ನಕ್ಸಲ್ ಮುಖಂಡರ ಬಂಧನ

0
681

ರಾಷ್ಟ್ರೀಯ ಪ್ರತಿನಿಧಿ ವರದಿ
ಕುಖ್ಯಾತ ಇಬ್ಬರು ನಕ್ಸಲ್ ಮುಖಂಡರನ್ನು ಬಿಹಾರದ ಜಮುಯಿ ಜಿಲ್ಲೆಯ ಭಲುಕ ಅರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ಬಂಧಿಸಲಾಗಿದೆ.
 
 
ಅರಣ್ಯದಲ್ಲಿ ಅಡಗಿದ್ದ ಕುಖ್ಯಾತ ನಕ್ಸಲ್ ಮುಂಖಂಡರಾದ ಪಂಕಜ್ ಯಾದವ್, ಭೋಲಾ ಯಾದವ್ ಅವರನ್ನು ಬಂಧಿಸಲಾಗಿದೆ. ನಕ್ಸಲರು ಅರಣ್ಯದಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸಶಸ್ತ್ರ ಸೀಮಾ ಬಲ ಸೈನಿಕರು ಭಾನುವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿ, ಚಾಣಾಕ್ಷವಾಗಿ ನಕ್ಸಲ್ ಮುಖಂಡರನ್ನು ಬಂಧಿಸಿದ್ದಾರೆ.
 
 
 
ಬಂಧಿತರಿಂದ ಎರಡು ಬಂದೂಕುಗಳು, ಒಂದು ಸ್ವಯಂ ಚಾಲಿತ ಪಿಸ್ತೂಲು, 305 ಬುಲೆಟ್ ಗಳ ಕಾರ್ಟಿಡ್ಜ್, 2 ಗ್ರೆನೇಡ್ ಗಳು 2 ಮೊಬೈಲ್ ಹಾಗೂ ಒಂದು ಬೈಕ್, ಏಳು ಜೀವಂತ ಬಾಂಬ್ ಗಳುನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here