ಧೋನಿ ಪಾರು

0
4168

ನಮ್ಮ ಪ್ರತಿನಿಧಿ ವರದಿ
ದೆಹಲಿಯ ದ್ವಾರಕಾ ವೆಲ್’ಕಮ್ ಹೊಟೇಲ್ ನಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿದೆ.ಆದೇ ಹೊಟೇಲ್ ನಲ್ಲಿ ತಂಗಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಅವರು ಪಾರಾಗಿದ್ದಾರೆ.
delhi_Dhoni_fire Hotel
ಬೆಳಗ್ಗೆ 6.30ಕ್ಕೆ ಹೊಟೇಲ್ ಬೆಂಕಿ ಕಾಣಿಸಿಕೊಂಡಿದ್ದು,ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿಗಳು ಧೋನಿಯಲ್ಲಿ ರಕ್ಷಣೆ ಮಾಡಿದ್ದಾರೆ. ಧೋನಿ ಅವರು ವಿಜಯ್ ಹಝಾರೆ ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿದ್ದರು. ಇವರೊಂದಿಗೆ ಜಾರ್ಖಂಡ್ ಆಟಗಾರರು ಸಹ ಹೊಟೇಲ್ ನಲ್ಲಿ ತಂಗಿದ್ದರು. ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ.
 
 
 
ಕ್ರಿಕೆಟಿಗಿರು ವಾಸ್ತವ್ಯ ಹೂಡಿದ್ದ ಹೋಟೆಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಹಿನ್ನಲೆಯಲ್ಲಿ ಆಟಗಾರರ ಕಿಟ್ ಗಳೆಲ್ಲ ಸಂಪೂರ್ಣ ಭಸ್ಮವಾಗಿದೆ. ಇದರಿಂದ  ವಿಜಯ್ ಹಜಾರೆ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯವನ್ನು ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
 
ದೆಹಲಿಯ ಪಾಲಂ ಕ್ರೀಡಾಂಗಣದಲ್ಲಿ ಜಾರ್ಖಂಡ್ ಮತ್ತು ಪಶ್ಚಿಮಬಂಗಾಳ ಮಧ್ಯೆ ಪಂದ್ಯ ನಡೆಯಬೇಕಿತ್ತು. ನಾಳೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಂದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here