ಧ್ಯಾನಾಸಕ್ತ ಧಾನ್ಯ ಗಣೇಶ!

0
316

ಶಿಕಾರಿಪುರದ ಶಿಕ್ಷಕನ ಪರಿಸರ ಪ್ರೇಮ
ಗಣೇಶೋತ್ಸವದಂದು ಗಣಪತಿ ಮೂರ್ತಿಗೆ ಬಳಸುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ರಾಸಾಯನಿಕ ಬಣ್ಣಗಳು ಪರಿಸರದ ಮೇಲೆ ತೀವ್ರ ಪರಿಣಾಮ ಬೀರುವ ಹಿನ್ನಲೆಯಲ್ಲಿ ಪರಿಸರ ಸಂರಕ್ಷಣೆಗೆ ಶಿಕ್ಷಕರೋರ್ವರು ಹೊಸತೊಂದು ಉಪಾಯ ಕಂಡುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿ ಪುರದ ಕುಮಧ್ವತಿ ಶಾಲೆಯ ಚಿತ್ರಕಲಾ ಶಿಕ್ಷಕ ಚಂದ್ರಶೇಖರ್ ಈ ಸಾಧನೆ ಮೆರದವರು.
 
ವಿವಿಧ ರೀತಿಯ ಧಾನ್ಯಗಳನ್ನು ಬಳಸಿ ವೈವಿಧ್ಯಮಯ ಗಣೇಶ ಮೂರ್ತಿಯನ್ನು ನಿರ್ಮಿಸಿ ಆಸಕ್ತರಿಗೆ ಮಾರಾಟ ಮಾಡುತ್ತಿದ್ದಾರೆ. ಇದು ಪರಿಸರ ಪ್ರಿಯ ಗಣೇಶ. ಮೊದಲೇ ತಯಾರಿಸಿಟ್ಟಿರುವ ಗಣೇಶ ಮೂರ್ತಿಯ ಅಚ್ಚಿಗೆ ವಿವಿಧ ಧಾನ್ಯಗಳನ್ನು ಮೈದಾ ಹಿಟ್ಟಿನೊಂದಿಗೆ ಬೆರೆಸಿ ತಯಾರಿಸಿದ ಪೇಸ್ಟ್ಗನ್ನು ಸುರಿದು ವಿಗ್ರಹ ತಯಾರು ಮಾಡುತ್ತಾರೆ. ಇದು ಒಣಗುತ್ತಲೇ ಸುಂದರ ಗಣಪತಿ ಮೂರ್ತಿ ಸಿದ್ಧವಾಗುತ್ತದೆ. ನೈಸರ್ಗಿಕ ಬಣ್ಣಗಳನ್ನು ಬಳಸಿ ಮೂರ್ತಿಯ ಅಂದ ಹೆಚ್ಚಿಸುತ್ತಾರೆ. ಪೂಜೆಗೆ ಬಳಸಿದ ಈ ಗಣೇಶ ಮೂರ್ತಿಯನ್ನು ವಿಸರ್ಜಿಸಿದರೆ ಪರಿಸರಕ್ಕೇನೂ ಹಾನಿಯಿಲ್ಲ. ಹೇಗಿದೆ ನೋಡಿ ಪರಿಸರ ಪ್ರಿಯ ಗಣಪ!

LEAVE A REPLY

Please enter your comment!
Please enter your name here