ದೇಗುಲಗಳಿಂದ ಸ್ವಚ್ಛತೆಯ ಕಾರ್ಯ ಆರಂಭಗೊಳ್ಳಲಿ – ಅಮರ್ ಆಶ್ರಯ

0
1060

ಮೂಡುಬಿದಿರೆ: ಪ್ರತಿಷ್ಠಿತ ಜವನೆರ್ ಬೆದ್ರ ಸಂಘಟನೆಯ 76ನೇ ವಾರದ ಕ್ಲೀನ್ ಅಪ್ ಮೂಡುಬಿದಿರೆ ಕಾರ್ಯಕ್ರಮ ಐತಿಹಾಸಿಕ ಪ್ರಸಿದ್ಧಿಯ ಹೊಸಂಗಡಿ ಅರಮನೆಗೆ ಸಂಬಂಧಪಟ್ಟ ಗೋಪೀನಾಥ ದೇವಸ್ಥಾನ ಹೊಸಂಗಡಿಯಲ್ಲಿ ನಡೆಯಿತು. ಬೆಳಗ್ಗೆ 7ಗಂಟೆಯಿಂದ ಸಂಘಟನೆಯ ಸದಸ್ಯರು ದೇಗುಲದ ಆವರಣ, ಒಳ ಹೊರಭಾಗವನ್ನು ಸಂಪೂರ್ಣ ಸ್ವಚ್ಛಗೊಳಿಸಿದರು. ದೇವಳದ ಆವರಣದಲ್ಲಿ ಬೆಳೆದು ನಿಂತಿದ್ದ ಪೊದೆ, ಹುಲ್ಲು,ಕಳೆಗಳನ್ನು ಸ್ವಚ್ಛಮಾಡಿದರು. ಜವನೆರ್ ಬೆದ್ರ ಸಂಘಟನೆಯ ಕಾರ್ಯಕ್ಕೆ ಊರವರು ಸಾಥ್ ನೀಡಿದರು.


ದೇಗುಲಗಳಿಂದ ಸ್ವಚ್ಛತೆ ಆರಂಭವಾಗಲಿ: ದೇಗುಲಗಳಿಂದ ಸ್ವಚ್ಛತೆಯ ಕಾರ್ಯ ಆರಂಭಗೊಳ್ಳುವಂತಾಗಲಿ ಎಂದು ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ಕರೆನೀಡಿದರು. ಧಾರ್ಮಿಕ ಕೇಂದ್ರಗಳು ಜನರ ಶ್ರದ್ಧಾ ಕೇಂದ್ರಗಳು. ಅಂತಹ ಕೇಂದ್ರಗಳಲ್ಲಿ ಮೊದಲು ಸ್ವಚ್ಛತೆಯ ಜಾಗೃತಿ ಉಂಟಾಗಬೇಕಾಗಿದೆ. ಈ ಕಾರಣಕ್ಕಾಗಿಯೇ ನಮ್ಮ ಸಂಘಟನೆ ಕಳೆದ 5ವಾರಗಳಿಂದ ಮೂಡುಬಿದಿರೆ ವ್ಯಾಪ್ತಿಯ ಅತ್ಯಂತ ಪುರಾತನ ದೇಗುಲಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳುತ್ತಿದೆ ಎಂದರು.


ಇತರರಿಗೆ ಪ್ರೇರಣೆ: ಜವನೆರ್ ಬೆದ್ರ ಸಂಘಟನೆಯ ಸ್ವಚ್ಛತಾ ಕಾರ್ಯ ಇತರರಿಗೂ ಪ್ರೇರಣೆಯಾಗಿದೆ. ಸ್ವಚ್ಛತೆಯೊಂದಿಗೆ ಜಲಮರುಪೂರಣದಂತಹ ಸಮಾಜಮುಖೀ ಕಾರ್ಯ ಮಾಡುತ್ತಿರುವುದು ಶ್ಲಾಘನಾರ್ಹ ಎಂದು ಹೊಸಂಗಡಿ ಪಂಚಾಯತ್ ಸದಸ್ಯ ಹರಿಪ್ರಸಾದ್ ಶ್ಲಾಘಿಸಿದರು.
ಅಭಿವೃದ್ಧಿಗೆ ಒಟ್ಟಾಗೋಣ: ಜಾತಿ,ಧರ್ಮ,ರಾಜಕೀಯ ರಹಿತವಾಗಿ ದೇಗುಲದ ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸೋಣ. ಅವನತಿಯತ್ತ ತೆರಳುತ್ತಿರುವ ದೇಗುಲವನ್ನು ಅಭಿವೃದ್ಧಿಗೊಳಿಸಲು ಒಂದಾಗೋಣ ಎಂದು ಸುಶಾಂತ್ ಕಕೇರ ಅಭಿಪ್ರಾಯಿಸಿದರು.
ಪುರಸಭಾ ಸದಸ್ಯೆ ಕುಶಲಾ, ಭಾರತೀಯ ಸೇನೆಯ ಯೋಧ ಉಮೇಶ್, ಸೇರಿದಂತೆ ಸ್ಥಳೀಯರು, ಸಂಘಟನೆಯ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here