ನನ್ನನ್ನು ನಕಲು ಮಾಡುತ್ತಿದ್ದಾರೆ: ಪ್ರಧಾನಿ

0
236

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರ ಪ್ರದೇಶದ ಬದಾಯುನಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ನಡೆಸಿದ್ದಾರೆ. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭ್ರಷ್ಟಾಚಾರ, ಕಾಳಧನ ತಡೆಗೆ ನೋಟ್ ಬ್ಯಾನ್ ಮಾಡಿದ್ದು, ಆದ್ರೆ ನೋಟ್ ಬ್ಯಾನ್ ವಿರುದ್ಧ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಒಗ್ಗಟ್ಟಾಗಿದ್ದರು. ಮಾಯಾವತಿ ವಿರುದ್ಧ ಅಖಿಲೇಶ್ ಯಾದವ್ ಭ್ರಷ್ಟಾಚಾರದ ಆರೋಪ ಮಾಡಿದ್ರು. ‘ಅಚ್ಚೇದಿನ್’ ಬರದಿರಲು ವಿರೋಧ ಪಕ್ಷಗಳೇ ಹೊಣೆಯಾಗಿದೆ. ಕಾಂಗ್ರೆಸ್, ಎಸ್ ಪಿ, ಬಿಎಸ್ ಪಿ ಪಕ್ಷಗಳೇ ಕಾರಣವಾಗಿದೆ. ದೇಶದ ನಾಯಕರು ನನ್ನನ್ನು ನಕಲು ಮಾಡುತ್ತಿದ್ದಾರೆ. ನನ್ನ ರೀತಿಯಲ್ಲೇ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ ಎಂದು ಪ್ರಧಾನಿ ಅವರು ರಾಹುಲ್ ಗಾಂಧಿ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here