ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ

0
1846

ಮಾನ್ಯ ಮುಖ್ಯಮಂತ್ರಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ಬದುಕು ಫೌಂಡೇಷನ್‌ ಮುಖ್ಯಸ್ಥ ಶಿವು ದೊಡ್ಡಮನಿ ನೀಡಿದ ಮನವಿ ಹೀಗಿದೆ.
ಮಾನ್ಯರೇ, ಶಾಲೆಗಳನ್ನು ತೆರೆಯುವುದು ನಿಮ್ಮ ಕೊನೆಯ ಆಪ್ಶನ್ ಆಗಿರಲಿ. ಖಾಸಗಿ ಶಾಲೆಗಳ ಲಾಬಿಗೆ ಒಳಗಾಗಿ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡೋದು ಬೇಡ. ನೀವೇನೇ ಹೇಳಿದರೂ ಮಕ್ಕಳು ಮಕ್ಕಳೇ. ಅವರಿಗೆ ಸಾಮಾಜಿಕ ಅಂತರ, ಮುಟ್ಟದೆ ಇರೋದು, ಸ್ವಚ್ಛತೆ ಅದೆಲ್ಲ ಅಷ್ಟು ಸುಲಭವಾಗಿ ಅರ್ಥವಾಗೋಲ್ಲ, ಅವುಗಳು ಒಂದಕ್ಕೊಂದು ಕೈ ಕೈ ಹಿಡಿದು ಆಟ ಆಡಿಕೊಂಡು , ಪೆನ್ಸಿಲ್ ರಬ್ಬರ್, ಪೆನ್, ತಿಂಡಿ, ನೀರು ಇತ್ಯಾದಿ ಶೇರ್ ಮಾಡ್ಕೊಂಡು ಹಾಗೆ ಜಗಳ ತುಂಟತನ ಮಾಡ್ಕೊಂಡು ಇರುವ ಮುಗ್ಧ ಮಕ್ಕಳಿಗೆ ನಿಮ್ಮ ಯಾವ ಮಾರ್ಗಸೂಚಿಯೂ ಕೆಲಸ ಮಾಡಲ್ಲ. ಒಮ್ಮೆ ಯೋಚಿಸಿ ನೋಡಿ ಒಂದು ಮಗುವಿಗೆ ವೈರಸ್ ಸೋಂಕು ಬಂದರೆ ಸಾವಿರಾರು ಮನೆಗಳಿಗೆ, ನೂರಾರು ಹಳ್ಳಿಗಳಿಗೆ ಸುಲಭವಾಗಿ ರೋಗ ಹರಡುತ್ತೆ. ಇಂತಹ ಪರಿಸ್ಥಿತಿಯಲ್ಲಿ ತಂದೆ ತಾಯಿಯಿಂದ ದೂರ ಇಟ್ಟು ಕ್ವಾರಂಟೈನ್ ನಲ್ಲಿ ಮಕ್ಕಳನ್ನು ಚಿಕಿತ್ಸೆ ಮಾಡೋದು ಅಸಾಧ್ಯದ ಮಾತು . ಇವಾಗಲೇ ಶಾಲೆ ತೆಗೆಯಿರಿ ಎಂದು ಯಾರು ಕೂಡಾ ಹೋರಾಟ ಮಾಡ್ತ ಇಲ್ಲ . ನೀವೇ ಹೇಳುವ ಹಾಗೆ, ಮಕ್ಕಳಿಗೆ ಮತ್ತು ವಯೋ ವೃದ್ಧರಿಗೆ ಈ ಸೋಂಕು ಬೇಗನೆ ಹರಡುವ ಅಪಾಯ ಇದೆ. ಇದಕ್ಕಿಂತ ಮುಖ್ಯವಾದ ಅಭಿವೃದ್ಧಿ ಕೆಲಸದ ಕಡೆ ಗಮನ ಹರಿಸುವುದು ಒಳ್ಳೆಯದು.ದೇಶದಲ್ಲಿ ಲಾಕ್ ಡೌನ್ ಮಾಡಿ ಶಾಲೆ ಕಾಲೇಜುಗಳಿಗೆ ರಜೆ ಕೊಟ್ಟು , ಈಗ ಪಕ್ಕದ ಬೀದಿ ಬೀದಿಗಳಲ್ಲಿ ವೈರಸ್ ಹರಡುವ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗೋದು ಸಮಂಜಸ ಅಲ್ಲ. ನಿಮ್ಮ ತಲೆಯಲ್ಲಿ ಅದೇನ್ ಯೋಚನೆ ಇದೆಯೋ ಈ ಮುಗ್ದ ಮಕ್ಕಳಿಗೆ ಗೊತ್ತಾಗ್ತಾ ಇಲ್ಲ, ಅವರಿಗೆ ಅರ್ಥ ಆಗೋದೂ ಇಲ್ಲಾ. ಹೇಗೂ ಮನೆಯಲ್ಲಿ ಮಕ್ಕಳು ತಂದೆ ತಾಯಿಯ ಮಡಿಲಲ್ಲಿ ಈಗ ಸುರಕ್ಷಿತವಾಗಿ ಇದ್ದಾರೆ. ಹಾಗೆ ಇರಲಿ ಬಿಡಿ ಸ್ವಲ್ಪ ದಿನ.. ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆ ಆರೋಗ್ಯ ಮುಖ್ಯ ಗಮನದಲ್ಲಿಟ್ಟುಕೊಂಡು ಈ ಪತ್ರ ಬರೆಯಲಾಗಿದೆ.

LEAVE A REPLY

Please enter your comment!
Please enter your name here