ದೇಗುಲಗಳಿಗೆ ಭೇಟಿ ನೀಡಿದ ಡಾ|ಡಿ.ವೀರೇಂದ್ರ ಹೆಗ್ಗಡೆ

0
508

ವರದಿ: ಸುನೀಲ್ ಬೇಕಲ್
ಶೃದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲಿಯೇ ಅತ್ಯಂತ ಸ್ವಚ್ಚ ಧಾರ್ಮಿಕ ನಗರಿ ಎಂದು ಪ್ರಶಸ್ತಿಗೊಳಗಾಗಿರುವುದು ಸಂಭ್ರಮ ಮತ್ತು ಹೆಮ್ಮೆಯ ವಿಚಾರವಾಗಿದೆ. ಆದರೆ ಇದೀಗ ಈ ಗೌರವವನ್ನು ಉಳಿಸಿಕೊಳ್ಳಲು ಶ್ರೀ ಕ್ಷೇತ್ರವನ್ನು ಸ್ವಚ್ಚವಾಗಿ ರಕ್ಷಿಸುವುದು ಬಹು ಹೊಣೆಗಾರಿಕೆಯ ಕಾರ್ಯವಾಗಿದೆ.
 
hegde-visit-temple1
ಈ ಸಂತೋಷವನ್ನು ಗ್ರಾಮ ಗ್ರಾಮಗಳಲ್ಲಿಯೂ ಹಂಚಿಕೊಳ್ಳುವಂತೆ ಮತ್ತು ಈ ಪ್ರಶಸ್ತಿಯು ಚಿರಸ್ಥಾಯಿಯಾಗಿ ನೆನಪಿನಲ್ಲುಳಿಯುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಇದೀಗ ನೂತನ ಕ್ರಿಯಾಯೋಜನೆಯನ್ನು ಘೋಷಿಸಿದ್ದಾರೆ. ಅದುವೇ ಸ್ವಚ್ಚ ಶ್ರದ್ಧಾ ಕೇಂದ್ರಗಳ ಪರಿಕಲ್ಪನೆ.
 
 
ಈ ನಿಟ್ಟಿನಲ್ಲಿ ದಿನಾಂಕ 20.12.2016 ರಂದು ಮಳಲುತಾಯಿ ದೇವಸ್ಥಾನ, ಕರಿಕಟ್ಟೆ ಮಣೂರು, ತೆಕ್ಕಟ್ಟೆ ಕುಂದಾಪುರ, ಚಿಕ್ಕಮ್ಮ ಬ್ರಹ್ಮಲಿಂಗೇಶ್ವರ ದೇವಸ್ಥಾನ ಗೋಪಾಡಿ, ಕುಂಭಾಶಿ, ಕುಂದಾಪುರ, ಆನೆಗುಡ್ಡೆ ಮಹಾಗಣಪತಿ ದೇವಸ್ಥಾನ ಭೇಟಿ ನೀಡಿದರು.
 
 
‘ಸ್ವಚ್ಛ ಶ್ರದ್ಧಾ ಕೇಂದ್ರಗಳ ಪರಿಕಲ್ಪನೆ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಗಣ್ಯರು ಅಪ್ಪಣ್ಣ ಹೆಗ್ಡೆ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು, ಶಿವರಾಮ ಶೆಟ್ಟಿ ಮಾಲಾಡಿ, ರಘುರಾಮ ಶೆಟ್ಟಿ ಮೋಕ್ತೇಸರರು ಕಂಬಳಗುಡ್ಡೆ, ಸುರೇಶ್ ಶೆಟ್ಟಿ ಆಡಳಿತ ಮಂಡಳಿ, ಪ್ರಕಾಶ್ ಶೆಟ್ಟಿ ದೊಡ್ಡಮನೆ, ಶೇಖರ್ ಕಾಂಚನ್ ಗ್ರಾ. ಪಂ ಅಧ್ಯಕ್ಷರು ತೆಕ್ಕಟ್ಟೆ, ಗಂಗಾಧರ ಶೆಟ್ಟಿ ಅಧ್ಯಕ್ಷರು ರಿಕ್ಷಾ ಚಾಲಕರ ಸಂಘ ತೆಕ್ಕಟ್ಟೆ, ಸಾಕು ಗ್ರಾ.ಪಂ.ಸದಸ್ಯರು, ಸೀತು ಗ್ರಾ.ಪಂ. ಸದಸ್ಯರು, ಅರ್ಚಕ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here