ದೆಹಲಿಯಲ್ಲಿ ಕನ್ನಡ ಚಲನಚಿತ್ರೋತ್ಸವ

0
381

ಸಿನಿ ಪ್ರತಿನಿಧಿ ವರದಿ
ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರೋತ್ಸವ ನಿರ್ದೇಶನಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನವದೆಹಲಿಯ ಸಿರಿಫೋರ್ಟ್ ಆಡಿಟೋರಿಯಂ -2 ರಲ್ಲಿ ಏಪ್ರಿಲ್ 16 ರಿಂದ 18 ರವರೆಗೆ ಕನ್ನಡ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
 
 
ದಿನಾಂಕ 16-4-2016 ರಂದು ನವದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗ್ ಬಳಿಯಿರುವ ಸಿರಿಫೋರ್ಟ್ ಆಡಿಟೋರಿಯಂ-2 ರಲ್ಲಿ ಹಮ್ಮಿಕೊಂಡಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನವದೆಹಲಿಯ ಕರ್ನಾಟಕ ಭವನದ ಸ್ಥಾನಿಕ ಆಯುಕ್ತರಾದ ಶ್ರೀ ಅತುಲ್ ಕುಮಾರ್ ತಿವಾರಿ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಿತ್ರೋತ್ಸವ ನಿರ್ದೇಶನಾಲಯದ ನಿರ್ದೇಶಕ ಸಿ.ಸೆಂಥಿಲ್ ರಾಜನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್, ಕರ್ನಾಟಕ ಭವನದ ಉಪಸ್ಥಾನಿಕ ಆಯುಕ್ತರಾದ ಅನೀಸ್ .ಕೆ.ಜಾಯ್, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಸಂಚಾರಿ ವಿಜಯ್, ನವದೆಹಲಿ ವಿಜಯಕರ್ನಾಟಕದ ಹಿರಿಯ ಸಹಾಯಕ ಸಂಪಾದಕ ಡಿ.ಉಮಾಪತಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್ ಭಾಗವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
 
 
ಉತ್ಸವದ ಉದ್ಘಾಟನಾ ಚಿತ್ರವಾಗಿ ರಾಮ್‍ರೆಡ್ಡಿ ನಿರ್ದೇಶನದ ‘ತಿಥಿ’ ಪ್ರದರ್ಶನಗೊಳ್ಳಲಿದೆ. ಉತ್ಸವದ 16, 17 ಮತ್ತು 18 ನೇ ಏಪ್ರಿಲ್ 2016 ಮೂರೂ ದಿನ ತಲಾ 3 ಚಿತ್ರ ಪ್ರದರ್ಶನಗಳಿರುತ್ತವೆ. ಪ್ರದರ್ಶನ ಸಮಯ ಕ್ರಮವಾಗಿ 11.00 ಗಂಟೆ – ಮಧ್ಯಾಹ್ನ 2.30 ಹಾಗೂ 6.30 ಗಂಟೆ. 16 ರಂದು ತಿಥಿ, ನಾನು ಅವನಲ್ಲ ಅವಳು ಮತ್ತು ರಂಗಿತರಂಗ ಚಿತ್ರಗಳು, 17 ರಂದು ಹರಿವು, ವಿದಾಯ, ಮತ್ತು ಕೃಷ್ಣಲೀಲಾ ಚಿತ್ರಗಳು 18 ರಂದು ಮಿ.ಅಂಡ್ ಮಿಸೆಸ್ ರಾಮಾಚಾರಿ, ಫಸ್ಟ್ ರ್ಯಾಂಕ್ ರಾಜು ಮತ್ತು ಕೊನೆಯದಾಗಿ ಶಿವಲಿಂಗ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

LEAVE A REPLY

Please enter your comment!
Please enter your name here