ಧರಣಿ ವಾಪಸ್ ಇಲ್ಲ

0
364

ಬೆಂಗಳೂರು ಪ್ರತಿನಿಧಿ ವರದಿ
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್ ಇಲ್ಲ. ತಮ್ಮ ಬೇಡಿಕೆಗಳು ಈಡೇರಿಸುವವರೆಗೂ ಇಲ್ಲಿರುವ ಎಲ್ಲಾ ಅಂಗನವಾಡಿ ನೌಕರರು ಧರಣಿ ಮುಂದುವರಿಸಬೇಕೆಂದಿದ್ದಾರೆ ಎಂದುರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹೇಳಿದ್ದಾರೆ.
 
 
 
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ವರಲಕ್ಷ್ಮೀ, ಏ.19ರಂದು ಸಭೆ ನಡೆಸುವುದಾಗಿ ಸಿಎಂ ಭರವಸೆ ಮಾತ್ರ ನೀಡಿದ್ಧಾರೆ. ಈಗಲೇ ಬೇಡಿಕೆ ಈಡೇರಿಸಲ್ಲ ಎಂದು ಸಿಎಂ ಹೇಳಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಯಲಿದ್ದಾರೆ ಎಂದಿದ್ದಾರೆ.
 
 
ಸಿಎಂ ಸಿದ್ದರಾಮಯ್ಯ ಇಗೋ ಬಿಡಬೇಕು. ನಾಳೆ ಇನ್ನೂ ಹೆಚ್ಚು ಅಂಗನವಾಡಿ ಕಾರ್ಯಕರ್ತರು ಬರುತ್ತಾರೆ. ಸಿಎಂ ಇಗೋ ಬೀಡಬೇಕು. ಬಂದಿಸಿದ್ರೆ ಸೆಂಟ್ರಲ್ ಜೈಲಿಗೆ ಹಾಕ್ಲಿ, ಇಲ್ಲಿದ್ರೆ ನಮ್ಗೆ ಊಟ-ನೀರಿಗೆ ಪ್ರಾಬ್ಲಂ, ಜೈಲಲ್ಲಿ ಹೇಗೂ ಊಟ-ನೀರು-ತಿಂಡಿ ಫ್ರೀ ಸಿಗುತ್ತದೆ. ಸಮಸ್ಯೆ ಇರಲ್ಲ. 20 ಸಾವಿರ ಜನರನ್ನ ಜೈಲಿಗೆ ಹಾಕಲಿ, ಅವರು ಹೊಡೆದ್ರು ಹೊಡೆಸಿಕೊಳ್ಳುತ್ತೇವೆ, ಆದ್ರೆ ಇಲ್ಲಿಂದ ಯಾವುದೇ ಕಾರಣಕ್ಕೂ ಕದಲಲ್ಲ ಎಂದು ವರಲಕ್ಷ್ಮೀ ಹೇಳಿದ್ದಾರೆ.

LEAVE A REPLY

Please enter your comment!
Please enter your name here