ-ನಾದ ಆಗದೇ-ಆಗಬಾರದೇ-ಆಗಿಸಲ್ಪಡಬಾರದೇ ಉಪಾಯ.
ಇದು ಆಗದೇ ಅಪಾಯಕ್ಕೆ ಪರಿಹಾರ? ಉಪಚಾರ?
ಹಾಗಿದ್ದಮೇಲೆ ಎಕೀ ಪ್ರಹಾರ-ಎನೀ ವಿಚಾರ?
ಇದೇನು ದುರಾಚಾರವೇ-ಅನಾಚಾರವೇ ಹೇಳಿ ನೀವು ಓದುಗ ಮತಿಗಳು-ಮುತ್ತುಗಳು-ಮಾಣಿಕ್ಯರು-ಚಾಣಕ್ಯರು.ನಾವೀಗ ವಿಶೇಷವಾಗಿ ಶ್ರೀಮತ್ ಭಗವದ್ಗೀತೆಯಲ್ಲಿ ಸ್ವಯಮ್ ಪರಮಾತ್ಮನ ಸ್ಪಷ್ಟ ಮಾತುಗಳನ್ನು ನಾದದ ಬಗೆಗೆ(ಭಕ್ತಿಯ ಸಾಧನೆ)ಅಲ್ಲಿನ ಕೆಲವು ಶ್ಲೋಕಗಳನ್ನು ಪ್ರಸ್ತುತ ಪಡಿಸುತ್ತಾ ಹೇಳುತ್ತೇವೆ-
ಅಧ್ಯಾಯ ೯, ಶ್ಲೋಕಗಳು-
೧೪,೨೨,೨೭,೨೯,೩೩,
ಇಲ್ಲೆಲ್ಲಾ ಇರುವುದು-ಭಕ್ತಿಗೆ-ಭಜನೆ,ಗಾಯನ ನಾದೋಪಾಸನೆ,ಚಿಂತನೆ,ತನ್ಮಯತೆ,ತಲ್ಲೀನತೆ,ಸಂಧಾನ,ಅನುಸಂಧಾನ ಇವೇ ಸಾಧನಗಳು,ಸಮಾಧಾನಗಳು ಫಲಪ್ರಾಪ್ತಿಗೆ.
ದ್ವಾಪರದ ಅವತಾರ ಯುಗಕಳೆದಂತೆ ಕಲಿಯುಗದ ಜೀವ,ಜೀವನಗಳು ಲೋಕೋದ್ಧಾರಕನ ಮಾತುಗಳನ್ನು ಅಲ್ಲಗಳೆಯಲು,ಇಲ್ಲವಾಗಿಸಲು,ನಿರಾಕರಿಸುವುದು-
“ಸಾಧುವೇ? ಸಾಧ್ಯವೇ? ಸಿಂಧುವೇ?”
ಒಂದೇ ಉತ್ತರ “ನಹಿ ಏತತ್ ಉಚಿತಂ!”
ಸಾರಾಂಶದಲ್ಲಿ ಅನುಚಿತ ಅಷ್ಟೇ.
ಕೆಲ ೨೦ ನೇ ಶತಮಾನದ ಮಹನೀಯರು ಹಾಡಿದರು-
“ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ”- ಎಂತ-
ಅಲ್ಲಿಗೆ ನಾದ ನಿನಾದ ಮೋದ ಮೇಧಾ ಎಲ್ಲಾ.
ತೆಗಳಿದವರು-ಮೂದಲಿಸಿದವರು ಮತ್ತೆ ಬಂದರು ಬಿಚ್ಚಿದರು ಇನ್ನೊಂದು ವರಸೆ-
“ಎನ್ನ ಶಿರವ ಬುರುಡೆಯ ಮಾಡಿ, ನರಗಲನ್ನು ತಂತಿ ಮಾಡಿ ಎಂತೆಲ್ಲಾ”-
ಇಲ್ಲಿ ಸಂಗೀತ ವಾದ್ಯ ವೀಣೆ-ತಂತಿ ಇತ್ಯಾದಿ ಇವೆಲ್ಲಾ ಯಾವ ಪುರುಷಾಥ೯ಕ್ಕೆ ಹೇಳಿ ಮತಿವಂತರೆ?
ಜಗದ ಉದ್ದಗಲಕ್ಕೆ ನಾದಕ್ಕೆ ಮಣೆಹಾಕಿ ಮಯಾ೯ದೆ ಮಾಡುವ,ಮಾಡಿಸುವ ರೀತಿ ರಿವಾಜುಗಳು ಊಜಿ೯ತವಿವೆ.
