ಧನಸಹಾಯ : ಅರ್ಜಿ ಆಹ್ವಾನ

0
849

 
ಮ0ಗಳೂರು ಪ್ರತಿನಿಧಿ ವರದಿ
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2016-17ನೇ ಸಾಲಿನ ಕನ್ನಡ ಅಭಿವೃದ್ದಿ ಯೋಜನೆಯಡಿ ವಿವಿಧ ಯೋಜನೆಗಳಿಗೆ ಧನ ಸಹಾಯ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
 
 
2015-16ನೇ ಸಾಲಿನಲ್ಲಿ ಯಾವುದೇ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಪಿ.ಎಚ್.ಡಿ, ಎಂ.ಪಿ.ಎಲ್ ಪದವಿ ಪಡೆದ ಪ್ರಬಂಧಗಳ ಹಸ್ತ ಪ್ರತಿ ಮುದ್ರಣಕ್ಕೆ ಧನಸಹಾಯಕ್ಕಾಗಿwww.kannadasiri.co.in ನಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 30 ಕೊನೆಯ ದಿನ.
 
 
2015ರ ಸಾಲಿನಲ್ಲಿ ಪ್ರಕಟಿಸಿರುವ ಸೃಜನೇತರ ಕೃತಿಗಳಿಗೆ ಧನ ಸಹಾಯ ಪಡೆಯಲು www.kannadasiri.co.in ನಲ್ಲಿ ಅರ್ಜಿಗಳನ್ನು ಪಡೆದು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-02 ಈ ವಿಳಾಸಕ್ಕೆ ನೇರವಾಗಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದೆ. ಎಂದು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here