ನಟಿ ಸುಮಲತಾ ಚುನಾವಣೆಗೆ?

0
220

ನಮ್ಮ ಪ್ರತಿನಿಧಿ ವರದಿ
ಸಕ್ರಿಯ ರಾಜಕಾರಣದಲ್ಲೇ ಬೇಸತ್ತು ಹೋದ ಚಿತ್ರನಟ ಹಾಲಿ ಸಾಸಕ ಅಂಬರೀಶ್ ಮುಂದಿನ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣದಿಂದ ದೂರ ಇರಲು ನಿಶ್ಚಯಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಬೆನ್ನಲ್ಲೆ ಅವರ ಪತ್ನಿ ಖ್ಯಾತ ನಟಿ ಸುಮಲತಾ ರಾಜಕೀಯ ರಂಗಕ್ಕೇರುವ ಮುಹೂರ್ತ ಫಿಕ್ಸ್ ಆಗುತ್ತಿದೆ. ಸುಮಲತಾ ಅವರನ್ನು ಭಾರತೀಯ ಜನತಾ ಪಕ್ಷದ ಮೂಲಕ ರಾಜಕಾರಣಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಈ ಬಗ್ಗೆ ಭಾರತೀಯ ಜನತಾ ಪಾರ್ಟಿಯ ಪ್ರಮುಖರು ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆಂಬ ಮಾಹಿತಿಯಿದೆ. ಸುಮಲತಾ ಅವರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಸಲಿದೆ ಎಂಬ ಕುತೂಹಲ ಇದೀಗ ಮೂಡಿದೆ.

LEAVE A REPLY

Please enter your comment!
Please enter your name here