ದೇವರೊಂದಿಗೆ ದೇವರ ಆಟ!!!

0
602

ನಿತ್ಯ ಅಂಕಣ: 18

2002, ರಲ್ಲಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯವನ್ನು ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನಡೆಸಿದ್ದರು. ಆ ಸಂದರ್ಭದಲ್ಲಿ ಶ್ರೀಗಳು ‘ಚಿನ್ನರ ಸಂತರ್ಪಣೆ’ ಎನ್ನುವ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಜಿಲ್ಲೆಯ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಮಾಡಿಸಿದ್ದರು. ಈ ಯೋಜನೆಯಿಂದ ಮಕ್ಕಳಿಗೆ ಬಲು ಉಪಕಾರವಾಗಿತ್ತು. ಈ ಮೊದಲು ಮಧ್ಯಾಹ್ನದ ಊಟದ ಹೊತ್ತಿನಲ್ಲಿ ವಿದ್ಯಾರ್ಥಿಗಳು ಮನೆಗೆ ಹೋಗಿ, ಊಟ ಮಾಡಿಕೊಂಡು ಮರಳಿ ಶಾಲೆಗೆ ಸೇರಬೇಕಾದ ಪರಿಸ್ಥಿತಿ ಇತ್ತು. ದೂರದಿಂದ ಬರುವ ವಿದ್ಯಾರ್ಥಿಗಳು ಮನೆಯಿಂದ ಬುತ್ತಿ ಹಿಡಿದುಕೊಂಡು ಬರುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಮಕ್ಕಳು ಊಟ ಮಾಡುವ ಸಂದರ್ಭಗಳಲ್ಲಿ ಊಟ ಹಳಸಿಹೋಗುವ ಸಂದರ್ಭಗಳಿದ್ದವು. ಪಲಿಮಾರು ಮಠದ ಚಿನ್ನರ ಸಂತರ್ಪಣೆ ಯೋಜನೆಯು ಮಕ್ಕಳ ಸಮಸ್ಯೆಗಳನ್ನು ದೂರಮಾಡಿತು. ಚಿಣ್ಣರ ಸಂತರ್ಪಣೆಯು ಸಾರ್ವಜನಿಕರಿಂದ ಬಹಳವಾಗಿ ಮೆಚ್ಚುಗೆ ಪಡೆದುಕೊಂಡಿದಲ್ಲದೆ. ಕರ್ನಾಟಕ ಸರಕಾರವು, ಪಲಿಮಾರು ಮಠವು ಚಿಣ್ಣರಿಗೆ ಬಿಸಿ ಊಟ ಉಣಬಡಿಸುವ ಯೋಜನೆಗೆ ಅಂದು ಪ್ರಶಂಸೆ ವ್ಯಕ್ತಪಡಿಸಿತ್ತು. ನಂತರ ಅದೇ ಯೋಜನೆಯ ಪ್ರೇರಣೆ ಪಡೆದು ಸರಕಾರವು ರಾಜ್ಯದಲ್ಲಿಯ ಎಲ್ಲಾ ಪ್ರಾರ್ಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ನೀಡಲು ಪ್ರಾರಂಭಿಸಿತು. ಇದು ಎಲ್ಲರಿಗೂ ಗೊತ್ತಿರುವ ವಿಷಯ ಏನ್ನೋಣ. ಆದರೆ ಅಚ್ಚರಿಯ ಸಂಗತಿ ಎಂದರೆ, ಭಗವಾನ್ ನಿತ್ಯಾನಂದರು ಇದಕ್ಕಿಂತಲೂ ಮೊದಲು, ಅಂದರೆ 60 ವರ್ಷಗಳ ಹಿಂದೆಯೇ ಅವರು ಶಾಲಾ ಮಕ್ಕಳು, ಚಿಣ್ಣರಿಗೆಲ್ಲ ಬಾಲಭೋಜನ ಹೆಸರಿನಲ್ಲಿ ರುಚಿಕರ ಊಟವನ್ನು ಬಡಿಸುತ್ತಿದ್ದರು.

