ಧರಣಿ ನಿರತ ಬಸವರಾಜ್ ಗೆ ಗಾಯ

0
315

ನಮ್ಮ ಪ್ರತಿನಿದಿ ವರದಿ
ಕಲಬುರುಗಿಯಲ್ಲಿ ಬಸವರಾಜ್ ಎಂಬವರಿಗೆ ಗಾಯವಾಗಿದೆ. ಟಯರ್ ಗೆ ಬೆಂಕಿ ಹಚ್ಚುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬಸವರಾಜ್  ಅವರ ಹಣೆ ಹಾಗೂ ಭುಜದ ಭಾಗಕ್ಕೆ ಗಾಯವಾಗಿದೆ. ಗಾಯಾಳುವನ್ನು  ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅವರು ಚೇತರಿಸುತ್ತಿದ್ದಾರೆ. ಕಲಬುರುಗಿ ಮಾರ್ಕೆಟ್ ಬಳಿ ಈ ಘಟನೆ ನಡೆದಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಸಂದರ್ಭದಲ್ಲಿ ಬೆಂಕಿಯ ಜ್ವಾಲೆ ಧರಣಿ ನಿರತರ ಧ್ವಜಕ್ಕೆ ತಗುಲಿ ಈ ಅವಘಡ ಸಂಭವಿಸಿದೆ. ಬಸವರಾಜ್ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here