ನಟಿ ಭಾವನಾ ಅಪಹರಣ

0
546

ನಮ್ಮ ಪ್ರತಿನಿಧಿ ವರದಿ
ಮಲಯಾಳಂ ಖ್ಯಾತ ನಟಿ ಭಾವನಾ ಅವರನ್ನು ಕಿಡ್ನಾಪ್ ಮಾಡಿ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಸಂಭವಿಸಿದೆ. ದಕ್ಷಿಣ ಭಾರತದ ಖ್ಯಾತ ನಟಿ ಮೇಲೆ ಕಾಮುಕರು ಕೇರಳದ ಎರ್ನಾಕುಲಂನಲ್ಲಿ ಈ ಕೃತ್ಯ ಎಸಗಿದ್ದಾರೆ.
 
 
 
ಕೇರಳ ಪೊಲೀಸರು ಓರ್ವ ಓರೋಪಿಯನ್ನು ಬಂಧಿಸಿದ್ದು,ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಬಂಧಿತ ಆರೋಪಿಯಾಗಿದ್ದಾನೆ. ಮತ್ತೋರ್ವ ಆರೋಪಿಗಾಗಿ ಕೇರಳ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ನಟಿ ಭಾವನಾರ ಕಾರು ಚಾಲನಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
 
 
 
ಶೂಟಿಂಗ್ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಅಕ್ರಮವಾಗಿ ಕಾರಿನಲ್ಲಿ ಪ್ರವೇಶಿಸಿದ್ದ ದುಷ್ಕರ್ಮಿಗಳು ಭಾವನಾ ಅವರನ್ನು ಅಪಹರಿಸಿದ್ದಾರೆ. ಅಥನಿಯಲ್ಲಿ ಭಾವನಾ ಕಾರು ತಡೆದು ದುಷ್ಕರ್ಮಿಗಳು ಕಾರಿನ ಒಳಪ್ರವೇಶಿಸಿದ್ದಾರೆ.ಪಲರಿವಟ್ಟೊಮ್ ತಲುಪುವವರೆಗೂ ಒಂದು ಗಂಟೆ ಕಾಲ ಭಾವನಾ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ.ಬಳಿಕ ಕಾಮುಕರು ಭಾವನಾರನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
 
 
ಕಾರಿನ ಚಾಲಕನನ್ನು ಬೆದರಿಸಿ ರಸ್ತೆ ಮಾರ್ಗ ಬದಲಿಸಿದ್ದ ಗ್ಯಾಂಗ್, ಕಾರಿನಲ್ಲೇ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆನ್ನಲಾಗಿದೆ. ಭಾವನಾ ಹಳೆಯ ಕಾರು ಚಾಲಕ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾನೆ.
ಭಾವನಾ ಅವರು ಕನ್ನಡದ ಚೌಕ, ಬಚ್ಚನ್​, ಜಾಕಿ, ರೋಮಿಯೋ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದರು.

LEAVE A REPLY

Please enter your comment!
Please enter your name here