ದ್ರಾವಿಡ ಬ್ರಾಹ್ಮಣ ಸಂಘದ ಸಭೆ

0
327

ವರದಿ: ಗೋವಿಂದ ಬಿಜಿ
ದ್ರಾವಿಡ ಬ್ರಾಹ್ಮಣ ಸಂಘ ಕಾಸರಗೋಡು ಬೋವಿಕ್ಕಾನ ಇದರ ಸಭಾಕಾರ್ಯಕ್ರಮವು ಮಲ್ಲದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಜರಗಿತು. ನವೀನ ಭಟ್ ಕುಂಜಿರ್ಕಾನ ಅವರು ಪ್ರಾರ್ಥನೆ ಮಾಡಿದರು. ಪಾಂಡುರಂಗ ಭಟ್ಟ ಆನೆಮಜಲು ಅಧ್ಯಕ್ಷಸ್ಥಾನ ವಹಿಸಿದರು.
 
 
 
ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಟ್ರಸ್ಟಿ ಆನೆಮಜಲು ವಿಷ್ಣು ಭಟ್ ಅವರು ಮುಂದಿನ ಕಾರ್ಯಯೋಜನೆಗಳ ಬಗ್ಗೆ ನಿರ್ದೇಶನಗಳನ್ನಿತ್ತರು. ರಾಜೇಶ್ ಮಜಕ್ಕಾರ್ ಅವರು ಕಟ್ಟಡ ಸಮುಚ್ಚಯ ನಿರ್ಮಾಣದ ಮಾಹಿತಿಗಳನ್ನಿತ್ತರು.
 
 
ಸೀತಾರಾಮ ಬಳ್ಳುಳ್ಳಾಯ, ಡಾ. ಸುಬ್ರಾಯ ಭಟ್,ಶಂಕರನಾರಾಯಣ ಹೊಳ್ಳ ಪರಯಂಗೋಡು, ಗೋವಿಂದಬಳ್ಳಮೂಲೆ ಶುಭಾಶಂಸನೆಗಳನ್ನಿತ್ತರು. ಶ್ರೀಕಾಂತ ಕಾಸರಗೋಡು, ಸದಾಶಿವ ಭಟ್ ಮುಂಡಪ್ಪಳ್ಳ ಅವರು ಸಾಂದರ್ಭಿಕ ಸಲಹೆ ಸೂಚನೆಗಳನ್ನಿತ್ತರು. ವಿಷ್ಣುಮೋಹನ ಐಲ್ಕುಂಜೆ ಸ್ವಾಗತ ಮತ್ತು ಮುರಳಿಕೃಷ್ಣ ಸ್ಕಂದ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here