ಧಗಧಗನೆ ಹೊತ್ತಿಉರಿದ ಸ್ಕಾರ್ಪಿಯೋ

0
205

 
ಬೆಂಗಳೂರು ಪ್ರತಿನಿಧಿ ವರದಿ
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಕೊಂಡ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಬಳಿ ನಡೆದಿದೆ. ಬೆಂಕಿಯ ಕೆನ್ನಾಲೆಗೆ ಸ್ಕಾರ್ಪಿಯೋ ಕಾರು ನಡುರಸ್ತೆಯಲ್ಲೇ ಧಗಧಗನೆ ಹೊತ್ತಿಉರಿದಿದೆ.
 
 
 
ಮೊದಲು ಕಾರಿನ ಎಸಿಯಲ್ಲಿ ಹೊಗೆ ಕಾಣಿಸಕೊಂಡಿದ್ದು, ಹೊಗೆ ಕಂಡ ತಕ್ಷಣವೇ ಕಾರು ಚಾಲಕ ಕೆಳಗಿಳಿದಿದ್ದಾನೆ. ಕ್ಷಣಾರ್ಧದಲ್ಲೇ ಬೆಂಕಿಯ ಕಿಡಿ ಇಡೀ ಕಾರನ್ನೇ ಆವರಿಸಿದೆ.
 
 
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here