ನಮ್ಮೂರು ಪ್ರವೇಶಿಸಿದ 'ಅಲ್ಟಿಮೇಟ್ ಲಕ್ಸುರಿ' ಕಾರು

0
148

 
ನಮ್ಮ ಪ್ರತಿನಿಧಿ ವರದಿ
ಪರಶುರಾಮ ಸೃಷ್ಟಿಯ ಒಂದು ಭಾಗವಾದ ಮಂಗಳೂರಿನ ಐಷಾರಾಮಿ ಜೀವನಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಸುಮಾರು 7.18 ಕೋಟಿ ರೂ.ವಿನ ಐಷಾರಾಮಿ ಕಾರು ಶುಕ್ರವಾರದಂದು ಮಂಗಳೂರು ನಗರವನ್ನು ಪ್ರವೇಶಿಸಿದೆ.
 
ಅಮೆರಿಕ ನಿರ್ಮಿತ “ಆಸ್ಟಿನ್ ಮಾರ್ಟಿನ್ ವಾಂಖಿಸ್” ಕಾರನ್ನು ಮಂಗಳೂರಿನ ಉದ್ಯಮಿ ಅರ್ಜಿನ್ ಮೋರಸ್ ಅವರು ಖರೀದಿಸಿದ್ದಾರೆ.
 
 
ಏನಿದರ ವಿಶೇಷತೆ…
ರಿವರ್ಸ್ ಗೇರ್ ಸಹಿತ ಆಟೋ ಮ್ಯಾಟಿಕ್ 9 ಗೇರ್ ಗಳನ್ನು ಹೊಂದಿರುವ ಈ ಕಾರು 201 ಕಿ.ಮೀ.ಟಾಪ್ ಸ್ಪೀಡ್ ನಲ್ಲಿ ಒಂದು ಗಂಟೆಗೆ 250ರಿಂದ 300 ಕಿಮೀ ವೇಗದಲ್ಲಿ ಚಲಿಸುತ್ತದೆ. 3.6 ಸೆಕೆಂಡ್ ನಲ್ಲಿ 60 ಮೀಟರ್ ದೂರ ಹೋಗುವಷ್ಟು ಸಾಮರ್ಥ್ಯ ಕೂಡ ಹೊಂದಿದ್ದು, ವಿ-12 ಎಂಜಿನ್ ಕೂಡ ಒಳಗೊಂಡಿದೆ.
 
 
ಅಲ್ಟಿಮೇಟ್ ಲಕ್ಸುರಿ ಎಂದು ಈ ಕಾರನ್ನು ಕರೆಯಲಾಗುತ್ತಿದ್ದು, ಈ ಕಾರನ್ನು ಸಂಪೂರ್ಣ ಮಾನವನಿರ್ಮಿತವಾಗಿದೆ. ಆಸ್ಟೀನ್ ಕಂಪನಿಯಲ್ಲಿ ವಾಂಟಿಕ್, ರ್ಯಾಪಿಡ್, ಡಿಬಿ ಲೆವೆನ್ ವಾಂಖಿಸ್ ಎಂಲ್ಕು ಮೋಡೆಲ್ ಗಳಿದ್ದು, ಇದರಲ್ಲಿ ಆಸ್ಟಿನ್ ಮಾರ್ಟಿನ್ ವಾಂಖಿಸ್ ಟಾಪ್ ಮೋಡಲ್ ಆಗಿದೆ.
 
 
 
ಭಾರತದಲ್ಲಿ ಈಗಾಗಲೇ ಮೊದಲ ಎರಡು ಕಾರನ್ನು ಮುಂಬೈ ಮತ್ತು ಚೆನ್ನೈಯ ಉದ್ಯಮಿಗಳು ಖರೀದಿಸಿದ್ದು, ಮೂರನೇ ಕಾರನ್ನು ಕರಾವಳಿ ಉದ್ಯಮಿ ಖರೀದಿಸಿದ್ದಾರೆ. ಈಗಾಗಲೇ ಕಂಪನಿ ವಿಶ‍್ವಾದ್ಯಂತ 85 ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here