ದೈವಕ್ಕೆ ಪೋಶಾಕು-ಧಿಮಾಕು ಎಂತ ವರಾತ!

0
341

ಮಸೂರ ಅಂಕಣ: ಆರ್ ಎಂ ಶರ್ಮ
ದೈವಕ್ಕೆ ಉಡಿಗೆ-ತೊಡಿಗೆ-ಒಂದು ವಿಜೃಂಭಣೆ!
ಎಲ್ಲವೂ ಇರುವ-ಏನೂ ಬೇಡದ ಪರಾತ್ಪರಕ್ಕೆ ಭಕ್ತರ-ಕಾಣಿಕೆ-ಸಮಪ೯ಣೆ ನಡೆದದ್ದೇ!
ಎಲ್ಲವೂ ಇರುವ ದೈವಕ್ಕೆ ಇವೆಲ್ಲಾ ಏಕೆ ಎಂದರೆ-ಒಗ್ಗದ-ಅಗ್ಗದ-ಒಲ್ಲದ ಭಕ್ತಮನ ಸುಮ್ಮನಿರಲಾರದೆ!
ಸುಮ್ಮನಿಲ್ಲದಮೇಲೆ ಏನಾದರೂ ಕೈಂಕಯ೯ವೇ ಭಕ್ತ ಮನದ ತುಡಿತ.
ಇದಕ್ಕೆ ದುಡಿತ-ಅದೇ ತನ್ನಿಷ್ಟದ ವೇಷ ಭೂಷಣ -ಸಾದು-ಸಿದ್ಧ.
ನಮ್ಮ ಪ್ರಶ್ನೆ ಈ ಕೈಮ್ಕಯ೯ಕ್ಕೆ ಧನ್ಯತೆ ಉಂಟೇ ಎಂದರೆ-ಉತ್ತರಿಸಲು ತತ್ತರಿಸುವ-ತಡವರುಸುವ ಸೆವಾಕತೃ೯.
ಪ್ರಶ್ನೆ ಕೇಳಿದ ನಾವೇ ಉತ್ತರವನ್ನೂ ಒದಗಿಸಿ ಸಮಾಧಾನ ಒದಗಿಸುವುದೇ ರೋಚಕ-ಸಮಯೋಚಿತ.
ಪರಾತ್ಪರಕ್ಕೆ ಪೊಶಾಕು-ಇಲ್ಲಿಲ್ಲವೇ ಧಿಮಾಕು?
ನಿಜಕ್ಕೂ-“ಧಿಮಾಕು”-ಅಧಿಕಪ್ರಸಂಗತನವಲ್ಲ.
ಆದರೆ ಲೊಕದ ರೂಢಿಯಲ್ಲಿ-ಕನ್ನಡದಲ್ಲಿ “ಧಿಮಾಕಿಗೆ-ಅಧಿಕಪ್ರಸಂಗತನ” “ಎಂತಲೆ ವ್ಯಾಖ್ಯಾನ.
ನಿಜಕ್ಕೂ ಧಿಮಾಕು-ಹಿಂದಿಯ ಪದ-ಇದರ ಅಥ೯ “ಬುದ್ಧಿವಂತಿಕೆ” ಎಂತಲೇ ಸರಿಯಾದ ವಿವರಣೆ.
ಅದು ಹಾಗಿರಲಿ ನವು ನಮ್ಮ ಚಿಮ್ತನವನ್ನು ಮುಂದುವರೆಸೋಣ.
ಪರಾತ್ಪರಕ್ಕೆ ಯಾವ ಉಡಿಗೆ-ತೊಡಿಗೆ ಎಂತ ಕಚಿತವಾಗಿ ಹೇಳಲು ಎಲ್ಲಿದೆ ಆಧಾರ?
ಎಲ್ಲಬಲ್ಲವನ/ಳ ಬಗೆಗೆ ಆ ಪರಮಶಕ್ತಿಯು ನಿಧಾ೯ರವಾಗಿ ಹೇಳಲು ಯೋಗ್ಯತೆಯನ್ನು ಪಡೆದಿದೆಯೇ ಎಂದರೆ ಇಲ್ಲ ಎಂತಲೆ ಸರಿಯಾದ ಉತ್ತರ.
