ದೇಶದ ವಿತ್ತೀಯ ಪ್ರಗತಿಯಲ್ಲಿ ನಾಗರೀಕರೆಲ್ಲ ಒಟ್ಟಾಗಬೇಕಿದೆ

0
155

ನಮ್ಮ ಪ್ರತಿನಿಧಿ ವರದಿ
ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಡಿ.31ರಂದು ಇತ್ತೀಯ ಸಾಕ್ಷರತಾ ಅಭಿಯಾನದ ಎಂಬುದರ ಬಗೆಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ದೀಪಕ್ ಕೆ , ಲೆಕ್ಕ ಪರಿಶೋಧಕರು ಪುತ್ತೂರು ಇವರು ಆಗಮಿಸಿದ್ದರು ಹಾಗೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಗಣೇಶ್ ಜೋಶಿ,ಲೆಕ್ಕ ಪರಿಶೋಧಕರು ಪುತ್ತೂರು ಹಾಗೂ ಅಧ್ಯಕ್ಷರು ,ಆಡಳಿತ ಮಂಡಳಿ , ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇವರು ವಹಿಸಿಕೊಂಡಿದ್ದರು.
 
 
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಕೆ.ಜಿ.ಕೃಷ್ಣಮೂರ್ತಿ ಇವರು ಉಪಸ್ಥಿತರಿದ್ದರು.ಬಳಿಕ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಸಿದ ಇವರು ಕಾರ್ಯಕ್ರಮದ ಸ್ಥೂಲ ವಿವರಣೆ ನೀಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದೀಪಕ್ ಕೆ ಮಾತನಾಡುತ್ತಾ ಪ್ರಸ್ಥುತ ಡಿಜಿಟಲ್ ಯುಗದಲ್ಲಿ ನಗದು ವಹಿವಾಟು ಚಟುವಟಿಕೆಯನ್ನು ಬ್ಯಾಂಕಿಗೆ ಹೋಗದೆ ಹೇಗೆ ಅತ್ಯಂತ ಸುಲಭ ಹಾಗೂ ಸುರಕ್ಷಿತವಾಗಿ ತಮ್ಮ ಮೊಬೈಲುಗಳ ಮೂಲಕ ನಡೆಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯಾಗಿ ನಡೆಸಿಕೊಟ್ಟರು , ಮಾತನಾಡುತ್ತಾ ಎಲ್ಲಾ ಎಂ.ಪಿ.ಐ. ನಗದು ಸಲ್ಲಿಕೆ ವಿಧಾನಗಳಾದ ಇಂಟರ್ನೆಟ್ ಬ್ಯಾಂಕಿಂಗ್ , ಮೊಬೈಲ್ ಬ್ಯಾಂಕಿಂಗ್ ,ಆಧಾರ್ ಸಂಖ್ಯೆಯನ್ನು ಸೇರಿಸಿ ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿಕೊಂಡು ಬ್ಯಾಂಕಿಂಗ್ ವಹಿವಾಟುಗಳನ್ನು ಅತ್ಯಂತ ಭದ್ರತೆಯಿಂದ ದಿನದ ಯಾವುದೇ ವೇಳೆಯಲ್ಲಿ ನಗದು ವಹಿವಾಟುಗಳನ್ನು ತ್ವರಿತಗತಿಯಲ್ಲಿ ಮಾಡುವ ಬಗೆಗೆ ಪ್ರಾತ್ಯಕ್ಷಿಕೆ ನೀಡಿದರು. ಇಂದು ನಗದು ರಹಿತ ವ್ಯವಹಾರಕ್ಕೆ ಹೋಗಬೇಕಾದ ಅಗತ್ಯತೆ ಇದೆ , ಹಲವಾರು ಬೇನಾಮಿ ವಹಿವಾಟುಗಳನ್ನು ನಿಲ್ಲಿಸಿ ಬ್ರಷ್ಟಾಚಾರವನ್ನು ಕಡಿಮೆಗೊಳಿಸುವ ಸರ್ಕಾರದ ಕ್ರಮಕ್ಕೆ ಜೊತೆಯಾಗಬೇಕಿದೆ ಎಂದರು .
 
 
ತದನಂತರ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಶ್ರೀ ಗಣೇಶ್ ಜೋಶಿ ಇವರು, ನಗದು ರಹಿತ ವಹಿವಾಟಿನ ಅಗತ್ಯತೆ ಬಗೆಗೆ ಮಾತನಾಡುತ್ತಾ ಸರಳ ವಿಧಾನದಲ್ಲಿ ನಗದು ವಹಿವಾಟನ್ನು ಮಾಡಿ ದೇಶದ ವಿತ್ತ ವ್ಯವಸ್ಥೆಯನ್ನು ಬಲಪಡಿಸುವ ಜವಾಬ್ದಾರಿಯನ್ನು ನಿರ್ವಹಿಸುವುದು ನಮ್ಮೆಲ್ಲರ ಕರ್ತವ್ಯವೆಂದರು.ಬಳಿಕ ನೆನಪಿನ ಕಾಣಿಕೆಯನ್ನು ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿ ಗೌರವಿಸಲಾಯಿತು. ನಗರಸಭೆ ಸದಸ್ಯರಾದ ಜೀವಂಧರ್ ಜೈನ್ ,ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಕೆ.ಆರ್.ಆಚಾರ್ಯ ,ಕಾಲೇಜು ಉಪನ್ಯಾಸಕ ವರ್ಗ ಹಾಗೂ ಬೋಧಕೇಯರ ಬಂಧುಗಳು, ಊರ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸಂಪನ್ನಗೊಳಿಸಿದರು.ಕಾರ್ಯಕ್ರಮದ ಪ್ರಾರ್ಥನೆಯನ್ನು ಉಪನ್ಯಾಸಕಿರಾದ ಸಂಗೀತಾ , ಅಕ್ಷತಾ ಎ.ಪಿ. ಧನ್ಯವಾದ ಸಮರ್ಪಣೆಯನ್ನು ನೆರವೇರಿಸಿದರು.ಉಪನ್ಯಾಸಕರಾದ ಹರೀಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here