ದ.ಕ ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವ

0
354

ಮ0ಗಳೂರು ಪ್ರತಿನಿಧಿ ವರದಿ
2016-17 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದ.ಕ ಜಿಲ್ಲೆಯಾದ್ಯಂತ ಆಯ್ದ 13 ಚಲನಚಿತ್ರ ಮಂದಿರಗಳಲ್ಲಿ “ ಮಕ್ಕಳ ಚಲನಚಿತ್ರೋತ್ಸವ” ವನ್ನು ಡಿ. 20ರಿಂದ 22ರವರೆಗೆ ನಡೆಸಲು ನಿರ್ಧರಿಸಲಾಗಿದೆ.
 
 
 
ಈ ಮಕ್ಕಳ ಚಲನಚಿತ್ರೋತ್ಸವದ ಅಂಗವಾಗಿ “ಮಾನಿತ” ಎಂಬ ಕನ್ನಡ ಚಲನಚಿತ್ರವನ್ನು ಈ ಕೆಳಕಂಡ ಚಲನಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಬೆಳಿಗ್ಗೆ 10 ಗಂಟೆಯಿಂದ 12ಗಂಟೆವರೆಗೆ ಮಂಗಳೂರಿನ ಸೆಂಟ್ರಲ್, ನ್ಯೂಚಿತ್ರಾ, ರೂಪವಾಣಿ , ಜ್ಯೋತಿ, ರಾಮಕಾಂತಿ, ಸುಚಿತ್ರಾ, ಪ್ರಭಾತ್, ಪ್ಲಾಟಿನಂ ಚಿತ್ರಮಂದಿರ, ಮೂಡಬಿದ್ರೆಯ ಅಮರಶ್ರೀ ಚಿತ್ರಮಂದಿರ, ಸುರತ್ಕಲ್‍ನ ನಟರಾಜ್ ಚಿತ್ರಮಂದಿರ , ಪುತ್ತೂರಿನ ಭಾರತ್ ಚಿತ್ರಮಂದಿರ ಹಾಗೂ ಸುಳ್ಯದ ಸಂತೋಷ್ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವುದು. ದ.ಕ ಜಿಲ್ಲೆಯ ಎಲ್ಲಾ ಮಕ್ಕಳು ಈ ಸದಾವಕಾಶವನ್ನು ಉಪಯೋಗಿಸುವಂತೆ ದ.ಕ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here