ದೇಶಕ್ಕೆ ಕಾದಿದೆಯೇ ಭೀಕರ ಗಂಢಾಂತರ… ಕೊರೊನಾದ ಬೆನ್ನಲ್ಲೇ ಇನ್ನೂ ಇದೆ ಆತಂಕ!

0
1518

ಹರೀಶ್‌ ಕೆ.ಆದೂರು.

ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿಯೇ ದೊಡ್ಡ ಸದ್ದುಮಾಡಿದ, ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಮಹಾಮಾರಿ ಕೊರೊನಾದ ಭೀತಿಯಲ್ಲಿ ಭಾರತವೂ ಸೇರಿದಂತೆ ಪ್ರಪಂಚವೇ ಮುಳುಗಿರುವಾಗಲೇ ಮತ್ತೊಂದು ಭೀಕರ ಸಮಸ್ಯೆಯ ಮುನ್ಸೂಚನೆ ಲಭ್ಯವಾಗಿದೆ. ವೇದ,ಪುರಾಣ, ಸಂಸ್ಕಾರ, ಸಂಸ್ಕೃತಿಗಳ ಮೂಲಕ ಇಡೀ ವಿಶ್ವಕ್ಕೇ ಮಾದರಿಯಾಗಿರುವ ಭಾರತಕ್ಕೆ ಕೇವಲ ನಾಲ್ಕು ವರುಷಗಳಲ್ಲಿ ಮತ್ತೊಂದು ಮಹಾ ಕಂಠಕ ಎದುರಾಗಲಿದೆ. ಕೇವಲ ಊಹೆ, ಅವೈಜ್ಞಾನಿಕ ವಿಚಾರಗಳೆಂದು ಅಸಡ್ಡೆ ತೋರಿದರೆ ಇಡೀ ಮನುಕುಲ ಅಕ್ಷರಶಃ ತೊಂದರೆಯನ್ನನುಭವಿಸುವುದು ನಿಚ್ಚಳ!. ಅಂತಹ ಭೀಕರ ಪರಿಸ್ಥಿತಿಗೆ ಮತ್ತೊಮ್ಮೆ ನಮ್ಮ ದೇಶ, ದೇಶವಾಸಿಗಳು ಸಾಕ್ಷಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂಬ ಅಭಿಪ್ರಾಯವಿದೆ.

ವಿಜ್ಞಾನ ಎಷ್ಟೇ ಮುಂದುವರಿದರೂ, ಪುರಾತನ ವೇದ, ಶಾಸ್ತ್ರ ವಿಚಾರಗಳು ಇಂದಿಗೂ ಪರಿಣಾಮಕಾರಿಯಾಗಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ. ಇದೇ ಪ್ರಕಾರ ʻಜ್ಯೋತಿಷ್ಯ ಶಾಸ್ತ್ರʼ ಮುಂದಿನ ಭವಿಷ್ಯದ ʻಜಾಗೃತಿʼಯನ್ನು ಸಮಾಜಕ್ಕೆ ತಿಳಿಸುವ ಮಹತ್ಕಾರ್ಯ ಮಾಡಿದೆ..ಮಾಡುತ್ತಿದೆ.

ಭಾರತದ ಪ್ರತೀ ರಾಜ್ಯಗಳಿಗೂ ಮಹಾ ಮಾರಿಯಾಗಿ ಪರಿಣಮಿಸಿ, ಎಲ್ಲರಲ್ಲೂ ʻನಡುಕʼ ಹುಟ್ಟಿಸಿದ ಮಹಾಮಾರಿ ಕೊರೊನಾ ಭೀತಿ ಇಲ್ಲಿಗೇ ಮುಗಿಯುತ್ತಿಲ್ಲವಂತೆ… ಲಾಕ್‌ ಡೌನ್‌ ಮಾಡಿ ಕೊರೊನಾ ತಡೆಗೆ ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ನಿರ್ಧಾರ ಕೈಗೊಂಡು ಕೊರೊನಾ ತಡೆಯುವ ಹೊಸ ಸೂತ್ರ ಕಂಡುಕೊಂಡಿದ್ದಾರೆ. ಆದರೆ ಈ ಕೊರೊನಾ ತನ್ನ ಕಬಂಧ ಬಾಹುವನ್ನು ಸಾಕಷ್ಟು ಚಾಚಿಕೊಂಡಿದ್ದು,  ಮೇ ತಿಂಗಳ ೧೫ರ ತನಕವೂ ತನ್ನ ʻಅಟ್ಟಹಾಸʼ ಮೆರೆಯಲಿದೆಯಂತೆ!. ನಂತರದ ದಿನಗಳಲ್ಲಿ ಕೊರೊನಾ ವೈರಸ್‌ ನಾಶವಾಗುತ್ತಾ ಜುಲೈ ಮಧ್ಯಭಾಗದಲ್ಲಿ ಸಂಪೂರ್ಣ ನಿರ್ನಾಮವಾಗುವುದು ನಿಚ್ಛಳ ಎಂಬ ಭವಿಷ್ಯ ಮಾಹಿತಿಯನ್ನು ಜ್ಯೋತಿಷಿಗಳು ತಿಳಿಸಿದ್ದಾರೆ.

