ನಟ ಧನುಷ್ ನಮ್ಮ ಪುತ್ರ

0
572

ಸಿನಿ ಪ್ರತಿನಿಧಿ ವರದಿ
ನಟ ಧನುಷ್ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕಸ್ತೂರಿ ರಾಜಾರ ಪುತ್ರನಲ್ಲವಂತೆ…ಈತ ಬಡ ರೈತನ ಪುತ್ರನಂತೆ. ಹೌದು ನಟ ಧನುಷ್ ನಮ್ಮ ಮಗ ಸ್ವಾಮಿ ಎಂದು ದಂಪತಿಗಳು ಹೇಳುತ್ತಿದ್ದಾರೆ.
 
 
ತಮಿಳು ಚಿತ್ರ ನಟ, ರಜನೀಕಾಂತ್ ಅಳಿಯ ಧನುಷ್ ತಮ್ಮ ಪುತ್ರ,ಆತನನ್ನು ನಮಗೆ ಮರಳಿಸಿ ತಮಿಳುನಾಡಿನ ಮಧುರೈ ಜಿಲ್ಲೆಯ ತಮಿಳು ಚಿತ್ರ ನಟ, ರಜನೀಕಾಂತ್ ಅಳಿಯ ಧನುಷ್ ತಮ್ಮ ಪುತ್ರ, ಆತನನ್ನು ನಮಗೆ ಮರಳಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
 
 
ವೃದ್ಧ ದಂಪತಿಗಳಾದ ಕದಿರೇಷನ್ ಮತ್ತು ಮೀನಾಕ್ಷಿ ಎಂಬ ನ್ಯಾಯಾಲಯಕ್ಕೆ ದೂರು ನೀಡಿದವರು. ಅವರು ಹೇಳುವ ಪ್ರಕಾರ, ಧನುಷ್ ಅವರ ಮೂವರು ಪತ್ರರಲ್ಲಿ ಒಬ್ಬರಂತೆ. ಧನುಷ್ ಮಧುರೈಯ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದರು. ಧನುಷ್ ಜನ್ಮ ನಾಮ ಕಲೈಸೆಲ್ವಂ ಅಂತೆ.
 
 
 
2002 ರಲ್ಲಿ 11 ನೇ ತರಗತಿ ಓದುತ್ತಿದ್ದ ಧನುಷ್ ಶಿವಗಂಗೆ ಜಿಲ್ಲೆ ತಿರುಪತ್ತೂರಿನಲ್ಲಿ ನಾಪತ್ತೆಯಾಗಿದ್ದು, ಆ ನಂತರದಲ್ಲಿ ಸಿನಿಮಾದಲ್ಲಿ ನೋಡಿದ ನಂತರ ಕಸ್ತೂರಿ ರಾಜನ್ ನಿವಾಸಕ್ಕೆ ಧನುಷ್ ರನ್ನು ನೋಡಲು ಬಂದರೆ ಅವರು ಅವಕಾಶ ನೀಡುತ್ತಿರಲಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.
 
 
ಅಲ್ಲದೆ ತಮಗೆ ಇನ್ನಿಬ್ಬರು ಪುತ್ರರಿದ್ದರೂ, ಅವರು ಆರ್ಥಿಕವಾಗಿ ಅಸಮರ್ಥರಾಗಿರುವ ಹಿನ್ನಲೆಯಲ್ಲಿ ಧನುಷ್ ರಿಂದ ನಮ್ಮ ಜೀವನ ನಿರ್ವಹಣೆಗೆ 65 ಸಾವಿರ ತಿಂಗಳ ಮಸಾಶನ ಒದಗಿಸಿ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ನ್ಯಾಯಾಲಯ ಧನುಷ್ ಗೆ ಜನವರಿ 22 ರಂದು ಹಾಜರಾಗಲು ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here