ಧರ್ಮಂಬೀರ್ ರಿಯೋ ಕನಸು ಭಗ್ನ

0
384

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಡೋಪ್ ಟೆಸ್ಟ್​ನಲ್ಲಿ 200ಮೀ ಓಟಗಾರ  ಧರ್ಮಂಬೀರ್ ಸಿಂಗ್(36) ವಿಫಲರಾಗಿದ್ದಾರೆ. ಇದರಿಂದಾಗಿ ಪುರುಷ ಓಟಗಾರನೋರ್ವ ಒಲಿಂಪಿಕ್ಸ್​ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿದ್ದಾರೆ.
 
 
 
ರಿಯೋ ಒಲಿಂಪಿಕ್ಸ್​ಗೆ ಕೇವಲ ಎರಡು ದಿನ ಬಾಕಿ ಇದ್ದು, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸಿದ ಡೋಪ್ ಟೆಸ್ಟ್​ನಲ್ಲಿ ಭಾರತದ ಮೂರನೇ ಕ್ರೀಡಾಪಟು ವೈಫಲ್ಯ ಅನುಭವಿಸಿರುವುದು ಭಾರತೀಯ ಕ್ರೀಡಾ ವಲಯವೇ ತಲೆತಗ್ಗಿಸುವಂತಾಗಿದೆ.
 
 
 
ಧರ್ಮವೀರ್ ಸಿಂಗ್​ರ ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಿದೆ. ಮೊದಲ ಪರೀಕ್ಷೆಯ ಫಲಿತಾಂಶದಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿದೆ.
 
 
ಈ ಹಿಂದೆ ಕುಸ್ತಿಪಟು ನರಸಿಂಗ್ ಯಾದವ್ ಹಾಗೂ ಶಾಟ್​ಪುಟ್ ಪಟು ಇಂದ್ರಜಿತ್ ಸಿಂಗ್ ಡೋಪ್ ಟೆಸ್ಟ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ನರಸಿಂಗ್ ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here