Advertisement

  ಕರ್ಮ ಧುರಿತದಿಂದಾಗಿ ಪ್ರಕೃತಿ ಮುನಿದು ಮನುಷ್ಯ ಸಮಾಜಕ್ಕೆ ನೀಡಿದ ದೊಡ್ಡ ಶಾಪ ಈ ಕೊರೊನಾ ಎಂಬುದು ಜ್ಯೋತಿಷ್ಯರ ಅಭಿಮತ. ಜ್ಯೋತಿಷ್ಯ ಶಾಸ್ತ್ರದ ಆಧಾರದ ಪ್ರಕಾರ ವಸುಂಧರಾ ಯೋಗ ಪ್ರಾಪ್ತಿಯಾದ ಕಾರಣ ಈ ರೋಗ ಈ ಕಾಲಘಟ್ಟದಲ್ಲಿ ಉಲ್ಭಣವಾಗುತ್ತದೆ. ೨೦೨೪ ಜುಲೈ ತಿಂಗಳ ತನಕ ಬೇರ ಬೇರೆ ರೀತಿಯ ತೊಂದರೆಗಳು ಭಾರತದಾದ್ಯಂತ ನಿರಂತರವಾಗಿ ಕಂಡು ಬರಲಿದೆಯಂತೆ. ರೋಗ ಬಾಧೆ, ಕ್ರಿಮಿಕಟ ಕಾಟ, ಜಲಭೀತಿ ಅಗ್ನಿಭೀತಿ ಮೂಲಕ ಮನುಷ್ಯ ಸಮಾಜವನ್ನು ಅಕ್ಷರಶಃ ಕಾಡಲಿದೆ ಎಂಬ ಎಚ್ಚರಿಕೆಯನ್ನು ಜ್ಯೋತಿಷ್ಯರು ನೀಡಿದ್ದಾರೆ.

ಜನತೆ ಬೆಚ್ಚಿ ಬೀಳಲಿದ್ದಾರೆ! : ಹೌದು ಜನತೆ ಕನಸಲ್ಲೂ ಬೆಚ್ಚಿಬೀಳುವ ಸ್ಥಿತಿ ದೂರವಿಲ್ಲವಂತೆ!. ಜನತೆ ತಾನು ಬೆಳೆದ ಬೆಳೆ ತನ್ನ ಕಣ್ಣೆದುರೇ ನಾಶವಾಗುವುದನ್ನು ನೋಡುತ್ತಾ ಮರುಕ ಪಡುವ ಸ್ಥಿತಿ ಸಮೀಪಿಸಿದೆಯಂತೆ…ಇಷ್ಟೇ ಅಲ್ಲ ಸ್ವತಃ ಮಾನವರೂ ಈ ತೊಂದರೆಗೆ ಸಿಲುಕಿಕೊಳ್ಳಲಿದ್ದಾರೆಯಂತೆ. ಹಾಗಾದರೆ ಏನಾಗಲಿದೆ ಎಂಬ ಪ್ರಶ್ನೆ ನಿಮಗೆ ಕಾಡದಿರದು… ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್‌

