ನಕ್ಸಲ ಅಟ್ಟಹಾಸಕ್ಕೆ ಸಿಆರ್ ಪಿಎಫ್ ಕಮಾಂಡೋಗಳು ಬಲಿ

0
574

 
ರಾಷ್ಟ್ರೀಯ ಪ್ರತಿನಿಧಿ ವರದಿ
ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್ ಪಿಎಫ್ ಕಮಾಂಡೋಗಳು ಹುತಾತ್ಮರಾದ ಘಟನೆ ಘಟನೆ ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಯ ಗಡಿ ಭಾಗ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಡೆದಿದೆ.
 
 
ಸೋಮವಾರ ಬೆಳಗ್ಗೆಯಿಂದ ಪಟನಾದಿಂದ 172 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಸಿಆರ್ ಪಿ ಎಫ್ ಪಡೆ ಶೋಧ ಕಾರ್ಯ ನಡೆಸುತ್ತಿತ್ತು. ರಾತ್ರಿ ವೇಳೆ ನಕ್ಸಲರು 21 ಸುಧಾರಿತ ಐಇಡಿ ಸ್ಪೋಟಕಗಳನ್ನು ಸಿಡಿಸಿದ್ದಾರೆ.
 
 
ಇದರಲ್ಲಿ 10 ಕಮಾಂಡೋಗಳು ಹುತಾತ್ಮರಾಗಿದ್ದು, 5 ಯೋಧರು ಗಾಯಗೊಂಡಿದ್ದಾರೆ. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ 4 ನಕ್ಸಲರು ಮೃತಪಟ್ಟಿದ್ದಾರೆ.  ಮಂಗಳವಾರ ಬೆಳಗ್ಗೆ ಮತ್ತೆ ಹೆಚ್ಚುವರಿ ಪಡೆಗಳೊಂದಿಗೆ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here