ಧನ್ವಂತರಿ ರೂಪದ ಭಗವಂತರು ನಿತ್ಯಾನಂದ ಸ್ವಾಮಿಜಿಗಳಾಗಿದ್ದರು..!

0
974

ನಿತ್ಯ ಅಂಕಣ:೫೯ – ತಾರಾನಾಥ್‌ ಮೇಸ್ತ ಶಿರೂರು.
ಭಗವಾನ್ ನಿತ್ಯಾನಂದ ಸ್ವಾಮಿಗಳ ಬಳಿಯಲ್ಲಿ ಹಣವು, ಯಾವೊಂದು ಆದಾಯ ಮೂಲಗಳಿಲ್ಲದೆ ಏಲ್ಲಿಂದ ಬರುತ್ತದೆ..? ಏನ್ನುವ ಪ್ರಶ್ನೆ ಸಾರ್ವಜನಿಕರಿಗೆ, ಭಕ್ತರಿಗೆ, ಇಲಾಖಾ ಅಧಿಕಾರಿಗಳಿಗೆ ಸಂಶಯವಾಗಿ ಕಾಡುತ್ತಿರುತ್ತದೆ. ನಿತ್ಯಾನಂದರು ಕಾಂಞಂಗಾಡ್ ಆಶ್ರಮ ಚಟುವಟಿಕೆಗಳ ನೋಡಿಕೊಳ್ಳಲು ಸಹಾಯಕನಾಗಿ ಶ್ರೀಶಾಂತಿ ಸ್ವಾಮಿ ಅವರಿಗೆ ಜವಾಬ್ದಾರಿಯನ್ನು ನೀಡಿದ್ದರು. ಜತೆಗೆ ಆತನ ಪ್ರಮಾಣಿಕವಾದ ಸೇವಾಕಾರ್ಯ ಗಮನಿಸಿ ಕೋಶಾಧಿಕಾರಿ ಹುದ್ದೆಯನ್ನು ನೀಡಿದ್ದರು. ಸ್ವಾಮೀಜಿ ಅವರ ಹತ್ತಿರದ ನಿಕಟವರ್ತಿಯಾದರೂ, ಶ್ರೀಶಾಂತಿ ಸ್ವಾಮಿ ಅವರಿಗೆ, ನಿತ್ಯಾನಂದ ಸ್ವಾಮಿಗಳಿಗೆ ಪ್ರತಿದಿನ ಕೂಲಿ ವಿತರಿಸಲು, ಆಶ್ರಮ ನಡೆಸಲು, ಎಲ್ಲಿಂದ ಹಣ ಸಿಗುತ್ತದೆ…? ಅದರ ಮೂಲ ಎಲ್ಲಿದೆ..? ಎಂದು, ಎಲ್ಲರಂತೆಯೇ ಕೂತುಹಲ ಮೂಡುತ್ತದೆ. ಅದರಂತೆ ಕೂತುಹಲ ತಾಳಲಾರದೆ, ಉತ್ತರ ಪಡೆಯಲು ನಿತ್ಯಾನಂದರಲ್ಲಿ ಅವರು ಕೇಳಿಯೇಬಿಟ್ಟರು. ಆಗ ಸ್ವಾಮಿಗಳು, “ಹೋಗಿ ಬಾವಿಯೊಳಗೆ ಇಣುಕಿ ನೋಡು” ಎಂದರಂತೆ.

ಅದರಂತೆ ಶ್ರೀಶಾಂತಿ ಸ್ವಾಮಿ ಅವರು ಬಾವಿ ಹತ್ತಿರ ಹೋಗಿ ಇಣುಕಿ ನೋಡಿದರು. ಅಲ್ಲಿ ಅವರಿಗೆ ಸ್ವಾಮಿಗಳು ಹೇಳಿದಂತೆ, ನೋಟಿನ ಕಟ್ಟುಗಳು ಕಂಡು ಬಂದವು. ನಂತರ ಶ್ರೀಶಾಂತಿ ಸ್ವಾಮಿಗಳು, ‘ಧನ ಭಂಡಾರವು ಬಾವಿಯಾಗಿದೆ’ ಅದರೊಳಗಿರುವ ‘ಧನ ಸಂಪತ್ತು’ ರಕ್ಷಿಸುವವರು ಯಾರು..? ಎಂದು ಕೇಳಿದರು. ಆಗ ನಿತ್ಯಾನಂದ ಸ್ವಾಮಿಗಳು ನೀನು ಮತ್ತೊಮ್ಮೆ ಬಾವಿಯೊಳಗೆ ಇಣುಕಿ ನೋಡಿ ಬಾ, ಬಳಿಕ ನಿನಗೆ ಯಾರು ರಕ್ಷಿಸುತ್ತಿದ್ದಾರೆ ಎಂದು ತಿಳಿದು ಬರುತ್ತದೆ ಎಂದರು. ಸ್ವಾಮಿಗಳು ಹೇಳಿದಂತೆ ಮತ್ತೊಮ್ಮೆ ಶಾಂತಿ ಸ್ವಾಮಿಗಳು ಬಾವಿಯಲ್ಲಿ ಇಣುಕಿ ನೋಡುತ್ತಾರೆ. ಬಾವಿಯೊಳಗೆ ಅವರಿಗೆ ಕಂಡ ದೃಶ್ಯವು ಭಯಗೊಳಿಸುತ್ತದೆ. ಹತ್ತಾರು ಸರ್ಪಗಳು ಹೆಡೆ ಅರಳಿಸಿ ಹಣದ ಕಟ್ಟಿನ ಮೇಲೆ ಸಂಚರಿಸುತ್ತಿದ್ದವು. ಗುರುದೇವರು ಹಣ ಎಲ್ಲಿದೆ, ಹೇಗೆ ರಕ್ಷಣೆಯಲ್ಲಿ ಇದೆ ಎಂದು ತಿಳಿದೆಯಾ..! ಎಂದು ಹೇಳಿ ನಿತ್ಯಾನಂದರು ನಗಲಾರಂಭಿಸಿದರು.

