ನಗರದ 10 ಪೊಲೀಸ್ ಠಾಣೆಗಳಿಗೆ ಮಕ್ಕಳ ಭೇಟಿ

0
317

ಮಂಗಳೂರು ಪ್ರತಿನಿಧಿ ವರದಿ
‘ಚೈಲ್ಡ್ ಲೈನ್ ಸೆ ದೋಸ್ತಿ’ ಕಾರ್ಯಕ್ರಮದ ಅಂಗವಾಗಿ ಇಂದು ದಿ:16-11-2016 ರಂದು ಚೈಲ್ಡ್ ಲೈನ್ ಮಂಗಳೂರು-1098 ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಶಿಕ್ಷಣ ಸಂಪನ್ಮೂಲ ಕೇಂದ್ರ, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ, ಮಂಗಳೂರು ನಗರದ ಸುಮಾರು 10 ಪೊಲೀಸ್ ಠಾಣೆಗೆ ಹಾಗೂ ನಗರ ಪೊಲೀಸ್ ಆಯುಕ್ತರ ಕಛೇರಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಗೆ ಸುಮಾರು 350 ಮಕ್ಕಳು ಭೇಟಿ ನೀಡಿ, ‘ಮಗು ಸ್ನೇಹಿ ಪೊಲೀಸ್’ ಪರಿಕಲ್ಪನೆಯಂತೆ ಪೊಲೀಸರಿಗೆ ಪತ್ರವನ್ನು ನೀಡಿ, ಸುರಕ್ಷಾ ಬಂಧನವನ್ನು ಕಟ್ಟುವ ವಿನೂತನ ಕಾರ್ಯಕ್ರಮದಲ್ಲಿ ಪೊಲೀಸರೊಂದಿಗೆ ಸಂವಾದವನ್ನು ನಡೆಸಿದರು.
 
 
 
ಈ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ಭೇಟಿದ ಮಕ್ಕಳನ್ನು ಉದ್ಧೇಶಿಸಿ, ನಗರ ಪೊಲೀಸ್ ಕಮೀಷನರ್ ಚಂದ್ರಶೇಖರ್ ಮಾತನಾಡಿ, ಮಕ್ಕಳು ಸಮಗ್ರ ಶಿಕ್ಷಣವನ್ನು ಪಡೆಯುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಕ್ಕಳು ಪೊಲೀಸ್ ವ್ಯವಸ್ಥೆಯ ಬಗ್ಗೆ ತಿಳುವಳಿಕೆಯನ್ನು ಪಡೆಯುವುದು ಉತ್ತಮ ಬೆಳವಣಿಗೆಯಾಗಿದ್ದು, ಪೊಲೀಸ್ ಎಂದರೆ ಭಯ ಪಡಬೇಕಾಗಿಲ್ಲ, ಯಾವುದೇ ಸಂದರ್ಭದಲ್ಲಿ ಪೊಲೀಸರನ್ನು ಸಂಪರ್ಕಿಸಿ, ಸಹಾಯವನ್ನು ಪಡೆಯಬಹುದು, ಪೊಲೀಸರು ಮಕ್ಕಳ ಸ್ನೇಹಿಯಾಗಿದ್ದು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಹೇಳಿದರು.
 
 
 
ಅನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಭೇಟಿ ನೀಡಿದ ಮಕ್ಕಳನ್ನುದ್ಧೇಶಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆರವರು ಮಾತನ್ನಾಡಿ, ಮಕ್ಕಳು ತಮ್ಮ ಜೀವನದಲ್ಲಿ ಶಿಸ್ತುನ್ನು ಬೆಳೆಸಿಕೊಳ್ಳಬೇಕು, ಹಿರಿಯರಿಗೆ ಗೌರವವನ್ನು ನೀಡಿ, ಉತ್ತಮ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು, ಪೊಲೀಸ್ ಇಲಾಖೆ ಸಿಬಂಧಿಗಳು ಮಕ್ಕಳ ರಕ್ಷಣೆಗೆ ಕಟಿಬದ್ಧರಾಗಿದ್ದು, ಮಕ್ಕಳ ಮನಸ್ಸನ್ನು ಅರಿತು ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪೊಲೀಸ್ ಕಛೇರಿಯಲ್ಲಿರುವ ಎಲ್ಲಾ ವಿಭಾಗಗಳ ಮಾಹಿತಿಯನ್ನು ವಿವರಿಸಲಾಯಿತು, ಈ ಕಾರ್ಯಕ್ರಮದಲ್ಲಿ ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ, ಮಕ್ಕಳ ರಕ್ಷಣಾಧಿಕಾರಿಯಾದ ಉಸ್ಮಾನ್ ಮತ್ತು ಚೈಲ್ಡ್ ಲೈನ್ -1098,ಸಂಯೋಜಕರಾದ ಸಂಪತ್ ಕಟ್ಟಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
 
 
 
ಅನಂತರ ನಗರದ ವಿವಿಧ ಶಾಲೆಯ 350 ಮಕ್ಕಳು, 10 ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಪತ್ರವನ್ನು ನೀಡಿ, ಸುರಕ್ಷಾ ಬಂಧನವನ್ನು ಕಟ್ಟುವ ಮೂಲಕ ಪೊಲೀಸರೊಂದಿಗೆ ಸಂವಾದವನ್ನು ನಡೆಸಿದರು. ತಮ್ಮ ಒತ್ತಡದ ಕೆಲಸ ಕಾರ್ಯದ ನಡುವೆಯು ಪೊಲೀಸರು ಠಾಣೆಗೆ ಬಂದ ಮಕ್ಕಳಿಗೆ ಹಸ್ತಲಾಘವ ನೀಡಿ ಸ್ವಾಗತಿಸಿ, ಲಘ ಉಪಹಾರ ಪಾನೀಯಗಳನ್ನು ನೀಡಿದರು. ಮಕ್ಕಳ ಭಾವನೆಗಳಿಗೆ ಸ್ಪಂದಿಸಿ, ಮಕ್ಕಳ ಜೊತೆ ಸುಮಾರು ಒಂದು ಗಂಟೆಗಳ ಕಾಲ ಸಂವಾದ ನಡೆಸಿದರು, ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು, ಮಕ್ಕಳಲ್ಲಿರುವ ಕೂತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿ, ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿಯನ್ನು ನೀಡಿದರು. ಶಿಸ್ತು, ಶಿಕ್ಷಣ, ಕಾನೂನು, ಜೀವನ ಮೌಲ್ಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆಯನ್ನು ನೀಡಿ, ಭಯಮುಕ್ತವಾಗಿ ಪೊಲೀಸರನ್ನು ಸಂಪರ್ಕಿಸುವಂತೆ ತಿಳಿಸಿದರು, ಮಕ್ಕಳು ಹೇಳಿದ ಕೆಲವು ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವುದಾಗಿ ಹೇಳಿದರು.
 
 
ಈ ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್ ಮಂಗಳೂರು-1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಶಿಕ್ಷಣ ಸಂಪನ್ಮೂಲ ಕೇಂದ್ರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬಂಧಿಗಳು, ಶಾಲಾ ಶಿಕ್ಷಕರುಗಳು, ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here