ನನ್ನನ್ನೇ ಪ್ರಧಾನಿ ಟಾರ್ಗೆಟ್ ಮಾಡಿದ್ದಾರೆ!

0
378

ಚೆನ್ನೈ ಪ್ರತಿನಿಧಿ ವರದಿ
ಐಟಿ ಅಧಿಕಾರಿಗಳು ನನ್ನನ್ನು ಗೃಹ ಬಂಧನದಲ್ಲಿ ಇರಿಸಿದ್ದಾರೆ.ನಾನೇ ಮುಖ್ಯ ಕಾರ್ಯದರ್ಶಿ, ಹಾಗೇ ಇರುತ್ತೇನೆ. ಸರ್ಚ್ ವಾರೆಂಟ್ ನಲ್ಲಿ ನನ್ನ ಹೆಸರೇ ಇರಲಿಲ್ಲ ಎಂದು ತಮಿಳುನಾಡಿನ ಮಾಜಿ ಮುಖ್ಯಕಾರ್ಯದರ್ಶಿ ರಾಮ್ ಮೋಹನ್ ರಾವ್ ಐಟಿ ದಾಳಿಗೆ ಕಿಡಿಕಾರಿದ್ದಾರೆ.
 
 
ತಮಿಳುನಾಡಿ ಚೆನ್ನೈ ನಿವಾಸದಲ್ಲಿ ಮಾತನಾಡಿದ ಸಿಎಸ್, ಐಟಿ ದಾಳಿ ವೇಳೆ ಮನೆಯಲ್ಲಿ 1 ಲಕ್ಷ ಮಾತ್ರ ಜಪ್ತಿಯಾಗಿತ್ತು. ನನ್ನ ಮನೆಯಲ್ಲಿ ಯಾವುದೇ ಸೀಕ್ಷೆಟ್ ಛೇಂಬರ್ ಇರಲಿಲ್ಲ. ನನ್ನನ್ನು ವರ್ಗಾವಣೆ ಮಾಡಿಲ್ಲ, ಯಾವುದೇ ಪತ್ರ ಬಂದಿಲ್ಲ. ನನ್ನ ಮನೆ ಮೇಲೆ ನಡೆದ ದಾಳಿ ಅಸಂವಿಧಾನಿಕವಾದ ಹಲ್ಲೆಯಾಗಿದೆ. ಉದ್ದೇಶಪೂರ್ವಕವಾಗಿ ನನ್ನ ಮೇಲೆ ದಾಳಿ ಮಾಡಲಾಗಿದೆ ಎಂದಿದ್ಧಾರೆ.
 
 
 
ತಮಿಳುನಾಡು ಸಿಎಂ ಜಯಲಲಿತಾ ಬದುಕಿದ್ದರೆ ಹೀಗೆ ಆಗುತ್ತಿರಲಿಲ್ಲ. ಪ್ರಧಾನಿ ಮೋದಿಯವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ತಮಿಳುನಾಡಿನ ಮಾಜಿ ಮುಖ್ಯಕಾರ್ಯದರ್ಶಿ ರಾಮ್ ಮೋಹನ್ ಧನ್ಯವಾದ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here