ಲೋಖಿನ್ನ ರುಚಿಃ ಎಂತಲೊ ಅಥವಾ ಭಕ್ತಮನಕ್ಕೆ ಮನ್ನಣೆ ಎಂತಲೋ ದೈವಕ್ಕೆ ವೇಶ ಭೂಷಣದ ಮಹಿಮೆ ಎಂತದರೆ ಅಲ್ಲೇನಿದೆ ಚಚೆ೯?
ಪರಾತ್ಪರ ಭಗವದ್ಗೀತೆಯಲ್ಲಿ ಹೇಳಿದ ಮತಷ್ಟೆ ಸತ್ಯ ಉಳಿದೆಲ್ಲವೂ ಗೌಣ.
ಹಾಗಾಗಿ ಪರಾತ್ಪರದಹ್ವಯ೯
ಉದ್ಗಾರ ಕೆವಲ-
“ಪತ್ರಂ ಪುಷ್ಪಂ ಫಲಂ ತೋಯಂ ಇವಿಷ್ಟಕ್ಕೆ ಸೀಮಿತವು”.
ಇನ್ನುಳಿದವುಗಳಿಗೆ ಮಹತ್ವವಿಲ್ಲ.
ಹಾಗಾಗಿ ಅವು ಚಚಾ೯ಹ೯ವಲ್ಲವೇ ಅಲ್ಲ.
ತವನ್ಮತ್ರಕ್ಕೆ ಪೋಶಾಕು ಅಷ್ಟೇ.
ಮತ್ತೆಲ್ಲಿದೆ ವರಾತಕ್ಕೆ ಅವಕಾಶ ಎಲ್ಲಿದೆ?
ಆದರೂ ಹರಕು ಬಾಯಿಯ ಜನ ಜಗಳ ದೊಂಬಿಗೆ ಅವನ್ನೇ ಸಮಗ್ರಿ ಮಾಡಿಕೊಳ್ಳರೇ-ಎಂದರೆ ನಿವಿ೯ವಾದವಾಗಿ ಮಾಡಿಕೊಳ್ಳುತ್ತಾರೆ ಎಂತ ಉತ್ತರವು.
ನಮಗೆ ನೆನಪು ಇರುವಂತೆ ನವು ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಶಾಲೆಯಲ್ಲಿ ಗಣಪತಿ ಹಬ್ಬದ ಸಮಯದಲ್ಲಿ ಸರಿಸುಮಾರು ಒಂದು ತಿಂಗಳಕಾಲ ಪ್ರತಿದಿನ ಸಾಂಸ್ಕೃತಿಕ ಕಾಯ೯ಕ್ರಮಗಳು ಜರುಗುತ್ತಿದ್ದವು.
ಆಗೆಲ್ಲಾ ಒಂದು ಕಪ್ಪು ಹಲಗೆಯಮೆಲೆ ಪರಮತ್ಮನ ರೇಖಚಿತ್ರ ಬಣ್ಣದಲ್ಲಿ ವೈವಿಧ್ಯಮಯವಾಗಿ ಜತೆಗೆ ಉಡಿಗೆ ತೊಡಿಗೆ.
ನಿತ್ಯ ಬೇರೆಬೇರೆ ಪೋಶಾಕು ರಚನಾಕಾರರ ಅಪೇಕ್ಷೆ,ರುಚಿಗೆ ತಕ್ಕಂತೆ.
ಆಗೆಲ್ಲಾ ನಾವು ಯಾವ ವಿರೋಧವನ್ನು ನೋಡಲಿಲ್ಲ.
ಒಂದೊಮ್ಮೆ ವಿದ್ಯಾಥಿ೯ಗಳು ಉಪಾಧ್ಯಾಯರ ಬಗೆಗೆ ಟಿಕೆ ಮಾಡಲಾರರು ಎಂದರೂ ಉಳಿದ ಉಪಾಧ್ಯಾಯರು,ಮುಖ್ಯೋಪಾಧ್ಯಯರು, ಆಡಳಿತ ಮಂಡಳಿಯ ಪದಾಧಿಕಾರಿಗಳು ಯಾವ ಟೀಕೆಗಳನ್ನು ಮಾಡಿರಲಿಲ್ಲ ಎಂಬುದೂ ಗಮನಾಹ೯ವೇ.
ಅಲ್ಲಿಗೆ ಪೋಶಾಕು-ಪರಾತ್ಪರದ ಸಂಗತಿ ಚಚೆ೯ಗೆ ಗ್ರಾಸವಲ್ಲ ಎಂಬುದೇ ಮುಖ್ಯ.
