ಧ್ವನಿಸುರುಳಿ ಬಿಡುಗಡೆ

0
310

ಮಂಗಳೂರು ಪ್ರತಿನಿಧಿ ವರದಿ
ನಗರದ ಪುರಭವನ ದಲ್ಲಿ ಬುಧವಾರ ರಾಮ್ ಕ್ರಿಯೇಷನ್ಸ್ ಕಾರ್ಕಳ ಲಾಂಛನದಲ್ಲಿ ತಯಾರಾದ ಕೃಷ್ಣ ನಾಯ್ಕ್ ಕಾರ್ಕಳ ನಿರ್ಮಾಣ ಹಾಗೂ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ‘ಬಣ್ಣ ಬಣ್ಣದ ಬದುಕು’ ಕನ್ನಡ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಒಡಿಯೂರು ದತ್ತ ಗುರುದೇವಾನಂದ ಸ್ವಾಮೀಜಿ ಅವರು ಅಶೀರ್ವಚನ ನೀಡಿದ್ದರು .
 
 
ವಿಶೇಷ ಅತಿಥಿಗಳಗಿ ಕನ್ನಡ ಚಲನಚಿತ್ರ ರಂಗದ ಜನಪ್ರಿಯ ನಟ ಶ್ರೀನಗರ ಕಿಟ್ಟಿ, ನಾಗೇಂದ್ರ ಅರಸ್, ಲಹರಿ ಅಡಿಯೋ ಮಾಲಕ ಲಹರಿವೇಲು, ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಚಿತ್ರ ನಿರ್ದೇಶಕರಾದ ಪ್ರಕಾಶ್ ಕೆ.ಪಾಂಡೇಶ್ವರ, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ , ಶಾಸಕ ಬಿ.ಎ.ಮೈದೀನ್ ಬಾವ, ಮಂಗಳೂರು ಮೇಯರ್ ಹರಿನಾಥ್ , ಮಾಜಿ ಮೇಯರ್ ಶಶಿಧರ್ ಹೆಗ್ಢೆ , ಪಟ್ಲ ಸತೀಶ್ ಶೆಟ್ಟಿ. ಎಸ್ .ಗಣೇಶ್ ರಾವ್, ಜಗನ್ನಾಥ್ ಶೆಟ್ಟಿ ಬಾಳ, ಸುದೇಶ್ ಕುಮಾರ್, ಯಜ್ಞೇಶ್ವರ್ ಬರ್ಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 
 
ಬಣ್ಣ ಬಣ್ಣದ ಬದುಕು ಚಿತ್ರದ ನಿರ್ಮಾಪಕ ಕೃಷ್ಣ ನಾಯ್ಕ್ , ನಿರ್ದೇಶಕ ಇಸ್ಮಾಯಿಲ್ ಮೂಡುಶಡ್ಡೆ, ಚಿತ್ರದ ನಾಯಕ ರವಿರಾಜ್ ಶೆಟ್ಟಿ, ನಾಯಕಿ ಅನ್ವಿತ ಸಾಗರ್ ಮತ್ತು ಬಲಿಪ ನಾರಾಯಣ, ರಿಯಾ ಮೇಘನ , ವಲ್ಲಿ, ಚೇತನ್ ರೈ ಮಾಣಿ, ನವೀನ್ ಬೋಂದೆಲ್,  ಅನುಷಾ ಹೆಗ್ಢೆ ಹಾಗೂ ಬಾಲ ನಟ ಗೌತಮ್ ಬಾಲನಟಿ ಶ್ರೇಯಾ ದಾಸ್ , ಮಾ!ಗಗನ್ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here