ಭಾರತದ ಕೇಂದ್ರ ಸರಕಾರ,ರಾಜ್ಯ ಸರಕಾರಗಳು ಅನ್ಯ ಪ್ರತಿಷ್ಟಾನಗಳೂ,ಸಂಘಸಂಸ್ಥೆಗಳು,
ಭಾರತದ ಹೊರಗೆ ವಿದೇಶಿ ಸಂಸ್ಥೆಗಳು,ಸರಕಾರಗಳು, ಇವೆಲ್ಲಾ ನಾದಕ್ಕೆ ಮಣಿದು ದುಡಿದವರಿಗೆ,ದಣಿದವರಿಗೆ-
ಮೆಚ್ಚುಗೆ,ಬಿರುದು,ಸನದು,ನಗದು ಎಲ್ಲಾ ಪ್ರದಾನ ಮಾಡಿದವೇ ಪ್ರಧಾನ ಸಂಗತಿಗಳುಂಟು.
ಉಪಸಂಹಾರವಾಗಿ ಹೇಳುವುದೆಂದರೆ, ನಾದಕ್ಕೆ ಲೋಕ, ನಾಕ ಎಲ್ಲಾ ಕೈಮುಗಿದದ್ದೇ ಪರಮಸತ್ಯ.
ನಾದದಲ್ಲಿ ಬ್ರಹ್ಮ,ನಾದದಲ್ಲಿ ವೇದ, ನಾದದಲ್ಲಿ ಮೇಧಾ, ನಾದದಲ್ಲಿ ಸುಧಾ ಎಲ್ಲಾ ನಿತ್ಯ ನಿರಂತರ.
ಕಾಳಿದಾಸ ಹೇಳಿದ-“ನಹಿ ಸಂತಿ ಯಾಥಾಥ್ಯ೯ವಿದಃ ಪಿನಾಕಿನಃ”- ಎಂತ-
ಅಥಾ೯ತ್ ಶಿವನ ಬಗ್ಗೆ ಎಲ್ಲಾ ಬಲ್ಲವರಿಲ್ಲ ಎಂತ.
ಸ್ರೀಮದ್ರಾಮಯಣದ ಕವಿಚಿತ್ತ ಹೇಳಿತು-
“ಶೃಣ್ವನ್ ರಾಮಕಥಾನಾದಂ ಕೋ ನಯಾತಿ ಪರಾಂ ಗತಿಂ”- ಎಂದರೆ-
ರಾಮಕಥಾಶ್ರವಣ ಮೋಕ್ಷಕ್ಕೆ ಸೋಪಾನ.
ಹೇಳಿಕೇಳಿ ಪರಾತ್ಪರ ಸಕಲ ಕಲಾ ವಲ್ಲಭ, ೬೪ ಕಲೆಗಳ ಒಡೆಯ/ಒಡತಿ-
ಹಾಗಿದ್ದರೂ ಅದು ಹೇಗೆ ನಾದಕ್ಕೆ ಹೊರತು?
ಗೀತಾಚಾಯ೯ನು ಹೇಳಿದ ಬುದ್ಧಿಮಾತು-
“ಅಶೋಚ್ಯಾನ್ ಅನ್ವಶೋಚಸ್ತ್ವಂ,ಪ್ರಜ್ನಾ~ವಾದಾಂಶ್ಚ ಭಾಷಸೇ”-
ಇಲ್ಲಿ ಸತ್ವಪೂಣ೯ವಾಗಿ,ಸತ್ಯವಾಗಿ ಹೇಳುವುದು ಅನಿವಾಯ೯-ಅಪರಿಹಾಯ೯ ಕೂಡಾ.
ಮಾಹಾಮಹಿಮ ತ್ಯಾಗರಾಜರು ಹಾಡಿದರು-ಕೈಮುಗಿದರು-
“ನಾದಾ ತನುಮನಿಶಂ ಶಂಕರಂ”-
ಶಂಕರ ಕಿಂಕರರಿಂದ,ಭಯಂಕರರಿಂದ-ಮೂಲೆಗುಂಪಾಗಿಸಲ್ಪಟ್ಟು,ಮೂದಸಿಲ್ಪಟ್ಟು ದೂರದ ನಾಡು ಕೈಲಾಸದಲ್ಲಿ ಸೈ ಎಂತ ಕೂತಿರುವುದೇ-
ವಿಸ್ಮಯ,ವಿನೋದ, ವಿಷಾದ.
ಲಯಕಾರ ಲಯತಪ್ಪಿದ,ತಪ್ಪಿಸಿದವರ ಒಪ್ಪಮಾಡುವುದೇ ಈಗ ಬೇಕಿರುವ ಪರಿಹಾರ.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here