ನಿತ್ಯಾನಂದರು ಗಣೇಶಪುರಿಗೆ ಬರುವ ಶ್ರೀಮಂತ ಭಕ್ತರಲ್ಲಿಯೂ ಮಕ್ಕಳಿಗೆ ಬಾಲಭೋಜನಗಳ ಏರ್ಪಡಿಸುವಂತೆ ಹೇಳುತ್ತಿದ್ದರಂತೆ. ನಿತ್ಯಾನಂದರಿಗೆ ಮಕ್ಕಳೆಂದರೆ ಬಲು ಪ್ರೀತಿ. ಕಡು ಬಡ ಶಾಲಾ ಮಕ್ಕಳಿಗೆ, ಬೇಕಾದ ಪುಸ್ತಕ ಬಳಪ, ಲೇಖನಿ, ಬಟ್ಟೆಗಳನ್ನು ವಿತರಿಸುತ್ತಿದ್ದರು. ಅವರು ಅಕ್ಕರೆಯಿಂದ ಕೈ ಹಿಡಿದು ಆಡಿಸಿದ ಮುದ್ದಿಸಿದ ಮಕ್ಕಳುಗಳು ಅದೇಷ್ಟು.. ಸಹಸ್ರವೋ..!! ಅದೇಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ನಿತ್ಯಾನಂದರ ಬಳಿ ಆಡಿಸಲು ನೀಡುತ್ತಿದ್ದರು. ಮಕ್ಕಳು ಗುರುದೇವರನ್ನು “ಕಾಲಾ ಚಾಚಾ” ಎಂದು ಕರೆಯುತ್ತಿದ್ದರು. ಮುಂಬೈಯಲ್ಲಿ ಹೊಟೇಲು ನಡೆಸುತ್ತಿರುವ ಉಡುಪಿ, ಮಂಗಳೂರಿನ ಮಾಲಿಕರು ತಮ್ಮ ಮಕ್ಕಳನ್ನು “ಅಜ್ಜೆರಡೆ ಪೊಯ್” (ಅಜ್ಜರ ಹತ್ತಿರ ಹೋಗ್ವ) ಎಂದು ಹೇಳಿ, ಕರೆದುಕೊಂಡು ಹೋಗುತ್ತಿದ್ದರು. ಗುರುದೇವರು ಮಕ್ಕಳನ್ನು ಕೈಯಲ್ಲಿ ಏತ್ತಿ ಆಡಿಸುತ್ತಿದ್ದರು. ಕೈಯಲ್ಲಿ ಚಾಕಲೇಟ್ ನೀಡಿ ಕಳಿಸುತ್ತಿದ್ದರು. ಸಾಮಾನ್ಯವಾಗಿ ಪರಿಚಯ ಇಲ್ಲದವರ ಬಳಿ ಮಕ್ಕಳು ಹೋಗವುದು ಕಡಿಮೆ. ಆದರೆ ನಿತ್ಯಾನಂದರ ಬಳಿ ಮಕ್ಕಳು ಹೆದರದೆ ಹೋಗುತ್ತಿದ್ದವು. ಗರುದೇವರ ಕಪ್ಪು ಮೈಬಣ್ಣ, ದೇಹಕಾಯವನ್ನು ನೋಡಿ ಮಕ್ಕಳು ಹೆದರ ಬೇಕಾಗಿತ್ತು..! ಆದರೆ ಮಕ್ಕಳು ಅವರನ್ನು ಕಂಡು ಕಿಲ ಕಿಲ ನಗುತ್ತಿದ್ದವಂತೆ. ಅಂದು ನಿತ್ಯಾನಂದರು ಆಡಿಸಿದ ಮುದ್ದಿಸಿದ ಮಕ್ಕಳು, ಮುಂದೆ ಗಣ್ಯ ವ್ಯಕ್ತಿಗಳು, ಸಜ್ಜನರು, ಧನಿಕರು, ಜ್ಞಾನಿಗಳು ಆಗಿಹೋಗಿದ್ದವರು ಅದೇಷ್ಟೋ.

ನಿತ್ಯಾನಂದರು ಮಕ್ಕಳನ್ನು ಎತ್ತಿ ಆಡಿಸುವ ಫೋಟಗಳು ಇಗಲು ನಮಗೆ ಕಾಣಲು ಸಿಗುತ್ತವೆ. ‘ಮಕ್ಕಳನ್ನು ದೇವರಿಗೆ ಸಮಾನರು’ ಎನ್ನುತ್ತೇವೆ. ಹಾಗಾಗಿ ಮಕ್ಕಳು ನಿತ್ಯಾನಂದರೊಂದಿಗೆ ಆಟ ಆಡುವುದನ್ನು ಕಂಡು ‘ದೇವರೊಂದಿಗೆ ದೇವರ ಆಟ” ಎಂದು ಕೆಲವರು ಬಣ್ಣಿಸುತ್ತಿದ್ದರಂತೆ. ಗುರುದೇವರು ಎತ್ತಲೂ ತಿರುಗಾಡಲಿ ಅವರನ್ನು ಸಣ್ಣ ಸಣ್ಣ ಮಕ್ಕಳು ಹಿಂಬಾಲಿಸುತ್ತಿದ್ದರು. ಗುರುದೇವರು ರೋಗಪೀಡಿತ ಅದೇಷ್ಟೋ ಮಕ್ಕಳನ್ನು ಬದುಕಿಸಿದ್ದಾರೆ. ಗುರುದೇವರೇ ಹುಟ್ಟು ಹಾಕಿದ ಬಾಲಭೋಜನ ಸಂಪ್ರದಾಯ ಇಗಲೂ ದೇಶದಲ್ಲಿ ಇರುವ ಎಲ್ಲಾ ನಿತ್ಯಾನಂದ ಮಂದಿರದಲ್ಲಿ ವರ್ಷದ ವಿಶೇಷ ದಿನಗಳಲ್ಲಿ ನಡೆಯುತ್ತವೆ. ಭಕ್ತರು ಹರಕೆ, ಸೇವಾ ರೂಪದಲ್ಲೂ ಬಾಲಭೋಜನ ನಡೆಸುತ್ತಾರೆ.

ತಾರಾನಾಥ್‌ ಮೇಸ್ತ ಶಿರೂರು.

Advertisement

LEAVE A REPLY

Please enter your comment!
Please enter your name here