ಪ್ರಮುಖ ಸುದ್ದಿವಾರ್ತೆಸಿನಿಮಾ

ನಟಿ ಪದ್ಮಾಕುಮುಟಾ ನಿಧನ

ಬೆಂಗಳೂರು ಸಿನಿ ಪ್ರತಿನಿಧಿ ವರದಿ
ಹಿರಿಯ ನಟಿ ಪದ್ಮಾ ಕುಮುಟಾ (58) ಅವರು ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. ಬೆಂಗಳೂರಿನಲ್ಲಿ ಮಾರ್ಚ್ 6ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
 
 
 
ಶೃತಿ ನಾಯ್ಡು ಅವರ ‘ಮಹಾನದಿ’ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಉಸಿರಾಟದ ತೊಂದರೆಯಿಂದಾಗಿ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದಿದ್ದರು.
 
 
ನಟಿ ಪದ್ಮಾ ಕುಮುಟಾ ರವರು 1975ರಲ್ಲಿ ತೆರೆಕಂಡಿದ್ದ ಚೋಮನದುಡಿ ಚಿತ್ರದಿಂದ ಹಿಡಿದು ದೇವತಾ ಮನುಷ್ಯ, ಶಿವ ಮೆಚ್ಚಿದ ಕಣ್ಣಪ್ಪ, ಕಳ್ಳ ಮಳ್ಳ, ಸೋಲಿಲ್ಲದ ಸರದಾರ, ಬೇವು ಬೆಲ್ಲ, ಶ್ರೀ ಮಂಜುನಾಥ, ಲಕ್ಕಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಚೋಮನದುಡಿ’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here