ಧಗ..ಧಗ ಉರಿದರೂ ಶಾಖ ತಾಗಲೇ ಇಲ್ಲ!

0
1101

ನಿತ್ಯ ಅಂಕಣ ಭಾಗ-೨

ಮಂಜೇಶ್ವರದ ರೈಲ್ವೆ ಸ್ಟೇಷನ್ ಬಳಿ ಲಂಗೋಟಿಧಾರಿ ಧೃಡಕಾಯದ ಕಪ್ಪುಬಣ್ಣದ ವ್ಯಕ್ತಿಯೊರ್ವನನ್ನು ಕಂಡು ಅಲ್ಲಿದ್ದ ಜನರು ಹುಚ್ಚರೆಂದು ಭಾವಿಸತೊಡಗಿದರು. ಅಲ್ಲಿದ್ದ ಗೊಳಿಮರದ ಅಡಿಯಲ್ಲಿ ಮೌನ ಸ್ಥಿತಿಯಲ್ಲಿ ಆ ಊರಿಗೆ ಬಂದಿರುವ ಅಪರಿಚಿತರು ಕೂತಿದ್ದರು. ಕುಡಿತದ ಅಮಲಿನಲ್ಲಿದ್ದ ಕೆಲವರು ಅವರ ಬಳಿ ಬಂದು, ಯಾರೆಂದು ತಿಳಿಯಲು ಪ್ರಯತ್ನಿಸಿದರು.

ಆದರೆ ಲಂಗೋಟಿಧಾರಿಯ ಮೌನತೆಯನ್ನು ಅವರಿಂದ ಕದಲಿಸಲು ಆಗಲಿಲ್ಲ. ವಿಘ್ನ ಸಂತೋಷಿಗಳು ತೆಂಗಿನ ಚಿಪ್ಪಿನ ಮಾಲೆಗಳನ್ನು ತಯಾರಿಸಿದರು, ನಂತರ ಮಾಲೆಯನ್ನು ಅಪರಿಚಿತರ ಸೊಂಟಕ್ಕೆ ಕಟ್ಟಿದರು, ಬಳಿಕ ಬೆಂಕಿ ನೀಡಿದರು. ಬೆಂಕಿ ಧಗ ಧಗನೆ ಉರಿಯಲಾರಂಭಿಸಿತು. ಅಗ್ನಿಶಾಖವು ಅಪರಿಚಿತರನ್ನು ಒಂದಿಷ್ಟು ಸುಡಲಿಲ್ಲ.

ಚಿತ್ರ : ಅಂತರ್ಜಾಲ ಕೃಪೆ

ಬಿಸಿಯ ಅನುಭವವು ಅವರಿಗೆ ಆಗಲಿಲ್ಲ. ಯಾವೊಂದರ ಪರಿವೆಯೆ ಇಲ್ಲದೆ, ಮೌನದ ಸ್ಥಿತಿಯಲ್ಲಿಯೇ ಅವರಿದ್ದರು. ಅಲ್ಲಿದ್ದವರೆಲ್ಲರು ಆ ದೃಶ್ಯ ಕಂಡು ದಿಗ್ಭ್ರಮೆಗೊಂಡರು. ನಂತರ ಅವರಿಗೆಲ್ಲರಿಗೂ ತಾವು ಹುಚ್ಚರೆಂದು ಭಾವಿಸಿದ ಅಪರಿಚಿತ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ ಅವಧೂತ ಭಗವಾನ್ ನಿತ್ಯಾನಂದರೆಂದು ತಿಳಿದು ಬಂದಿತು. ನಂತರ ಅವರಿಗೆಲ್ಲ ಮಹಿಮೆ ಅರಿವಾಯಿತು. ತಾವು ಮಾಡಿದ ದೊಡ್ಡದಾದ ತಪ್ಪಿಗೆ ಪಶ್ಚಾತಪಪಟ್ಟರು. ಜೊತೆಯಲ್ಲಿ ತಪ್ಪಿಗೆ, ತಕ್ಕ ಶಿಕ್ಷೆ ನೀಡಬಹುದೆನ್ನುವ ಭಯವು ಅವರಿಗೆಲ್ಲರಿಗೂ ಕಾಡಿತು. ಎಲ್ಲರೂ ಗುರುದೇವರನ್ನು ಭಕ್ತಿಯಿಂದ ನಮಸ್ಕರಿಸಿದರು. ಆದರೆ ಅವಧೂತ ನಿತ್ಯಾನಂದರು ತಪ್ಪಿಸ್ಥರನ್ನು ಶಿಕ್ಷಿಸಲಿಲ್ಲ..! ಬದಲಾಗಿ ಕ್ಷಮಿಸಿದರು.

Advertisement

ತಾರಾನಾಥ ಮೇಸ್ತ ಶಿರೂರು.

LEAVE A REPLY

Please enter your comment!
Please enter your name here