ನಗದು ರಹಿತ ವಹಿವಾಟಿಗೆ ಗಿಫ್ಟ್

0
556

ರಾಷ್ಟ್ರೀಯ ಪ್ರತಿನಿಧಿ ವರದಿ
ನಗದು ರಹಿತ ವಹಿವಾಟಿಗೆ ನೀತಿ ಆಯೋಗದಿಂದ ಉತ್ತೇಜನ ದೊರಕಿದೆ. ನಗದು ರಹಿತ ವಹಿವಾಟು ನಡೆಸುವ ಗ್ರಾಹಕರಿಗೆ ಬಹುಮಾನ ಘೋಷಿಸಿದೆ. ಸರ್ಕಾರ ದೇಶದ ಜನತೆಗೆ ಕ್ರಿಸ್ ಮಸ್ ಗೆ ಉಡುಗೊರೆ ನೀಡುತ್ತಿದೆ.
 
 
ಆನ್ ಲೈನ್ ಪೇಮೆಂಟ್ ಮಾಡುವವರಿಗೆ ಬಹುಮಾನ ಯೋಜನೆ ಜಾರಿಯಾಗಿದೆ. ಕೇಂದ್ರ ಸರ್ಕಾರಿಂದ ಎರಡು ಯೋಜನೆಗಳು ಘೋಷಣೆಯಾಗಿದೆ. ಡಿಸೆಂಬರ್ 25ರಿಂದ ಗ್ರಾಹಕರಿಗಾಗಿ ‘ಲಕ್ಕಿ ಗ್ರಾಹಕ್’ ಯೋಜನೆ ಮತ್ತು ವ್ಯಾಪಾರಿಗಳಿಗಾಗಿ ‘ಡಿಜಿ ಧನ್ ವ್ಯಾಪಾರಿ’ ಯೋಜನೆ ಜಾರಿಯಾಗಲಿದೆ.
 
 
 
ಡಿಜಿಟಲ್ ವ್ಯಾಪಾರದ ಉತ್ತೇನಕ್ಕಾರಿ ಈ ಯೋಜನೆಗಳು ಜಾರಿಯಾಗಿದೆ. ಗ್ರಾಹಕರಿಗೆ 1 ಕೋಟಿ, 50 ಲಕ್ಷ, 25 ಲಕ್ಷ ಬಹುಮಾನ ದೊರೆಯಲಿದೆ. ವ್ಯಾಪಾರಿಗಳಿಗೂ ಸರ್ಕಾರದಿಂದ ಲಕ್ಕಿ ಯೋಜನೆಗಳಿದ್ದು, ಪ್ರತಿ ವಾರ 7 ಸಾವಿರ ವ್ಯಾಪಾರಿಗಳು ಬಹುಮಾನ ಪಡೆಯಲಿದ್ದಾರೆ. ಪ್ರತಿದಿನ 15 ಸಾವಿರ ಗ್ರಾಹಕರಿಗೆ ತಲಾ 1 ಸಾವಿರ ಬಹುಮಾನ ನೀಡಲಾಗುತ್ತದೆ. 100 ದಿನದವರೆಗೆ 1000 ರೂ. ಬಹುಮಾನ ನೀಡಲಾಗುತ್ತದೆ. ಏಪ್ರಿಲ್ 14ರವರೆಗೂ ಸರ್ಕಾರದಿಂದ ‘ಲಕ್ಕಿ ಗ್ರಾಹಕ’ ಯೋಜನೆ ಇರುತ್ತದೆ. ಅಂಬೇಡ್ಕರ್ ಜಯಂತಿಗೆ ಸರ್ಕಾರದಿಂದ ಮೆಗಾ ಲಕ್ಕಿ ಡ್ರಾ ಇರುತ್ತದೆ.
 
 
 
ಆನ್ ಲೈನ್ ವಹಿವಾಟು ನಡೆಸುವವರಿಗೆ ಈ ಯೋಜನೆಯಾಗಿದ್ದು, ಆನ್ ಲೈನ್ ನಲ್ಲಿ ಹೆಚ್ಚು ವಹಿವಾಟು ನಡೆಸುವವರಿಗೆ ಬಹುಮಾನ ಸಿಗಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
 

LEAVE A REPLY

Please enter your comment!
Please enter your name here