ಪ್ರಮುಖ ಸುದ್ದಿರಾಜ್ಯ

ದೇವಳ ರಸ್ತೆ ಇದೀಗ ಕ್ಲೀನ್‌ ಕ್ಲೀನ್‌

ಮೂಡುಬಿದಿರೆಯಲ್ಲಿ ಸಂಪನ್ನಗೊಂಡಿತು ೭೩ನೇವಾರದ ಕ್ಲೀನ್‌ ಅಪ್‌ ಮೂಡುಬಿದಿರೆ
ಮೂಡುಬಿದಿರೆ: ಯಾರು ಏನೇ ಹೇಳಲಿ; ಜವನೆರ್‌ ಬೆದ್ರ ಸಂಘಟನೆ ಮಾತ್ರ ಜನಪರವಾದ ಕಾರ್ಯವನ್ನು ರಾಜಕೀಯೇತರವಾಗಿ ನಡೆಸುತ್ತದೆ. ಸಮಾಜಮುಖೀ ಕಾರ್ಯಕ್ಕೆ ಎಂದಿಗೂ ಹಿನ್ನಡೆಯಾಗದು. ಜನಪರಕಾಳಜಿ, ಪರಿಸರ ಸ್ವಚ್ಛತೆ , ಪ್ರಧಾನಿ ನರೇಂದ್ರ ಮೋದಿಯವರ ಸಮಾಜಮುಖೀ ಕಾರ್ಯಗಳ ಅನುಷ್ಠಾನವೇ ನಮ್ಮ ಗುರಿ ಎಂದು ಜವನೆರ್‌ ಬೆದ್ರ ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್‌ ಕೋಟೆ ಘೋಷಿಸಿದರು.
ಮೂಡುಬಿದಿರೆಯ ಪುತ್ತಿಗೆ ರಸ್ತೆಯುದ್ದಕ್ಕೂ ಬಿದ್ದಿದ್ದ ತ್ಯಾಜ್ಯ, ಪ್ಲಾಸ್ಟಿಕ್‌ ಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಭಾನುವಾರ ಸಂಘಟನೆಯ ಕಾರ್ಯಕರ್ತರು ಯಶಸ್ವಿಯಾಗಿ ನಡೆಸಿದರು. ೭೩ನೇವಾರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಪರಿಸರ ವಾಸಿಗಳು ಸಾಥ್‌ ನೀಡಿದರು.
ದೇಶಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಯೋಧರಾದ ಮೂಡಬಿದ್ರೆಯ ಎಂಕೆ ರಾಜೇಶ್ , ಮಾಜಿ ಸೈನಿಕ ಸುಬೇದರ್ ಮೇಜರ್ ರಾಜೇಂದ್ರ ಜಿ ನಾಗರಾಜ್ ಕರ್ಕೇರ ನಾಗವರ್ಮ ಜೈನ್ , ಪ್ರಕಾಶ್ ಶೆಟ್ಟಿಗಾರ್, ಪುತ್ತಿಗೆ ರವಿ ಭಟ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here