ನಟ ದರ್ಶನಗೂ ಒತ್ತುವರಿ ತೆರವಿನ ಬಿಸಿ

0
299

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿನ ಗಣ್ಯರಿಗೂ ಒತ್ತುವರಿ ತೆರವು ಬಿಸಿ ತಟ್ಟುವ ಸಾಧ್ಯತೆ ಇದೆ. ಚಿತ್ರನಟ ದರ್ಶನ್ ಗೆ ಒತ್ತುವರಿ ತೆರವಿನ ಬಿಸಿ ತಟ್ಟುವ ಸಂಭವಿಸಿದೆ.
 
 
 
ಹಲಗೆಒಡೇರ ಹಳ್ಳಿಯ ಸರ್ವೆ ನಂ 53ರಲ್ಲಿರುವ ರಂಗೋಲಿ ಹಳ್ಳದ ವ್ಯಾಪ್ತಿಯಲ್ಲಿ ನಟ ದರ್ಶನ ಮನೆ ಇರುವುದು ಪತ್ತೆಯಾಗಿದೆ. 199.98 ಅಡಿ ಇರುವ ಹಳ್ಳದ ವ್ಯಾಪ್ತಿಯಲ್ಲಿ ನಿರ್ಮಿಸಿದ್ದು ಪತ್ತೆಯಾಗಿದೆ. ಕಂದಾಯ ಇಲಾಖೆ ಸೂಪರ್ ಇಂಪೋಜ್ ಮ್ಯಾಪ್ ನಲ್ಲಿ ಪತ್ತೆಯಾಗಿದೆ. ರಾಜರಾಜೇಶ್ವರಿ ನಗರದ ಎಫ್ ರೋಡ್ ನಲ್ಲಿರುವ ದರ್ಶನ್ ಮನೆ ಐಡಿಯಲ್ ಹೋಮ್ ಟೌನ್ ಶಿಪ್ ನಿಂದ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.
 
 
1960 ದಶಕದಲ್ಲೇ ಈ ಲೇಔಟ್ ನಿರ್ಮಾಣ ಮಾಡಲಾಗಿದೆ. ಹಳ್ಳ ಒತ್ತುವರಿ ಮಾಡಿದ ನಿವೇಶನವನ್ನು ನಟ ದರ್ಶನ್ ಗೆ ಮಾರಾಟ ಮಾಡಲಾಗಿದೆ. ಈ ನಿವೇಶನದಲ್ಲಿ ದರ್ಶನ್ ಮನೆ ಮಾಡಿದ್ದರು. ಇದರಿಂದ ದರ್ಶನ್ ಗೂ ತೊಂದರೆಗೆ ಸಿಲುಕುವ ಭೀತಿ ಎದುರಾಗಿದೆ.
 
 
ಮಾಜಿ ಸಚಿವ ಶಾಮನೂರು ಒಡೆತನಕ್ಕೆ ಸೇರಿದ ಎಸ್ ಎಸ್ ಆಸ್ಪತ್ರೆ ಕಂದಾಯ ಇಲಾಖೆ ಪ್ರಕಾರ ತೆರವಿನ ಅಡಿಯಲ್ಲಿ ಬರುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here