ದೇಶಕ್ಕಾಗಿ ದಿನಮೀಸಲಿಟ್ಟ ದೇಶದ ಜನತೆ

0
107
ಸದಾ ಜನಜಂಗುಳಿಯಿಂದಿರುತ್ತಿದ್ದ ಮೂಡುಬಿದಿರೆ ಖಾಸಗೀ ಬಸ್ಸು ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ಭಾನುವಾರದ ಜನತಾ  ಕರ್ಫ್ಯೂಗೆ ಜನತೆಯ ಚಪ್ಪಾಳೆ!

ಮೂಡುಬಿದಿರೆ: ಪ್ರಧಾನಿ ನರೇಂದ್ರ ಮೋದಿಯವರು  ಕೊರೊನಾ ನಿಯಂತ್ರಣಕ್ಕಾಗಿ ಕರೆನೀಡಿದ ʻಭಾನುವಾರದ ಜನತಾ ಕರ್ಫ್ಯೂʼ ಮೂಡುಬಿದಿರೆಯಲ್ಲಿ ಅಕ್ಷರಶಃ ಯಶಕಂಡಿದೆ. ಮೂಡುಬಿದಿರೆಯ ಜನತೆ ಮೋದಿಜಿ ಕರೆಗೆ ಗೌರವ ಸೂಚಿಸಿ ಮನೆಯಲ್ಲುಳಿದಿದ್ದಾರೆ. ಭಾನುವಾರದ ಎಲ್ಲಾ ಕಾರ್ಯಕ್ರಮಗಳೂ ರದ್ದಾಗಿದ್ದೂ ಸೇರಿದಂತೆ ಮೂಡುಬಿದಿರೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಿ ಕರ್ಫ್ಯೂ ಆಚರಿಸಿದ್ದಾರೆ.

ಕೊರೊನಾ ಹಿನ್ನಲೆಯಲ್ಲಿ ಮೂಡುಬಿದಿರೆ ಅಕ್ಷರಶಃ ಸಂಪೂರ್ಣ ಸ್ಥಬ್ಧವಾಗಿತ್ತು. ಒಂದೇ ಒಂದು ಅಂಗಡಿಗಳೂ ಬಾಗಿಲು ತೆರೆದಿಲ್ಲ. ಜನ ರಸ್ತೆಯತ್ತ ಮುಖವೂ ಮಾಡಿಲ್ಲ. ಅಷ್ಟರಮಟ್ಟಿಗೆ ಕೊರೊನಾ ಭೀತಿ ಜನತೆಯಲ್ಲಿದೆ ಎಂಬುದು ಭಾನುವಾರ ಸಾಬೀತಾಗುವಂತಾಯಿತು.

ಮಾಧ್ಯಮ ಕಾರ್ಯ: ಮೂಡುಬಿದಿರೆಯಲ್ಲಿ ಪೊಲೀಸ್‌ ಇಲಾಖೆ ಹಾಗೂ ಮಾಧ್ಯಮ ಮಂದಿ ತಮ್ಮ ಕರ್ತವ್ಯ ನಿರತರಾಗಿದ್ದು ಹೊರತಾಗಿದ್ದರೆ ಉಳಿದಂತೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿಯೇ ಉಳಿದಿದ್ದರು.

ಮೂಡುಬಿದಿರೆ ಹಾಗೂ ಬೆಳ್ತಂಗಡಿ ತಾಲೂಕಿನ ಗಡಿ ಭಾಗ ಹೊಸಂಗಡಿಯಲ್ಲೂ ಜನ ಮನೆಬಿಟ್ಟು ಹೊರ ಬಂದಿಲ್ಲ. ಇದೇ ಮೊದಲ ಬಾರಿಗೆ ಎಂಬಂತೆ ಇಲ್ಲೂ ಅಂಗಡಿಗಳು ಬಂದ್‌ ಆಗಿದ್ದವು.

ಹನುಮಂತ ದೇವಸ್ಥಾನ ರಸ್ತೆಯಂತೂ ಖಾಲಿ ಖಾಲಿ…

ಸ್ವಚ್ಛತಾ ಅಭಿಯಾನವೂ ಇಲ್ಲ: ಪ್ರತೀ ಭಾನುವಾರವೂ ಮೂಡುಬಿದಿರೆಯಲ್ಲಿ ನಡೆಯುತ್ತಿದ್ದ ಕ್ಲೀನ್‌ ಅಪ್‌ ಮೂಡುಬಿದಿರೆ ಸ್ವಚ್ಛತಾ ಅಭಿಯಾನವನ್ನೂ ಮೋದಿ ಕರೆಯನ್ವಯ ಪ್ರತಿಷ್ಠಿತ ಜವನೆರ್‌ ಬೆದ್ರ ಸಂಘಟನೆ ಮುಂದೂಡಿತ್ತು. ಒಟ್ಟಿನಲ್ಲಿ ಭಾನುವಾರದ ಜನತಾ ಕರ್ಫ್ಯೂನಲ್ಲಿ ಜನತೆ ಸ್ವಯಂ ಆಸಕ್ತಿಯಿಂದ ಭಾಗವಹಿಸಿದ್ದಂತೂ ಸುಳ್ಳಲ್ಲ.

LEAVE A REPLY

Please enter your comment!
Please enter your name here