ಕೊಳ್ಚಪ್ಪು ಕೆ.ವಿ. ಗಣೇಶ ಭಟ್ಟ  ಈ ಭಯಾನಕ ವಿಚಾರವನ್ನು ಇದೀಗ ಸಮಾಜಕ್ಕೆ ಬಹಿರಂಗ ಪಡಿಸಿದ್ದಾರೆ. ʻಹೊಸದಿಗಂತʼದೊಂದಿಗೆ ಮಾತನಾಡಿದ ಅವರು ವಸುಂಧರಾ ಯೋಗ ಇಷ್ಟಕ್ಕೆಲ್ಲಾ ಕಾರಣ ಅಂದಿದ್ದಾರೆ. ಜನವರಿ ತಿಂಗಳಲ್ಲಿ ಈ ಯೋಗ ಆರಂಭವಾಗಿದೆ. ಇದೀಗ ಪೂರ್ಣ ಪ್ರಮಾಣದ ವಸುಂಧರಾ ಯೋಗ ನಡೆಯುತ್ತಿದೆ. ಭಾರತದ ಹಿಮಾಲಯದಿಂದ ಲಂಕಾಪುರದ ತನಕ ಮೂರು ಭಾಗ ಮಾಡಿದರೆ ಅದರ ಒಂದು ಭಾಗದಷ್ಟು ಸಂಪೂರ್ಣ ನಾಶವಾಗುವ ಸಾಧ್ಯತೆಯು ಈ ಯೋಗದಲ್ಲಿದೆ ಎಂದು ಎಚ್ಚರಿಸಿದ್ದಾರೆ. ಇಷ್ಟೇ  ಅಲ್ಲ… ಪಾಶ್ಚಿಮಾತ್ಯ ರಾಷ್ಟ್ರದಿಂದ ಇಡೀ ಭಾರತಕ್ಕೆ ದೊಡ್ಡ ಗಂಢಾತರ ಎದುರಾಗಲಿದೆ. ೨೦೨೪ ಫೆಬ್ರವರಿಯಿಂದ ಜುಲೈ ೨೦ರ ಮಧ್ಯದಲ್ಲಿ ಕಪ್ಪು ಮತ್ತು ಕಂದು ಮಿಶ್ರಿತ ದುಂಬಿಗಳು ಭಾರತಕ್ಕೆ ದಾಳಿಯಿಡಲಿವೆ. ಇವು ದೇಶದುದ್ದಕ್ಕೂ ಇರುವ ಬೆಳೆಗಳನ್ನು ನಾಶಮಾಡಲಿದೆ. ವೃಕ್ಷನಾಶ, ನೈಸರ್ಗಿಕ ಹಸಿರು ನಾಶವನ್ನು ಮಾಡಲಿವೆಯಂತೆ. ಅಷ್ಟೇ ಏಕೆ ಮನುಕುಲಕ್ಕೂ ವಿಪತ್ತು ತಂದೊಡ್ಡಲಿದೆಯಂತೆ. ಈ ಭಯಾನಕ ವಿಚಾರವನ್ನು ಇದೀಗ ಹೊರಹಾಕಿದ್ದಾರೆ. ಮನುಷ್ಯ ಎಚ್ಚರದಿಂದಿರಬೇಕಾದ ಸಮಯ ಎದುರಾಗಿದೆ ಎಂದವರು ಹೇಳಿದ್ದಾರೆ.

ಭಾರತದ ದೇಶದ ಉತ್ತರ ವಾಯುವ್ಯದಿಂದ ಹಾಗೂ ಪೂರ್ವ ಈಶಾನ್ಯ ಭಾಗದಿಂದಲೂ ಈ ದುಂಬಿಗಳ ಆಗಮನವಾಗಲಿದ್ದು  ಭಾರತವೂ ಸೇರಿದಂತೆ ಪ್ರಪಂಚದ ೧೩ರಾಷ್ಟ್ರಗಳಲ್ಲಿ ತನ್ನ ಕ್ರೌರ್ಯ ಮೆರೆಯಲಿದೆಯಂತೆ…

ತಡೆಯಲು ಸಾಧ್ಯವಿಲ್ಲವೇ…? : ಮುಂದೆ ಸಂಭವಿಸಲಿರುವ ಈ ತೊಂದರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಜ್ಯೋತಿಷಿ ಕೆ.ವಿ. ಗಣೇಶ ಭಟ್ಟ. ಮನುಷ್ಯ ತನ್ನ ಕ್ರೌರ್ಯ ಪ್ರವೃತ್ತಿಯನ್ನು ಬಿಟ್ಟು ಅಹಿಂಸಾತ್ಮಕವಾಗಿ ಜೀವಿಸುವುದೇ ಇದರ ನಿಯಂತ್ರಣಕ್ಕೆ ಇರುವ ಮಾರ್ಗೋಪಾಯ ಎನ್ನುತ್ತಾರೆ. ಗೋ ಹತ್ಯೆಯೂ ಸೇರಿದಂತೆ ಸಂಪೂರ್ಣ ಪ್ರಾಣಿ ಹತ್ಯೆಯನ್ನು ಮನಪೂರ್ವಕ ನಿಲ್ಲಿಸುವುದು, ಪ್ರಕೃತಿ ನಾಶವನ್ನು ತಡೆಯುವುದು, ಕಾಡು ಉಳಿಸುವುದು, ನಿಸರ್ಗ ಉಳಿಸುವುದು, ಮೀನುಗಾರಿಕೆ ನಿಶೇಧಿಸುವುದು ಇವೇ ಮೊದಲಾದವುಗಳಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ.

