ದೇಶ ರಕ್ಷಣೆ ನಮ್ಮೆಲ್ಲರ ಕರ್ತವ್ಯ : ವಿ.ವಿ.ಭಟ್

0
365

ವರದಿ: ಹರ್ಷ ರಾವ್
ವಿವೇಕಾನಂದ ವಸತಿ ನಿಲಯದಲ್ಲಿ ಜಮ್ಮು ಕಾಶ್ಮೀರದ ಉರಿ ಪ್ರಾಂತದಲ್ಲಿ ಇತ್ತೀಚೆಗೆ ಉಗ್ರರ ಅಕ್ರಮ ನಸುಳುಕೋರತನದಿಂದ ಉಗ್ರರ ಗುಂಡೇಟಿಗೆ ಬಲಿಯಾದ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಗಣದಲ್ಲಿ ನಡೆಯಿತು.
 
vevakanda-news
 
ಆರಂಭದಲ್ಲಿ ದೀಪ ಬೆಳಗಿಸಿದ ಅತಿಥಿಗಳು ತದನಂತರ ಎಲ್ಲಾ ವಿದ್ಯಾರ್ಥಿ /ವಿದ್ಯಾರ್ಥಿನಿಯರು ಭಾರತ ನಕ್ಷೆಯ ಸುತ್ತಲೂ ದೀಪ ಇಟ್ಟು ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.ತದನಂತರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐ.ಎ.ಸ್. ಅಧಿಕಾರಿಯಾದ ವಿ.ವಿ.ಭಟ್ ರವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ನಾವು ನೋಡುತ್ತಿರುವ ಇಂದಿನ ಹಿಮಾಲಯ ಘಟ್ಟ ಹಾಗಿಲ್ಲ , ವಾಸ್ತವಿಕ ವಿಷಯವೇ ಬೇರೆ ಇದೆ .ಹಾಗೂ ಉಗ್ರರಿಂದ ದಾಳಿಗೊಳಪಟ್ಟ ಉರಿಯ ಪ್ರದೇಶ ಹಾಗೂ ಇಡೀ ಕಾಶ್ಮೀರದ ಭೂಭಾಗವನ್ನು ವಿವರಿಸುತ್ತಾ ಶತ್ರುಗಳ ನುಸುಳುಕೋರತನಕ್ಕೆ ಸತತವಾಗಿ ಭಾರತದ ಸೈನಿಕರು ಹೋರಾಡಿ ದೇಶಕ್ಕಾಗಿ ಬಲಿದಾನ ಮಾಡುತ್ತಿದ್ದಾರೆ ಆದರೆ ಈ ಭಾರತಾಂಬೆ ,ತಾಯಿನೆಲ ವನ್ನು ರಕ್ಷಣೆ ಮಾಡುವ ಕೆಲಸ ನಾಗರೀಕರಾದ ಪ್ರತಿಯೊಬ್ಬನ ಕರ್ತವ್ಯ ಎಂದರು.
 
ವೇದಿಕೆಯಲ್ಲಿದ್ದ ಇನ್ನೋರ್ವ ಅತಿಥಿ ಪುತ್ತೂರಿನ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾತನಾಡಿ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ನಮ್ಮೆಲ್ಲರ ಹೊಣೆ ಎಂದು ಅಭಿಪ್ರಯಿಸಿದರು , ವೇದಿಕೆಯಲ್ಲಿ ವಸತಿ ನಿಲಯದ ಆಡಳಿತ ಮಂಡಳಿ ಅಧ್ಯಕ್ಷ ಭುಜಂಗ ಗೌಡ ,ಸಂಚಾಲಕ ತಿರುಮಲೇಶ್ವರ ಭಟ್ ,ವಿವೇಕಾನಂದ ವಸತಿ ನಿಲಯದ ಮುಖ್ಯ ನಿಲಯ ಪಾಲಕ ಗೋವಿಂದರಾಜ್ ಶರ್ಮ ಹಾಗೂ ಡಾ|| ಬಿ.ಶ್ರೀಧರ ನಾಯಕ್ , ನಿಲಯಪಾಲಕ ಹರೀಶ್ ರಾವ್ , ಶ್ರೀನಾಥ್ ಬಿ. ಹಾಗೂ ಸಹನಿಲಯಪಾಲಕರುಗಳು, ಕಿರಣ್ ಕುಮಾರ್ , ಪುನೀತ್ ,ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವೀಡಿಯೋಗಳನ್ನು ಈ ಸಂದರ್ಭ ಪ್ರದರ್ಶಿಸಲಾಯಿತು. ಅನುಶ್ರೀ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here