ದುಷ್ಕರ್ಮಿಯ ಅಟ್ಟಹಾಸ

0
267

 
ವರದಿ: ಲೇಖಾ
ವಿಕಲಾಂಗರನ್ನು ಚಾಕುವಿನಿಂದ ಇರಿದು ಹತ್ಯೆ
ವಿಕಲಾಂಗರ ಆಶ್ರಮದ ಮೇಲೆ ದಾಳಿ ಮಾಡಿದ ದುಷ್ಕರ್ಮಿಯೋರ್ವ 19 ಮಾನಸಿಕ ಅಸ್ವಸ್ಥರನ್ನು ಚಾಕುವಿನಿಂದ ಇರಿದು ಕೊಂದು ಹಾಕಿದ ಘಟನೆ ಜಪಾನಿನಲ್ಲಿ ನಡೆದಿದೆ.
 
 
ಜಪಾನ್ ರಾಜಧಾನಿ ಟೋಕಿಯೋದ ಸಮಿಪವಿರುವ ಸಗಾಮಿಹಾರ ಪ್ರದೇಶದಲ್ಲಿರುವ ವಿಕಲಾಂಗ ಮತ್ತು ಮಾನಸಿಕ ಅಸ್ವಸ್ಥರ ಆಶ್ರಮದೊಳಕ್ಕೆ ಏಕಾಏಕಿ ನುಗ್ಗಿದ ದುಷ್ಕರ್ಮಿ ತನ್ನ ಬಳಿ ಇದ್ದ ಚಾಕುವಿನಿಂದ ಮನಬಂದಂತೆ ಸಿಕ್ಕಸಿಕ್ಕವರಿಗೆ ಚುಚ್ಚಿ ದಾರುಣವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಸುಮಾರು 19ಮಂದಿ ಸ್ಥಳದ್ಲಲೇ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
 
 
 
ಪೊಲೀಸರು ಸ್ಥಳಕ್ಕೆ ಆಗಮಿಸಿ ದುಷ್ಕರ್ಮಿಯನ್ನು ವಶಕ್ಕೆ ಪಡೆದಿದ್ದಾರೆ. 26 ವರ್ಷದ ಬಂಧಿತ ಆರೋಪಿ ಈ ವಿಕಲಾಂಗಧಾಮದ ಹಳೆಯ ನೌಕರನಾಗಿದ್ದ ಎಂದು ತಿಳಿದುಬಂದಿದೆ.
 
 
29 ತುರ್ತು ವೈದ್ಯಕೀಯ ಸೇವಾ ಘಟಕಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಪಾನ್ ಇತಿಹಾಸದಲ್ಲೇ ಇದೊಂದು ಭಯಂಕರ ಕೃತ್ಯ ಎನ್ನಲಾಗಿದೆ.

LEAVE A REPLY

Please enter your comment!
Please enter your name here