ಧಾರ್ಮಿಕ ವಿಧಿ ಪ್ರಕಾರ ನೋಡುವುದಾದರೆ ವೇದ ಪ್ರಕಾರ ನವಗ್ರಹ ಹೋಮ ಪುರಸ್ಕಾರ, ಶುದ್ಧ ದೇಸೀ ತಳಿಯ ಗೋವಿನ ಸೆಗಣಿಯಿಂದ ಮಾಡಿದ ಬೆರಣಿ ಉಪಯೋಗಿಸಿ ಅಗ್ನಿಮಾಡಿ ಪಂಚಗವ್ಯದಿಂದ ಮಹಾ ಮೃತ್ಯುಂಜಯ ಹವನವನ್ನು ಗ್ರಾಮ ಸಂಬಂಧೀ ಕ್ಷೇತ್ರಗಳಲ್ಲಿ ಆಚರಿಸಬೇಕು.ತನ್ಮೂಲಕ ಅಲ್ಲಿನ  ಪರಿಸರ ಶುದ್ಧೀಕರಿಸುವ ಕಾರ್ಯ ಮಾಡಬೇಕು. ಇವೆಲ್ಲವೂ ಶುದ್ಧ ವಿಪ್ರವರೇಣ್ಯರಿಂದ ವಿಧಿ ಪ್ರಕಾರ ನಡೆಯಬೇಕಾಗಿದೆ ಎಂದರು.

೨೦೨೪ರಲ್ಲಿ ದುಂಬಿ ಅಟ್ಟಹಾಸ

ಭಾರತಕ್ಕೆ ಕಾದಿದೆ ಮಹಾ ಕಂಠಕ

೧೩ರಾಷ್ಟ್ರಗಳಲಿ ಪರಿಣಾಮ ಬೀರಲಿದೆ.

೨೦೨೪ ಫೆಬ್ರವರಿ ೧೫ರಿಂದ ಜುಲೈ ೨೦ರೊಳಗೆ ಸಂಭವಿಸವುದು.

ಗೋ ಹತ್ಯೆ ನಿಲ್ಲಿಸಿ, ಪ್ರಾಣಿ ಹತ್ಯೆ ನಿಲ್ಲಿಸಿ, ಪರಿಸರ ರಕ್ಷಿಸಿ

ʻʻ ಜ್ಯೋತಿಷ್ಯ ಎಂಬುದು ಜನತೆಯನ್ನು  ಹೆದರಿಸಿ, ಬೆದರಿಸಿ ನೋವು ಮಾಡಲಿರುವ ವಿಚಾರವಲ್ಲ.  ಜನತೆಗೆ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡುತ್ತದೆ. ಭವಿಷ್ಯ ನಿರ್ಣಯಿಸುವ, ಹೀಗಿದೆ ಎಂಬುದನ್ನು ಸೂಚಿಸುವ ವಿಚಾರ ಜ್ಯೋತಿಷ್ಯ. ಇದು ಭವಿಷ್ಯ ನಿರ್ಣಯಿಸುವ ದಾರಿ. ವೇದ ಎಂಬ ಜ್ಞಾನಪುರಷನ ೬ ಅಂಗಾಗಳ ಪೈಕಿ ಕಣ್ಣಿನ ಸ್ಥಾನದಲ್ಲಿ ʻಜ್ಯೋತಿಷ್ಯ ʼ ವಿದೆ. ʼʼ

ಜ್ಯೋತಿಷಿ ಕೊಳ್ಚಪ್ಪು ಕೆ.ವಿ. ಗಣೇಶ ಭಟ್ಟ , ಅನುಗ್ರಹ , ಮುಳಿಯ.

LEAVE A REPLY

Please enter your comment!
Please enter your name here