ನಂದಿ ನೋಡಿದ್ದೀರಾ?

0
401

ನಮ್ಮ ಪ್ರತಿನಿಧಿ ವರದಿ
ಶ್ರೀ ರಾಮಚಂದ್ರಾಪುರ ಮಠದಿಂದ ಚೆನ್ನೇನಹಳ್ಳಿಯ ವೇದವಿಜ್ಞಾನ ಗುರುಕುಲಂಗೆ ಸಾಕಲು ನೀಡಿದ ನಂದಿಯನ್ನು ಕಳ್ಳರು ಭಾನುವಾರ ತಡರಾತ್ರಿ ಕಳವುಗೈದ ಘಟನೆ ನಡೆದಿದೆ.
 
 
 
ಕಾಂಕ್ರೇಜ್ ತಳಿಯ ಇಂದ್ರ ಎಂಬ 8ವರ್ಷದ ಹೋರಿಯನ್ನು ಗುರುಕುಲದಲ್ಲಿ ಸಾಕಲೆಂದು ರಾಮಚಂದ್ರಾಪುರ ಮಠದಿಂದ ನೀಡಲಾಗಿತ್ತು. ಗುರುಕುಲದ ಆವರಣದಲ್ಲಿ ಕಟ್ಟಿ ಹಾಕಿ ಸಾಕಲಾಗುತ್ತಿತ್ತು. ಭಾನುವಾರ ರಾತ್ರಿ 12 ಗಂಟೆ ವರೆಗೂ ಜನರು ಓಡಾಡುತ್ತಿದ್ದರು. ಆದರೆ ಸೋಮವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಎಚ್ಚರವಾಗಿ ನೋಡುವ ಸಮಯದಲ್ಲಿ ಹೋರಿ ಕಟ್ಟಿದಲ್ಲಿ ಇರಲಿಲ್ಲ. ರಸ್ತೆ ಸೇರಿ ಆಸುಪಾಸಿನಲ್ಲಿ ಹುಡುಕಾಡಿದರೂ ನಂದಿ ಪತೆಯಾಗಿಲ್ಲ.
 
 
 
ಕಟ್ಟಿದಲ್ಲಿಂದ ಹಗ್ಗ ಸಹಿತ ಕೊಂಡೊಯ್ದರುವ ಸಾಧ್ಯತೆ ಇದ್ದು, ಬೆಂಗಳೂರು ಕಡೆಗೆ ಹೋಗುವ ರಸ್ತೆಯ ಸ್ವಲ್ಪದ ದೂರದಲ್ಲಿ ಸೆಗಣಿ ಹಾಕಿರುವ ಕುರುಹು ಕಾಣಿಸಿರುತ್ತದೆ. ನಂದಿ ನಾಪತ್ತೆಯ ಬಗ್ಗೆ ಗುರುಕುಲಂನ ಪ್ರಧಾನ ಆಚಾರ್ಯ ಮಹಬಲೇಶ್ವರ ಭಟ್ ಅವರು ರಾಮನಗರ ಜಿಲ್ಲೆಯ ತಾವರೆ ಕೆರೆ ಠಾಣೆಗೆ ದೂರು ನೀಡಿದ್ದಾರೆ. ಕಟ್ಟಿದ ಜಾಗದಿಂದ ರಸ್ತೆಗೆ ನಂದಿ ಸರಿಯಾಗಿ ಕಾಣಿಸುತ್ತಿದ್ದು, ಇದನ್ನು ಗಮನಿಸಿಯೇ ಕೊಂಡೊಯ್ದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here