ಕಣ್ಣನ್ನೂರಿನ ಶ್ರೀ ವಿ.ಕೃಷ್ಣನ್ ಎಂಬುವುರ ತಂಗಿಗೆ ಎರಡು ಅವಳಿ ಗಂಡು ಮಕ್ಕಳಿದ್ದವು. ಅವುಗಳು ಸಹಜವಾಗಿ ಉತ್ತಮ ಬೆಳವಣಿಗೆ ಕಂಡಿದ್ದವು. ಒಮ್ಮೆ ಇದ್ದಕಿದ್ದಂತೆ ಅವಳಿ ಮಕ್ಕಳಿಗೆ ಅಪಸ್ಮಾರ ವ್ಯಾಧಿಯು ಬಾಧಿಸಿತು. ಒಮ್ಮೆ ವಾಸಿಯಾದರೆ, ಪುನಃ ಅದೇ ಕಾಯಿಲೆ ಬಾಧಿಸಿ ಮಕ್ಕಳಿಗೆ ಕಾಡುತಿತ್ತು. ಮಕ್ಕಳ ಅನಾರೋಗ್ಯದ ವಿಚಾರ ಕುಟುಂಬದವರಿಗೆ ಬಹಳವಾಗಿ ಚಿಂತೆಯನ್ನುಂಟು ಮಾಡಿತು. ಬಹಳಷ್ಟು ವೈದ್ಯರು, ನಾಟಿ ಪಂಡಿತರುಗಳಿಂದ ಅಗತ್ಯವಾದ ಚಿಕಿತ್ಸೆಗಳು ಮಕ್ಕಳಿಗೆ ನಡೆಯುತ್ತದೆ. ಆದರೆ ಚಿಕಿತ್ಸೆ ಫಲ ಕಂಡಿರುವುದಿಲ್ಲ.

ಮಕ್ಕಳ ವೇದನೆ ಕಂಡು, ಮರುಗಿದ ವಿ ಕೃಷ್ಣನ್ ನಿತ್ಯಾನಂದರ ಬಳಿಗೆ ಕರೆದುಕೊಂಡು ಹೋಗುವುದು ಸೂಕ್ತವೆಂಬ ತಿರ್ಮಾನಕ್ಕೆ ಬರುತ್ತಾರೆ. ಅದರಂತೆ ಅವರು, ಅವಳಿ ಮಕ್ಕಳನ್ನು ನಿತ್ಯಾನಂದರ ಬಳಿಗೆ ಕರೆದುಕೊಂಡು ಬರುತ್ತಾರೆ. ಮುದ್ದಾದ ಅವಳಿ ಮಕ್ಕಳ ಕಂಡ ನಿತ್ಯಾನಂದರು ಆನಂದ ಪಡುತ್ತಾರೆ. ತನ್ನ ಎರಡು ತೊಡೆಯ ಮೇಲೆ ಒಂದೊಂದು ಮಗುವನ್ನು ಕುಳ್ಳಿರಿಸಿ ಮುದ್ದಾಡುತ್ತಾರೆ. ಬಾಳೆ ಹಣ್ಣನು ಸಣ್ಣ ಸಣ್ಣ ತುಂಡುಗಳಾಗಿಸಿ ತಮ್ಮ ಕೈಯಿಂದಲೇ ಮಕ್ಕಳಿಗೆ ತಿನ್ನಿಸುತ್ತಾರೆ. ಮುಂದೆ ಪದೇ ಪದೇ ಬಾಧಿಸುತ್ತಿದ್ದ ಅಪಸ್ಮಾರ ಕಾಯಿಲೆ ಮುಂದೆಂದು ಮಕ್ಕಳಿಗೆ ಬಾಧಿಸುವುದಿಲ್ಲ. ಮುಂದೆ ಅವಳಿ ಮಕ್ಕಳು ಆರೋಗ್ಯವಂತರಾಗಿ ಬೆಳವಣಿಗೆ ಕಾಣುತ್ತವೆ. ಅದರಂತೆ ಹಲವಾರು ರೋಗಿಗಳಿಗೆ ಧನ್ವಂತರಿ ರೂಪದ ಭಗವಂತರು ನಿತ್ಯಾನಂದ ಸ್ವಾಮಿಜಿಗಳಾಗಿದ್ದರು.

LEAVE A REPLY

Please enter your comment!
Please enter your name here