ಧ್ರುವಾ ಸರ್ಜಾ ಅಸ್ವಸ್ಥ

0
152

ಬೆಂಗಳೂರು ಸಿನಿ ಪ್ರತಿನಿಧಿ ವರದಿ
ಸ್ಯಾಂಡಲ್‍ವುಡ್ ನಟ ಧ್ರುವಾ ಸರ್ಜಾ ಅವರು ಅಸ್ವಸ್ಥರಾಗಿದ್ದಾರೆ. ಧ್ರುವಾ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
 
ಕಳೆದ ಒಂದು ವಾರದಿಂದ ಚೇತನ್ ಸಾರಥ್ಯದ ಭರ್ಜರಿ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದ ನಟ ಧ್ರುವಾ ಸರ್ಜಾ ತೀವ್ರ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಪೂರ್ಣ ರೈನ್ ಎಫೆಕ್ಟ್ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದೆ ಜ್ವರಕ್ಕೆ ಕಾರಣ ಅಂತ ಹೇಳಲಾಗ್ತಿದೆ. ಕನಕಪುರದ ರಾಮಗೊಂಡ್ಲು ಬಳಿ ಚಾಮುಂಡೇಶ್ವರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿತ್ತು.
 
 
ಬೆಂಗಳೂರಿನ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧ್ರುವಾ ಸರ್ಜಾಗೆ ಡಾ. ಮನೋಹರ್ ಚಿಕಿತ್ಸೆ ನಿಡುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಅಂತ ಆಸ್ಪತ್ರೆಯ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here