ನಾಗಚೈತನ್ಯ-ಸಮಂತಾ ನಿಶ್ಚಿತಾರ್ಥ: ಶೀಘ್ರದಲ್ಲೇ ವಿವಾಹ

0
283

 
ವರದಿ: ಲೇಖಾ
ಟಾಲಿವುಡ್​ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಹಾಗೂ ಸ್ಟಾರ್ ನಟಿ ಸಮಂತಾ ವಿವಾಹವಾಗುತ್ತಿದ್ದು, ಜುಲೈ ಅಂತ್ಯ ಅಥವಾ ಅಗಸ್ಟ್ ಮೊದಲವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ತಿಳಿಸಿದ್ದಾರೆ.
 
 
 
ದಕ್ಷಿಣ ಭಾರತದ ನಟಿಯರಲ್ಲಿ ಮುಂಚುಣಿಯಲ್ಲಿರುವ ನಟಿ ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸುದ್ದಿ ಸಮಂತ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಈ ವಿಚಾರವಾಗಿ ಹಲವು ದಿನಗಳಿಂದ ಹರಿದಾಡುತ್ತಿದ್ದ ಗಾಳಿ ಸುದ್ದಿಗೆ ಇದೀಗ ಬಲ ಬಂದಿದ್ದು, ನಾಗಾರ್ಜುನ ಕಿರಿಯ ಪುತ್ರ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
 
 
 
ಸಹೋದರ ನಾಗಚೈತನ್ಯ ಹಾಗೂ ಸಮಂತ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆ ಆಗಲು ನಿರ್ಧರಿಸಿದ್ದಾರೆ. ಇದಕ್ಕೆ ಎರಡು ಕುಟುಂಬಗಳು ಸಹಮತಿ ಸೂಚಿಸಿವೆ, ಮುಂದಿನ ವರ್ಷ ವಿವಾಹ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
 
 
 
ಈ ಮಧ್ಯೆ ಅಖಿಲ್ ಅಕ್ಕಿನೇನಿ ಹೈದರಾಬಾದ್ ಮೂಲದ ವಿನ್ಯಾಸಗಾರ್ತಿ ಶ್ರೀಯಾ ಸೋಮ್ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅಕ್ಕಿನೇನಿ ಇದನ್ನು ತಳ್ಳಿದ್ದು, ಶ್ರೀಯಾ ತಮ್ಮ ಕುಟುಂಬದ ಸ್ನೇಹಿತೆಯಾಗಿದ್ದಾಳೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here