'ನಂದಿಕೇಶ್ವರ' ಸಂಶೋಧನ ಕೃತಿ ಅನಾವರಣ

0
433

ನಮ್ಮ ಪ್ರತಿನಿಧಿ ವರದಿ
ಕಲಾಸಂಶೋಧಕಿ,’ನೂಪುರ ಭ್ರಮರಿ’ – ಪ್ರತಿಷ್ಠಾನದ ಅಧ್ಯಕ್ಷೆ, ಸಂಪಾದಕಿ ಡಾ. ಮನೋರಮಾ ಬಿ.ಎನ್ ಅವರ ನೂತನ ಸಂಶೋಧನಾ ಕೃತಿ ‘ನಂದಿಕೇಶ್ವರ’ ಇತ್ತೀಚೆಗೆ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಜರುಗಿದ ಗೋಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.
 
mata nandakeshwar book1
 
ಹೊಸನಗರ ರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಮತ್ತು ಉತ್ತರಪ್ರದೇಶದ ಲಿಖಿಂಪುರ ಕಬೀರ ಪಂಥದ ಶ್ರೀ ಸದ್ಗುರು ಸೇವಾಶ್ರಮದ ಶ್ರೀಸಂತ ಅಸಂಗ ಸಾಹೇಬ್ಜೀ ಅವರು ಕೃತಿಯನ್ನು ಅನಾವರಣಗೊಳಿಸಿದರು.
 
 
ಕೃತಿ ಅನಾವರಣ ಸಂದರ್ಭದಲ್ಲಿ ಮಾತನಾಡಿದ ಶ್ರೀಶ್ರೀ ರಾಘವೇಶ್ವರ ಸ್ವಾಮೀಜಿಗಳು ನಂದಿಯ ಕುರಿತಾದ ಸಮಗ್ರ ಮಾಹಿತಿಯನ್ನು ಒಳಗೊಂಡ ವಿಶ್ವಕೋಶದಂತಿದೆ ಎಂದು ಅಭಿಪ್ರಾಯಿಸಿದರು. ಭಾರತದಲ್ಲಿನ ನಂದಿಕೇಶ್ವರ ಸಂಪ್ರದಾಯ, ನಂದಿಯ ಸಂಬಂಧವಾದ ವೇದ-ಪುರಾಣ-ಆಗಮ-ತಂತ್ರ-ಮಂತ್ರ-ವ್ರತವಿಧಾನ-ದಾನಕ್ರಮ-ಜನಜೀವನ-ನೃತ್ಯಶಾಸ್ತ್ರ- ಕಲಾಮೀಮಾಂಸೆಗಳನ್ನು ಚರ್ಚಿಸುವ ಕೃತಿ ಇದಾಗಿದ್ದು; ನಂದಿಕೇಶ್ವರನ ಸಂಬಂಧ ಬಂದಿರುವ ಪ್ರಪ್ರಥಮ ಕನ್ನಡ ಕೃತಿಯೆಂಬ ಮನ್ನಣೆ ಪಡೆದಿದೆ. ಇದು ಅಭಿನಯದರ್ಪಣ ಮತ್ತು ಭರತಾರ್ಣವವೆಂಬ ನೃತ್ಯ ಲಕ್ಷಣ ಗ್ರಂಥಗಳ ಗುಣ ಕಥನ ವ್ಯಾಖ್ಯಾನವನ್ನೂ ಹೊಂದಿದ್ದು ನೃತ್ಯಾಭ್ಯಾಸಿಗಳಿಗೆ ಉಪಯುಕ್ತವಾಗಿದೆ.
 
 
ಈಗಾಗಲೇ ‘ಮುದ್ರಾರ್ಣವ’, ‘ನೃತ್ಯಮಾರ್ಗಮುಕುರ’, ‘ಮಹಾಮುನಿಭರತ’, ‘ಭವ್ಯ ಇತಿಹಾಸದ ಶ್ರೀ ಓಂಕಾರೇಶ್ವರ ದೇವಾಲಯ’ಎಂಬ ಕೃತಿಗಳನ್ನು ರಚಿಸಿರುವ ಡಾ.ಮನೋರಮಾ ಬಿ.ಎನ್ ಅವರುಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಹಾಗೂ ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಇಲಾಖೆ ನೀಡುವ ಫೆಲೋಶಿಪ್ ಗೆ ಇವರು ಪಾತ್ರರಾಗಿ ಹಲವು ಕಲಾಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನೃತ್ಯ ಮತ್ತು ಸಾಮಾಜಿಕ ಸಂವಹನದ ಮೀಮಾಂಸೆಗಳ ಸಾಲಿನಲ್ಲಿ ಹೊಸ ಪ್ರಮೇಯಗಳನ್ನು ಸಿದ್ಧಪಡಿಸುವುದರ ಜೊತೆಗೆ ನಾಟ್ಯಶಾಸ್ತ್ರವನ್ನೂ ಒಳಗೊಂಡಂತೆ ಹಲವು ಪುರಾತನ ಕೃತಿ, ತಾಳ, ಸಾಂಸ್ಕೃತಿಕ ಪತ್ರಿಕೋದ್ಯಮ, ಪುರಾಣಕಥಾಮಾಲಿಕೆ ಮತ್ತು ನೃತ್ಯಸಂಶೋಧನೆಯ 6 ಸರ್ಟಿಫಿಕೇಟ್ ಕೋರ್ಸ್ ಗಳನ್ನು ಸಿದ್ಧಗೊಳಿಸಿದ್ದಾರೆ. ತಮ್ಮದೇ ಆದ ಸಾನ್ನಿಧ್ಯ, ನೂಪುರ ಭ್ರಮರಿ (ರಿ) ಪ್ರಕಾಶನದಿಂದ ಹಲವು ಪುಸ್ತಕಗಳನ್ನು ಪ್ರಕಟಗೊಳಿಸುತ್ತಲಿರುವ ಮನೋರಮಾಹಲವು ಕಾರ್ಯಾಗಾರಗಳಲ್ಲಿ, ಸಮ್ಮೇಳನಗಳಲ್ಲಿ ವಿಶೇಷ ತಜ್ಞಅಭ್ಯಾಗತರಾಗಿ, ಉಪನ್ಯಾಸಕರಾಗಿ, ಪರೀಕ್ಷಕರಾಗಿ ಪಾಲ್ಗೊಂಡಿದ್ದಾರೆ. ಇವರು ಮಡಿಕೇರಿಯ ಪ್ರಸಿದ್ಧ ಪುರೋಹಿತರಾದ ಬಿ.ಜಿ. ನಾರಾಯಣ ಭಟ್ ; ಬಿ.ಎನ್ ಸಾವಿತ್ರಿ ಅವರ ಪುತ್ರಿ ಮತ್ತು ಫೆಡರಲ್ ಬ್ಯಾಂಕ್ ಪ್ರಬಂಧಕರಾದ ವಿಷ್ಣುಪ್ರಸಾದ್ ಅವರ ಪತ್ನಿ.

LEAVE A REPLY

Please enter your comment!
Please enter your name here