ಧನ್ವಂತರಿ ಪೂಜೆಯಂಗವಾಗಿ ಯಕ್ಷಗಾನ ತಾಳಮದ್ದಲೆ

0
503

ವರದಿ: ಗೋವಿಂದ ಬಿಜಿ
ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ನೇತೃತ್ವದಲ್ಲಿ ಮನೆ ಮನೆ ತಾಳಮದ್ದಳೆ ಅಭಿಯಾನದ ಅಂಗವಾಗಿ ಡಾ. ಶಿವಕುಮಾರ್ ಅಡ್ಕ ಅವರ ನಿವಾಸದಲ್ಲಿ “ಮಾಗದ ವಧೆ” ಯಕ್ಷಗಾನ ತಾಳಮದ್ದಳೆ ಜರಗಿತು.
 
 
ಪೂರ್ವಾಹ್ನ ಶ್ರೀ ಧನ್ವಂತರೀ ಪೂಜೆ ಜರಗಿ ಬಳಿಕ ಯಕ್ಷಗಾನ ಕೂಟವು ಜರಗಿತು. ಈ ಸಂದರ್ಭದಲ್ಲಿ ಕಟೀಲು ಮೇಳದ ಖ್ಯಾತ ಭಾಗವತರಾದ ಪುಂಡಿಕೈ ಗೋಪಾಲಕೃಷ್ಣ ಭಟ್ ಮತ್ತು ತಲ್ಪಣಾಜೆ ವೆಂಕಟ್ರಮಣ ಭಟ್ ಅವರನ್ನು ಹಿರಿಯ ಯಕ್ಷಗಾನ ಕಲಾವಿದರಾದ ಅಡ್ಕ ಗೋಪಾಲಕೃಷ್ಣ ಭಟ್ ಅವರು ಶಾಲು ಹೊದೆಸಿ ಗೌರವಿಸಿದರು.
 
 
ಹಿಮ್ಮೇಳದಲ್ಲಿ ಭಾಗವತರಾಗಿ ಪುಂಡಿಕೈ ಗೋಪಾಲಕೃಷ್ಣ ಭಟ್ ಮತ್ತು ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆ ಮತ್ತು ಮದ್ದಳೆ ವಾದಕರಾಗಿ ಈಶ್ವರ ಭಟ್ ಬಳ್ಳಮೂಲೆ ಹಾಗೂ ರಾಜೇಂದ್ರ ಪ್ರಸಾದ್ ಪುಂಡಿಕೈ ಭಾಗವಹಿಸಿದರು. ಪಾತ್ರವರ್ಗದಲ್ಲಿ ಅಡ್ಕ ಗೋಪಾಲಕೃಷ್ಣ ಭಟ್, ಬೆಳ್ಳಿಗೆ ನಾರಾಯಣ ಮಣಿಯಾಣಿ, ಬೇ. ಸಿ. ಗೋಪಾಲಕೃಷ್ಣ ಭಟ್, ಪೆರಡಂಜಿ ಗೋಪಾಲಕೃಷ್ಣ ಭಟ್, ಕೃಷ್ಣ ಭಟ್ ಅಡ್ಕ, ಸುಬ್ರಹ್ಮಣ್ಯ ಭಟ್ ಅಡ್ಕ, ಅನಿರುದ್ಧ ವಾಸಿಷ್ಠ ಶರ್ಮಾ ಉಡುಪುಮೂಲೆ ಹಾಗೂ ಶ್ರೀರಾಮ ಅಡ್ಕ ಭಾಗವಹಿಸಿದರು.
 
 
ಡಾ. ಶಿವಕುಮಾರ್ ಅಡ್ಕ ಸ್ವಾಗತಿಸಿ ಮುರಳಿಕೃಷ್ಣ ಸ್ಕಂದ ಧನ್ಯವಾದ ಸಮರ್ಪಿಸಿದರು. ಯಕ್ಷಗಾನ ಮಾಹಿತಿಗಳ ಅಪೂರ್ವ ಸಂಗ್ರಾಹಕ ರಾಮಚಂದ್ರ ಭಟ್ ಬಣ್ಪತ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here