ಇಷ್ಟಕ್ಕೆಲ್ಲ ಹೇತು-ದೆಹಲಿಯ ಸ್ವಾಮ್ನಾರಾಯನ ದೈವದ ಅಲಂಕಾರದ ಪೋಶಾಕಿನಬಗೆಗೆ.
ಇದಕ್ಕೆ ಆಧಾರ-ತಾ ೦೮/೦೬/೨೦೧೬ ಇಂಡಿಯಾ ಟುಡೆ ಸುದ್ದಿವಾಹಿನಿಯ ಒಂದು ಮುಖ್ಯಸುದ್ದಿಯ ಬಿತ್ತರವೇ.
ಇಲ್ಲಿಯ ಪೋಶಾಕು ಭಕ್ತರ ಅಪೇಕ್ಷೆಯಂತೆ-ಶೆಕಡಾ ೧೦೦ ಕ್ಕೆ ೧೦೦ ಆರ್.ಎಸ್.ಎಸ್ ನ ಪೋಶಾಕನ್ನು ಹೋಲುತ್ತಿತ್ತು ಎಂಬುದೇ ಆರೋಪ ಒಗ್ಗದವರಿಗೆ-ಒಲ್ಲದವರಿಗೆ-ವಿರೋಧದವರಿಗೆ.
ಇದೇ ವರಾತ.
ಇರಲಿ ಭಗವಂತನ ಮಾತನ್ನೇ ಕೇಳಿಸಿಕೊಳ್ಳೊಣ-“ಸ್ವಕಂ ರೂಪಂ ದಶ೯ಯಾಮಾಸ ಭೂಯಃ,
ಭೂತ್ವಾ ಪುನಃ ಸೌಮ್ಯವಪುಮ೯ಹಾತ್ಮ”
ಇದಕ್ಕೆ ಕಾರಣ ವಿಶ್ವರೂಪದಶ೯ನದ ಮಹತ್ತಿಗೆ ನಡುಗಿಹೋದ ಅಜು೯ನ ತ್ರಿಲೋಕವೀರ.
ಪರಾತ್ಪರದ ಸೌಮ್ಯ ದಶ೯ನ- ಅಜು೯ನನ ಮಾತು-“ದೃಷ್ಟ್ವೇದಂ ಮನುಷಂ ರೂಪಂ ತವ ಸೌಮ್ಯಂ ಜನಾದ೯ನ
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕ್ರುತಿಂ ಗತಃ”
ಇದೇ ಪೋಶಾಕಿನ ಐತಿಹ್ಯ-ಐಶ್ವಯ೯-ಒಳಗು ಹೊರಗು ಮತ್ತೆಲ್ಲಿ ಬೆರಗು ಕೊರಗು?
ಜಗತ್ತಿನಲ್ಲಿ ಸುಖವಾಗಿರಲು ಸ್ವಯಂ ತಿಳಿದಿರಬೇಕು-ಇಲ್ಲ ದಡ್ಢನಾಗಿರಬೇಕು.
ಎರಡೂ ಅಲ್ಲದ ಸ್ಥಿತಿ-“ಅರಬೆಂದ ಮಡಕೆ-ಜ್ನಾ`ನಲವ ದುವಿ೯ದಗ್ಧ”-
ಆದರೆ-“ಬ್ರಹ್ಮಾಪಿ ನರಂ ನ ರಂಜಯತಿ”-ಎಂಬ ಸುಭಾಷಿತಕಾರನ ಮಾತೇ ಮುತ್ತು.
ನಮ್ಮೀ ಚಿಂತನೆಯನ್ನು ಓದುಗ ಮಹನೀಯರು ಒರೆಗೆ ಹಚ್ಚಿ-ಚಚ್ಚಿ-ಕೊಚ್ಚಿ ವಿಮಶಿ೯ಸಲಿ-ತಿಳಿಯಾಗಿಸಲಿ-ತಿಳುವಳಿಕೆಯಾಗಸಲಿ.
ಅಲ್ಲಿಗೆ-“ಕೃಥಾಥೋ೯ಸ್ಮಿ ಅಹಂ”
ಆರ್.ಎಂ.ಶಮ೯,
ಮಂಗಳೂರು
[email protected]

LEAVE A REPLY

Please enter your comment!
Please enter your name here