'ನಮ್ಮ ಕ್ಯಾಂಟೀನ್' ಹೆಸರು ಬದಲಾಯಿಸಿ

0
344

ಬೆಂಗಳೂರು ಪ್ರತಿನಿಧಿ ವರದಿ
‘ನಮ್ಮ ಕ್ಯಾಂಟೀನ್’ ಹೆಸರು ಬದಲಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ನಮ್ಮ ಕ್ಯಾಂಟೀನ್ ಹೆಸರು ಬದಲಾವಣೆಗೆ ಸಹಿ ಸಂಗ್ರಹ ಅಭಿಯಾನ ಶುರುವಾಗಿದೆ.
 
 
‘ನಮ್ಮ ಇಂದಿರಮ್ಮ ಕ್ಯಾಂಟೀನ್’ ಎಂದು ಹೆಸರಿಡುವಂತೆ ಸಹಿ ಸಂಗ್ರಹವಾಗುತ್ತಿದೆ. ಕಾಂಗ್ರೆಸ್ ಶಾಸಕ ಮುನಿರತ್ನ ಅವರು ಸಹಿ ಸಂಗ್ರಹದ ಉಸ್ತುವಾರಿ ವಹಿಸಿದ್ದಾರೆ. ಸಹು ಸಂಗ್ರಹಣೆಯ ಮೂಲಕ ‘ನಮ್ಮ ಇಂದಿರಮ್ಮ ಕ್ಯಾಂಟೀನ್’ ಎಂದು ಹೆಸರಿಡುವಂತೆ ಒತ್ತಾಯಿಸಲಾಗುತ್ತದೆ.
 
 
 
ಇಂದಿರಮ್ಮ ಕ್ಯಾಂಟೀನ್ ಗೆ ಹಲವು ಸಚಿವರು, ಶಾಸಕರು ಬೆಂಬಲ ನೀಡಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ, ಎಸ್ ಟಿ ಸೋಮಶೇಖರ್, ಶಾಸಕ ಮುನಿರತ್ನ ಹಾಗೂ ಎನ್ ಎ ಹ್ಯಾರೀಸ್ ಬೆಂಬಲ ನೀಡಿದ್ದಾರೆ. ಸಿಎಂಗೆ ಸಹಿ ಸಂಗ್ರಹದ ಪತ್ರ ನೀಡಿ ಒತ್ತಡ ಹೇರಲು ಸಿದ್ಧತೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here