ನಕಲಿ ನೋಟುಗಳ ಬಗ್ಗೆ ಗಮನವಿರಲಿ

0
250

ರಾಷ್ಟ್ರೀಯ ಪ್ರತಿನಿಧಿ ವರದಿ
ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ಕಳವಳಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಾರ್ವಜನಿಕರು ಆ ನೋಟುಗಳನ್ನು ಸ್ವೀಕರಿಸುವ ಮುನ್ನ ಪರಿಶೀಲಿಸಿ ತೆಗೆದುಕೊಳ್ಳಬೇಕೆಂದು ಹೇಳಿದೆ.
 
 
ಜನರ ಪ್ರತಿನಿತ್ಯದ ವ್ಯವಹಾರಗಳಲ್ಲಿ ಹೆಚ್ಚಿನ ಮೊತ್ತದ ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಾಗುತ್ತಿದ್ದು, ಇದರ ಲಾಭವನ್ನು ಮಾಡಿಕೊಳ್ಳಲು ಕೆಲವರು ನೋಡಿಕೊಳ್ಳುತ್ತಿದ್ದಾರೆ ಎಂದು ಆರ್ ಬಿಐ ಹೇಳಿದೆ.
 
 
ನಕಲಿ ನೋಟುಗಳನ್ನು ಹತ್ತಿರದಿಂದ ನೋಡಿದರೆ ಅದು ಅಸಲಿಯೊ, ನಕಲಿಯೊ ಎಂದು ಗೊತ್ತಾಗುತ್ತದೆ. ನೋಟುಗಳ ಭದ್ರತಾ ಲಕ್ಷಣಗಳ ಬಗ್ಗೆ ಆರ್ ಬಿಐಯ ವೆಬ್ ಸೈಟ್ ನಲ್ಲಿ ಕೂಡ ಸಿಗುತ್ತದೆ.
 
 
ನಕಲಿ ನೋಟುಗಳೆಂದು ಕಂಡುಬಂದ ತಕ್ಷಣ ಅದನ್ನು ಚಲಾವಣೆ ಮಾಡದಂತೆ, ಕೂಡಲೇ ಬ್ಯಾಂಕಿನ ಗಮನಕ್ಕೆ ತರುವಂತೆ ರಿಸರ್ವ್ ಬ್ಯಾಂಕ್ ಜನತೆಯಲ್ಲಿ ಮನವಿ ಮಾಡಿದೆ

LEAVE A REPLY

Please enter your comment!
Please enter your name here