ದೇಶೀ ಗೋಪಾಲಕರ ವಲಯಸಭೆ

0
183

ವರದಿ: ಗೋವಿಂದ ಬಿಜೆ
ಮುಳ್ಳೇರ್ಯ ಮಂಡಲ ವ್ಯಾಪ್ತಿಯ ಪಳ್ಳತ್ತಡ್ಕ ವಲಯದ ಗೋಕೃಷಿ ವಿಭಾಗದ ಸಹಯೋಗದಲ್ಲಿ ದೇಶೀ ಗೋ ಸಾಕುವವರ ವಲಯ ಮಟ್ಟದ ಸಭೆಯು ಶ್ರೀ ಗಣಪತಿ ಭಟ್ ನೆಕ್ಕರಕಳಯ ಇವರ ಮನೆಯಲ್ಲಿ ನಡೆಯಿತು.
 
 
ದೇಶೀ ಗೋವಿನ ಸೆಗಣಿಯಿಂದ ತಯಾರಾದ ಕಪಿಲ ಸಾವಯವ ಗೊಬ್ಬರವನ್ನು ಸುಳ್ಯ ಹವ್ಯಕ ವಲಯ ಅಧ್ಯಕ್ಷ ದಂಬೆಮೂಲೆ ಸುಬ್ರಹ್ಮಣ್ಯ ಭಟ್ ಮಾರುಕಟ್ಟೆಗೆ ಬಿಡುಗಡೆ ಮಾಢಿದರು.
 
 
ಗೋ ಸೇವಾ ಪುರಸ್ಕೃತ ಕೃಷಿಕ ಸುಬ್ರಹ್ಮಣ್ಯ ಪ್ರಸಾದ ನೆಕ್ಕರಕಳಯ ಇವರ ಗೋಶಾಲೆ ಯಿಂದ ತಯಾರಾದ ಕಪಿಲ ಸಾವಯವಗೊಬ್ಬರವನ್ನು ಮೊದಲ ಗ್ರಾಹಕರಾಗಿ ದಂಬೆಮೂಲೆ ನಾರಾಯಣ ಭಟ್ ಖರೀದಿಸಿದರು.
 
ಪಳ್ಳತ್ತಡ್ಕ ವಲಯ ವ್ಯಾಪ್ತಿಯ ದೇಶೀ ಗೋ ಸಾಕುವ ವರ ಒಕ್ಕೂಟವನ್ನು ” ಕಪಿಲ ವೇದಿಕ್ ಕೌ ಕನ್ಸರ್ವೇಶನ್ ಸೊಸೈಟಿ ” ಎಂದು ನೋಂದಾವಣೆ ಮಾಡುವುದೆಂದು ತೀರ್ಮಾನಿಸಲಾಯಿತು.
 
 
ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ ಕಾಮದುಘಾ ಯೋಜನೆಯ ಆಶ್ರಯದಲ್ಲಿ ಸಾವಯವ ಗೋಕೃಷಿಯೊಂದಿಗೆ ಸ್ವಾವಲಂಬನೆಯ ಉದ್ದೇಶದಲ್ಲಿ ಒಕ್ಕೂಟವು ಕಾರ್ಯವೆಸಗುತ್ತದೆ.
 
 
ಶ್ರೀ ಶ್ರೀಗಳು ಗೌರವ ಅಧ್ಯಕ್ಷ ರಾಗಿರುವ ಈ ಸಮಿತಿಯಲ್ಲಿ ಅಧ್ಯಕ್ಷರು ದಂಬೆಮೂಲೆ ನಾರಾಯಣ ಭಟ್, ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್, ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ.ಎನ್, ಉಪಕಾರ್ಯದರ್ಶಿ ವೆಂಕಟೇಶ್ವರ ಭಟ್, ಖಜಾಂಚಿ ಪರಮೇಶ್ವರ ಭಟ್ ಪೆರುಮುಂಡ, ನಿರ್ದೇಶಕರುಗಳಾಗಿ ಜಿ.ರಾಮಕೃಷ್ಣ ಭಟ್ ಕೋರಿಕಾರ್, ಪೆರುಮುಂಡ ಶಂಕರನಾರಾಯಣ ಭಟ್, ಗಣೇಶ ಭಟ್ ಮುಂಚಿಕಾನ, ಕೃಷ್ಣ ಪ್ರಕಾಶ್ ಪಳ್ಳತಡ್ಕ, ಸುಬ್ರಹ್ಮಣ್ಯ ಕೆರೆಮೂಲೆ, ಪ್ರಸನ್ನ ಅಣ್ಣಡ್ಕ ಆಯ್ಕೆಯಾದರು.

LEAVE A REPLY

Please enter your comment!
Please enter your name here